NEWSರಾಜಕೀಯ

ರಾಜ್ಯದ ಜನರ ಸಾವಿನ ಜತೆ ಸರ್ಕಾರ ಸರಸ: ನಮಗೇ ಬೇಕಿಲ್ಲ ಗಂಟುಮುಖದ ಆಡಳಿತ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಗೆ ತುತ್ತಾದ ಅದೆಷ್ಟೋ ಜೀವಗಳು ದೇಹ ತ್ಯಜಿಸಿವೆ. ಆದರೂ ಸರ್ಕಾರ ನಡೆಸುತ್ತಿರುವ ದುರ್ಬುದ್ಧಿಯ ನಮಸ್ಸಿನ ವ್ಯಕ್ತಿಗಳು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ತನಗನ್ನಿಸಿದ್ದನ್ನು ಮಾಡಿಕೊಂಡು ಒಂದು ರೀತಿ ಮೊಂಡುತನದಲೇ ಆಡಳಿತ ನಡೆಸುತ್ತಿವೆ.

ಈ ರೀತಿ ಆಡಳಿತದಿಂದ ಜನಸಾಮಾನ್ಯ ದಿಕ್ಕೂತೋಚದಂತೆ ತನ್ನ ಕುಟುಂಬಕ್ಕೆ ಬರುತ್ತಿರುವ ಸಾವಿನ ಆಹ್ವಾನವನ್ನು ತಿರಸ್ಕರಿಸಲಾಗದೇ ಬಲವಂತವಾಗಿ ಸ್ವೀಕರಿಸುತ್ತಿದ್ದಾನೆ. ಇತ್ತ ಬೆಡ್‌, ಆಕ್ಸಿಜನ್‌, ಚಿಕಿತ್ಸೆ ಸಿಗದೇ ಮೃತಪಡುತ್ತಿರುವ ತನ್ನವರ ಮುಖವನ್ನು ಕೊನೆ ಘಳಿಗೆಯಲ್ಲಿ ನೋಡಲಾದೆ ಪರಿತಪ್ಪಿಸಿ, ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾನೆ.

ರಾಜ್ಯದ ಸಾಮಾನ್ಯನೂ ಸೇರಿ ಆರ್ಥಿಕವಾಗಿ ಬಲಾಢ್ಯರಾದವರು ಈ ಕೊರೊನಾ ವಿಶ್ವಮಾರಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಎಲ್ಲರಿಗೂ ಗುತ್ತಿಲ್ಲದ್ದಲ್ಲ. ಒಂದು ಕಡೆ ಉಸಿರಾಟದ ಸಮಸ್ಯೆ. ಇದನ್ನು ನಿವಾಸಿಕೊಂಡು ಜೀವ ಉಳಿಸಿಕೊಳ್ಳೋಣ ಎಂದರೆ ಜೀವವಾಯು ಸಿಗುತ್ತಿಲ್ಲ. ಅದು ಸಿಗುವಷ್ಟರಲ್ಲಿ ದೇಹಬಿಟ್ಟು ಆತ್ಮ ಹೋಗಿರುತ್ತದೆ. ಅದನ್ನು ಕಂಡು ಕೇಳಿದ ಮಂದಿ ತಮ್ಮವರನ್ನು ಕಳೆದುಕೊಂಡ ಭಯಾನಕ ಸ್ಥಿತಿಯನ್ನು ಕಂಡು ಹೌಹಾರುತ್ತಿದ್ದಾರೆ. ಆದರೆ ಸರ್ಕಾರದ ಈ ನಡೆಮುಂದೆ ಅಸಹಾಯಕರಾಗಿ ಮೃತ ದೇಹವನ್ನು ಯಾರಿಗೋ ಒಪ್ಪಿಸಿ ಭಾರವಾದ ದೇಹ ಮನಸ್ಸಿನಿಂದ ಮನೆಗೆ ಮರಳುತ್ತಿದ್ದಾರೆ.

