Vijayapatha – ವಿಜಯಪಥ
Friday, November 1, 2024
NEWSರಾಜಕೀಯ

ಕೊರೊನಾ ಸೋಂಕಿತರ ಸಾವಿಗೆ ಬಿಜೆಪಿ ಶಾಸಕರು, ಮಂತ್ರಿಗಳೇ ನೇರ ಕಾರಣ: ಶರತ್ ಖಾದ್ರಿ ಆಕ್ರೋಶ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಎರಡನೇ ಅಲೆಯ ಮಹಾ ದುರಂತದ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕೆಲ ವಾರಗಳಿಂದ ಬಿಜೆಪಿ ಶಾಸಕರು ಹಾಗೂ ಮಂತ್ರಿಗಳು ರಾಜ್ಯದ ಕೊರೊನಾ ನಿರ್ವಹಣೆಯ ಆಡಳಿತ ಯಂತ್ರದಲ್ಲಿ ನೇರವಾಗಿ ಹಸ್ತಕ್ಷೇಪ ನಡೆಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಶನಿವಾರ ನಗರದ ಪಕ್ಷದ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲ ದಿವಸಗಳ ಹಿಂದೆ ಕಲಬುರಗಿ ಸಂಸದ ಉಮೇಶ್ ಜಾಧವ್ ರಾತ್ರೋ ರಾತ್ರಿ ಬೆಂಗಳೂರಿನ ಔಷಧ ನಿಯಂತ್ರಣ ಇಲಾಖೆಯ ವಾರ್ ರೂಮ್ ಗೆ ನುಗ್ಗಿ ತಮಗೆ ಬೇಕಾದಷ್ಟು ರೆಮಿಡಿ ಸಿವಿಯರ್ ಔಷಧಗಳನ್ನು ತೆಗೆದುಕೊಂಡು ಹೋಗಿದ್ದರು. ಇದೇ ರೀತಿ ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆಯ ವಿಚಾರದಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳೊಂದಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಸಾಕಷ್ಟು ಮಾತನಾಡಿರುವುದು ಹಾಗೂ ಹಸ್ತಕ್ಷೇಪ ನಡೆಸಿರುವುದು ಅವರ ಹೇಳಿಕೆಗಳಲ್ಲಿ ತಿಳಿದುಬರುತ್ತದೆ. ಇದರ ಪರಿಣಾಮವಾಗಿ 28ಕ್ಕೂ ಹೆಚ್ಚು ಅಮಾಯಕರು ಬಲಿಯಾಗಿರುವುದು ನಮ್ಮ ಕಣ್ಣ ಮುಂದೆ ಇದೆ ಎಂದರು.

ಇದೇ ರೀತಿ ನಿನ್ನೆ ಮಂಡ್ಯದ ಮಂತ್ರಿ ನಾರಾಯಣಗೌಡ ರಾತ್ರೋರಾತ್ರಿ ಮೈಸೂರಿನ ಆಮ್ಲಜನಕ ತಯಾರಿಕಾ ಘಟಕಕ್ಕೆ ನುಗ್ಗಿ ತಮಗೆ ಬೇಕಾದಷ್ಟು ಸಿಲಿಂಡರ್‌ಗಳನ್ನು ಪೊಲೀಸರ ಬೆಂಗಾವಲಿನ ಸಮೇತ ಹೊತ್ತೊಯ್ದ ಘಟನೆ ಈಗಷ್ಟೇ ತಿಳಿದು ಬಂದಿದೆ. ಈ ಬಗ್ಗೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಇನ್ನು ಮುಂದೆ ನಾವು ಹಾದಿಬೀದಿಯಲ್ಲಿ ಹೊಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

