ವಿಜಯಪಥ ಸಮಗ್ರ ಸುದ್ದಿ
ಶಿಡ್ಲಘಟ್ಟ ( ಚಿಕ್ಕಬಳ್ಳಾಪುರ ಜಿಲ್ಲೆ) : ನಗರ ಪೊಲೀಸ್ ಠಾಣೆ ಬಳಿ ಶನಿವಾರ ಮಧ್ಯಾಹ್ನ ರೌಡಿಶೀಟರ್ ಹಾಗೂ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಮ್ಜದ್ ಖಾನ್ (45) ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಗರ ಪೊಲೀಸ್ ಠಾಣೆ ಸಮೀಪ ರೈಲ್ವೆ ಬ್ರಿಡ್ಜ್ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಅಮ್ಜದ್ ಖಾನ್ ಬೈಕ್ಗೆ ಓಮ್ನಿ ವಾಹನ ಡಿಕ್ಕಿ ಹೊಡೆಸಿ ನಂತರ ದುಷ್ಕರ್ಮಿಗಳು ಲಾಂಗ್ನಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಈ ವೇಳೆ ಜನರ ಕಿರುಚಾಟ ಕೇಳಿಸಿಕೊಂಡ ಪೊಲೀಸ್ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಓಮ್ನಿ ವಾಹನದಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಈ ವೇಳೆ ಕಾನ್ಸ್ಟೇಬಲ್ ಒಬ್ಬರು ಲಾಠಿ ಬೀಸಿದ್ದು ಒಮ್ನಿ ವ್ಯಾನಿನ ಗಾಜು ಪುಡಿಯಾಗಿದೆ. ಪೊಲೀಸರು ದುಷ್ಕರ್ಮಿಗಳನ್ನು ಹಿಂಬಾಲಿಸಿದರು ತಪ್ಪಿಸಿಕೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸುಳಿವುಗಳು ಸಿಕ್ಕಿವೆ. ಹೀಗಾಗಿ ಶೀಘ್ರದಲ್ಲೇ ಕೊಲೆಗಾರರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.