NEWSನಮ್ಮರಾಜ್ಯರಾಜಕೀಯಸಿನಿಪಥ

ಅತ್ತಹಳ್ಳಿಯಲ್ಲಿ ನವರಸ ನಾಯಕ ಜಗ್ಗೇಶ್‌ಗೆ ಘೇರಾವ್‌ ಹಾಕಿದ ದರ್ಶನ್‌ ಅಭಿಮಾನಿಗಳು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಿನಿಸುದ್ದಿ
ತಿ.ನರಸೀಪುರ: ನವರಸ ನಾಯಕ ಜಗ್ಗೇಶ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಘೇರಾವ್ ಮಾಡಿದ ಘಟನೆ ತಾಲೂಕಿನ ಅತ್ತಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ತಾಲೂಕಿನ ಅತ್ತಹಳ್ಳಿ ಗ್ರಾಮದಲ್ಲಿ ತೋತಾಪುರಿ ಸಿನಿಮಾ ಚಿತ್ರೀಕರಣಕ್ಕೆಂದು ಆಗಮಿಸಿದ ಜಗ್ಗೇಶ್ ಅವರನ್ನು ಸುತ್ತುವರಿದ ದರ್ಶನ್ ಅಭಿಮಾನಿಗಳು, ನಮ್ಮ ದರಶನದದ ಬಗ್ಗೆ ಮತ್ತು ಅಭಿಮಾನಿಗಳ ಬಗ್ಗೆ ಕಟ್ಟದಾಗಿ ಮಾತನಾಡಿದ್ದೀರಿ ಆದ್ದರಿಂದ ನೀವು ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದರು.

ಇದರಿಂದ ಸ್ವಲ್ಪ ವಿಚಲಿತರಾದ ಜಗ್ಗೇಶ್‌ ಇಲ್ಲಪ್ಪ ನಾನು ಅವರ ಬಗ್ಗೆ ಮಾತನಾಡಿಲ್ಲ. ನಾನು ಹೇಳಿರುವುದು ವೆಬ್‌ಡಿಸೈನರ್‌ ಬಗ್ಗೆ ಮಾತನಾಡಿದ್ದು, ಅವರ ಹೆಸರು ಕೂಡ ದರ್ಶನ್‌ ಎಂದು ಹೇಳಿದರೂ ಅಭಿಮಾನಿಗಳು ಅವರ ಮಾತನ್ನು ಆಲಿಸದೆ. ಕ್ಷಮೆ ಕೇಳಲೇ ಬೇಕು ಎಂದು ಪಟ್ಟು ಹಿಡಿದರು.

ಅದಕ್ಕೆ ಸ್ಪಷ್ಟೀಕರಣ ನೀಡಿದ ಜಗ್ಗೇಶ್ ಇದೊಂದು ಮಾಧ್ಯಮ ಸೃಷ್ಟಿ, ನನ್ನ ಮತ್ತು ದರ್ಶನ್‌ ಸಂಬಂಧವನ್ನು ಹಾಳು ಮಾಡಲು ಈ ರೀತಿ ಪಿತೂರಿಸಿ ನಡೆಸಿದೆ. ಅಲ್ಲದೆ ಚಿತ್ರರಂಗಕ್ಕೆ ರಾಜಕೀಯ ಪ್ರವೇಶವಾಗಿದ್ದು, ಹಾಳಾಗಿ ಹೋಗಿದೆ ಎಂದು ಹೇಳಿದರು.

ಇನ್ನು ಇದು ಮಾಧ್ಯಮ ಸೃಷ್ಟಿಯಾಗಿರುವುದರಿಂದ ನನ್ನ ಪಾತ್ರವಿಲ್ಲ ಎಂದು ಮನವೊಲಿಸಲು ಯತ್ನಿಸಿದರಾದರೂ ಅಭಿಮಾನಿಗಳ ಕೋಪ ತಗ್ಗಲಿಲ್ಲ. ಸರಿ ಆ ಆಡಿಯೋದಲ್ಲಿ ಇರುವ ಧ್ವನಿ ನನ್ನದೇ ಎಂದಾದರೆ ನಾನು ನಿಮ್ಮ ಬಳಿ ಕ್ಷಮೆಯಾಚಿಸುತ್ತೇನೆ. ನಾವೆಲ್ಲರೂ ದರ್ಶನ್ನನ್ನು ಬಹಳ ಪ್ರೀತಿಸುತ್ತೇವೆ. ಇಂಥದನ್ನು ದೃಷ್ಟಿಸುವುದರಿಂದ ನಮ್ಮಿಬ್ಬರ ಸಂಬಂಧ ಹಾಳು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ನಟ ದರ್ಶನ್ ಮತ್ತು ಅಭಿಮಾನಿಗಳ ಬಗ್ಗೆ ಜಗ್ಗೇಶ್ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಸೋಮವಾರ ಚಿತ್ರೀಕರಣಕ್ಕೆಂದು ಬಂದ ನಟ ಜಗ್ಗೇಶ್ ಅವರಿಗೆ ದರ್ಶನ್ ಅಭಿಮಾನಿಗಳು ಕ್ಷಮೆ ಯಾಚಿಸುವಂತೆ ಒತ್ತಾಯಿಸಿ ಜಗ್ಗೇಶ್‌ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿಷಯ ತಿಳಿದ ಬನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...