ಇಂಥ ದಯನೀಯ ಸ್ಥಿತಿಗೆ ರಾಜ್ಯದ ಜನರನ್ನೂ ದೂಡುತ್ತಿರುವುದು ಯಾರು? ಜನರೇ ರಾತ್ರಿಕಂಡ ಬಾವಿಗೆ ಹಗಲಿನಲ್ಲಿ ಬೀಳುತ್ತಿದ್ದಾರೆಯೇ? ಕಂಡಿತ ಇಲ್ಲ ಮತ್ತೇನಾಗಿದೆ ಎಂದರೆ ಕೊರೊನಾ ಬಗ್ಗೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಹೀನಮನಸ್ಥಿತಿ ಹೊಂದಿರುವ ನಾಯಕರ ದಿವ್ಯ ನಿರ್ಲಕ್ಷ್ಯತನ. ಇವರ ಈ ನಡೆಯಿಂದಲೇ ರಾಜ್ಯದಲ್ಲಿ ಕೊರೊನಾ ಸಾವಿನ ಕೇಕೆ ಮುಂದುವರಿಸುತ್ತಿದೆ.

ಹೌದು! ರಾಜ್ಯಲ್ಲಿ ಇತರ ರಾಜ್ಯಗಳ ಸಿಎಂ ಮತ್ತು ಆಡಳಿತ ವರ್ಗ ತೆಗೆದುಕೊಂಡ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಜತೆಗೆ ರಾಜ್ಯದ ಜನರ ಬಗ್ಗೆಯೂ ದಿವ್ಯ ನಿರ್ಲಕ್ಷ್ಯ ತಳೆದಿದ್ದಾರೆ. ಈ ಎಲ್ಲದರ ಪರಿಣಾಮ ದಿನದಿಂದ ದಿನಕ್ಕೆ ಸಾವಿನ ಮನೆ ಸೇರುವವರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಇಷ್ಟಾದರೂ ಸಾಯುತ್ತಿರುವುದು ನಮ್ಮ ಕುಟುಂಬದರಾ? ಎಂಬಂತೆ ಮೌನವಾಗಿ ಗಂಟು ಮುಖದೊಂದಿಗೆ ರಾಜ್ಯದ ಆಡಳಿತದ ಸಿಎಂ ಕುರ್ಚಿಗೆ ಅಂಟಿಕೊಂಡು ಸಾಗುತ್ತಿರುವುದು ಯಾವ ಪುರುಷಾರ್ತಕ್ಕೆ?

ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸದ ಇಂತ ಸಿಎಂ, ಸಚಿವರು ನಮಗೆ ಬೇಕೆ? ಅದು ಇರಲಿ, ರಾಜ್ಯದ ಜನರನ್ನು ಸಾವಿನ ದವಡೆಗೆ ದೂಡುವುದಕ್ಕೆ ಇವರಿಗೆ ಅಧಿಕಾರ ಕೊಟ್ಟವರು ಯಾರು? ಇಂಥ ನೀಚ ಮನಸ್ಸಿನ ಸ್ಥಿತಿಗೆ ತಲುಪಲು ಯಾವ ನೀಚಮನಸ್ಸು ಪ್ರೇರೇಪಣೆ ನೀಡುತ್ತಿದೆ? ರಾಜ್ಯದ ಜನರ ಜೀವ ಮತ್ತು ಜೀವನದ ಜತೆ ಚೆಲ್ಲಾಟವಾಡಲೆಂದೇ ಇವರನ್ನು ರಾಜ್ಯದ ಜನರು ಆಯ್ಕೆ ಮಾಡಿ ಕಳುಹಿಸಿರುವುದಾ?