ಇನ್ನು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ವಾರ್ ರೂಮ್ ಗೆ ನೇರವಾಗಿ ನುಗ್ಗಿ ತಮಗೆ ಬೇಕಾದವರಿಗೆ ಬೆಡ್ ಗಳನ್ನು ಬ್ಲಾಕ್ ಮಾಡುವ ದಂಧೆಯಲ್ಲಿ ತೊಡಗಿಕೊಂಡಿರುವುದು ಪ್ರತಿದಿವಸ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಇದೇ ಹಾದಿಯಲ್ಲಿ ಬೆಂಗಳೂರಿನ ಪ್ರಮುಖ ಬಿಜೆಪಿ ಮಂತ್ರಿಗಳು ಸಹ ನಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಈ ಎಲ್ಲಾ ಘಟನೆಗಳನ್ನು ಗಮನಿಸಿದಾಗ ಬಿಜೆಪಿಯ ಮಂತ್ರಿಗಳು ಶಾಸಕರಿಂದ ಆಡಳಿತ ಯಂತ್ರದಲ್ಲಿ ಹಸ್ತಕ್ಷೇಪ, ಧಮ್ಕಿ ಬೆದರಿಕೆ ಮುಂತಾದವುಗಳಿಂದಾಗಿ ಕೊರೊನಾ ಸಾವು ನೋವುಗಳಲ್ಲಿ ತೀವ್ರ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿ ನಿನ್ನೆ ಒಂದೇದಿನ ಅಮಾಯಕ 592 ಜನ ಬಲಿಯಾಗಿದ್ದು ತೀವ್ರ ಕಳವಳವನ್ನು ಉಂಟು ಮಾಡುತ್ತಿದೆ. ಈ ರೀತಿಯ ರಾಜಕಾರಣಿಗಳ ಹಸ್ತಕ್ಷೇಪಗಳಿಂದಾಗಿ ರೆಮಿಡಿ ಸಿವರ್ ಇತ್ಯಾದಿ ಔಷಧಗಳು, ಆಕ್ಸಿಜನ್ ಗಳು ಇಂದು ಕಾಳಸಂತೆ ಕೋರರ ಪಾಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನು ಕಾರ್ಯನಿರ್ವಹಿಸಲು ಬಿಟ್ಟು ಅವರನ್ನು ಹೆದರಿಸಿ ಬೆದರಿಸಿ ತಮ್ಮ ರಾಜಕಾರಣಕ್ಕೆ ಈ ಮಹಾದುರಂತ ಸಮಯವನ್ನು ಉಪಯೋಗಿಸಿಕೊಳ್ಳುತ್ತಿರುವುದು ಬಿಜೆಪಿಗರ ದಿವಾಳಿತನದ ಸಂಕೇತ ವಾಗಿದೆ. ಕಳೆದ ಬಾರಿಯೂ ಸಹ ಇದೇ ರೀತಿ ಕಾರ್ಮಿಕ ಇಲಾಖೆಯ ಆಹಾರದ ಕಿಟ್ ಗಳ ಮೇಲೆ ತಮ್ಮ ನಾಮ ಫಲಕಗಳನ್ನು ಹಾಕಿಕೊಂಡು ವಿತರಣೆ ಮಾಡಿದ್ದು ನಮಗೆಲ್ಲ ಗೊತ್ತೇ ಇದೆ. ಈ ಬಾರಿಯೂ ತಮ್ಮ ರಾಜಕೀಯ ತೆವಲಿಗಾಗಿ ಈ ರೀತಿಯ ಚಿಲ್ಲರೆ ಕೆಲಸಗಳಲ್ಲಿ ತೊಡಗಿರುವುದು ದುರದೃಷ್ಟಕರ ಸಂಗತಿ.

ಯಾವುದೇ ರಾಜಕಾರಣಿಯು ಸರ್ಕಾರದ ಆಡಳಿತ ಯಂತ್ರದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ಆದೇಶವನ್ನು ಸರ್ಕಾರ ಹೊರಡಿಸಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಖಾದ್ರಿ ಒತ್ತಾಯಿಸಿದರು.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