ಈ ಎಲ್ಲದಕ್ಕೂ ಉತ್ತರ ನೀಡಬೇಕಾದ ಸಿಎಂ ಕಂಡು ಕಾಣದಂತೆ ವರ್ತಿಸುತ್ತಿರುವುದೂ ಏತಕ್ಕೆ? ಇನ್ನೂ ಗಂಟುಮುಖದೊಂದಿಗೆ ಕುರ್ಚಿಗೆ ಅಂಟುಕೊಂಡು ಕೂರಲು ಇವರಿಗೆ ಯಾವ ನೈತಿಕ ಹಕ್ಕಿದೆ. ಇನ್ನಾದರೂ ಇಂಥ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಗಟ್ಟಿ ನಿಲುವು ತಾಳಬೇಕು. ಇಲ್ಲದಿದ್ದರೆ ರಾಜ್ಯದ ಪ್ರತಿಯೊಬ್ಬರೂ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ನಿಮ್ಮನ್ನು ಹೊರಗೆಳೆದುತಂದು ನಡು ರಸ್ತೆಯಲ್ಲಿ ನಿಲ್ಲಿಸಿ ಕಲ್ಲಿನಿಂದ ಹೊಡೆದು ಹೊಡೆದು ಕ್ರೂರವಾಗಿ ನಾಯಿಗಿಂತ ಕಡೆಯಾಗಿ ಭಸ್ಮ ಮಾಡುವ ಕಾಲ ದೂರವೇನಿಲ್ಲ.

ನೀವು ಜನರಿಗಾಗಿ ಇರುವುದು. ಜನರು ನಿಮಗಾಗಿ ಇಲ್ಲ ಎಂಬುದನ್ನು ನೀವು ಅರಿತುಕೊಳ್ಳಬೇಕು. ನಮ್ಮ ಯೋಗಕ್ಷೇಮ ನೋಡಿಕೊಳ್ಳಲು ಒಂದು ಶಕ್ತಿ ಬೇಕು ಎಂಬ ಕಾರಣಕ್ಕೆ ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆಯೇ ವಿನಃ ಅಧಿಕಾರ ಸಿಕ್ಕ ಕೂಡಲೇ ಹಣ, ಆಸ್ತಿ, ಅಂತಸ್ತು ಮಾಡಿಕೊಂಡು ಸರ್ವಾಧಿಕಾರಿಯಂತೆ ವರ್ತಿಸಿ ಎಂದಲ್ಲ ಎಂಬುದನ್ನು ಮನಗಾಣಬೇಕು.

ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿಯವರು ನಿಮ್ಮ ಆಡಳಿತದ ವೈಖರಿ ಬಗ್ಗೆ ಸಿಡಿದೆದ್ದು ಪತ್ರ ಚಳವಳಿಯನ್ನು ಸಾಮಾಜಿಕ ಜಾಲ ತಾಣದ ಮೂಲಕ ಮಾಡುತ್ತಿದ್ದಾರೆ. ಹೀಗಾಗಿ ಇನ್ನಾದರೂ ನೀವು ಕಾಮಿಡಿ ಲಾಕ್‌ಡೌನ್‌ ಮಾಡಿರುವುದನ್ನು ಬಿಟ್ಟು ಗೌರಯುತವಾದ ಒಂದು ತೂಕದ ಲಾಕ್‌ಡೌನ್‌ ಮಾಡಿ. ಇಲ್ಲದಿದ್ದರೆ ರಾಜ್ಯದ ಇನ್ನಷ್ಟು ಜನರು ಜೀವಕಳೆದುಕೊಳ್ಳುತ್ತಾರೆ. ಇದು ನಿಮಗೆ ಮನವಿಯಲ್ಲ ಆಗ್ರಹ. ಏಕೇಂದರೆ ನಾವು ಮನವಿ ಮಾಡಲು ನಿಮ್ಮ ಬಳಿ ಭಿಕ್ಷೆ ಬೇಡುತ್ತಿಲ್ಲ. ಇದನ್ನು ನೀವು ಅರಿತುಕೊಳ್ಳಬೇಕು. ಇಲ್ಲದಿದ್ದರೆ ……!?

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...