CrimeNEWSನಮ್ಮರಾಜ್ಯ

ಆಂಬುಲೆನ್ಸ್‌ ಸಿಗದೇ ಆಟೋದಲ್ಲೇ ಮಳವಳ್ಳಿಗೆ ತಾಯಿಯ ಶವ ತೆಗೆದುಕೊಂಡು ಹೋದ ಶಿವಕುಮಾರ್‌

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಯುವಕನೊಬ್ಬ ತನ್ನ ತಾಯಿಯ ಮೃತ ದೇಹವನ್ನು ಆಟೋದಲ್ಲಿರಿಸಿಕೊಂಡು ಬೆಂಗಳೂರಿನಿಂದ ಮಂಡ್ಯದ ಮಳವಳ್ಳಿಗೆ ಪ್ರಯಾಣಿಸಿದ ಕರುಣಾಜನಕ ಸ್ಥಿತಿಗೆ ರಾಜ್ಯದಲ್ಲಿ ಸರ್ಕಾರ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.

72 ವರ್ಷದ ಶಾರದಮ್ಮ ಮಧುಮೇಹ ರೋಗಿದ್ದರು. ಮಗನನ್ನು ನೋಡಲು ಕೆಲ ದಿನಗಳ ಹಿಂದೆ ದೊಮ್ಮಲೂರಿನಲ್ಲಿದ್ದ ಮಗನ ಮನೆಗೆ ಬಂದಿದ್ದರು, ಆದರೆ ಸೋಮವಾರ ಅವರಿಗೆ ಬೆಳಗಿನ ಉಪಾಹಾರ ಸೇವಿಸಲು ಸಾಧ್ಯವಾಗಲಿಲ್ಲ. ಉಸಿರಾಟದ ತೊಂದರೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಕೂಡಲೇ ದಿನನಿತ್ಯ ಸೇವಿಸುತ್ತಿದ್ದ ಔಷಧ ಕೊಟ್ಟಿದ್ದಾರೆ. ಆದರೂ ಅವರು ಕುಸಿದು ಬಿದ್ದಿದ್ದಾರೆ. ಶಿವಕುಮಾರ್ ಮತ್ತು ಉದಯ್ ಕೂಡಲೇ ಅವರನ್ನು ಸಮೀಪದ ಕ್ಲಿನಿಕ್‌ಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಚಿನ್ಮಯ ಮಿಷನ್ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಅಲ್ಲಿಗೆ ಕರೆದೊಯ್ಯುವ ವೇಳೆಗೆ 1 ಗಂಟೆ ಸಮಯ ಕಳೆದು ಹೋಗಿತ್ತು. ಅಷ್ಟರಲ್ಲಾಗಲೇ ಶಾರದಮ್ಮ ಮೃತ ಪಟ್ಟಿದ್ದರು.

ಈ ವೇಳೆ ಶವವನ್ನು ಮಳವಳ್ಳಿಯ ತನ್ನ ಸ್ವ ಗ್ರಾಮಕ್ಕೆ ತೆಗೆದುಕೊಡು ಹೋಗಲು ಮುಂದಾಗಿದ್ದಾರೆ. ಹೀಗಾಗಿ ಹಲವು ಕಡೆಯ ಆಂಬುಲೆನ್ಸ್‌ಗಳಿಗೆ ಕರೆ ಮಾಡಿದ್ದಾರೆ. ಆಗ ಆಂಬುಲೆನ್ಸ್‌ ಕರೆ ಲೈನ್‌ಗಳು ಬ್ಯುಸಿಯಾಗಿರುವ ಬಗ್ಗೆ ರಿಯಾಕ್ಷನ್‌ ಬಂದಿದೆ.

ನಂತರ ವಿಧಿ ಇಲ್ಲದೇ ತನ್ನ ತಾಯಿಯ ಶವವನ್ನು ಸ್ನೇಹಿತ ಉದಯ್ ಆಟೋದಲೇ ತೆಗೆದುಕೊಂಡು ಹೋಗುತ್ತಿದ್ದಾಗ ನಾಯಂಡಹಳ್ಳಿ ಜಂಕ್ಷನ್ ಬಳಿ ಆಟೋ ತಡೆದ ಪೊಲೀಸರು ವಿಚಾರಿಸಿದ್ದಾರೆ. ಬಳಿಕ ಅವರು ಕೂಡ ಆಂಬುಲೆನ್ಸ್ ಗಾಗಿ 45 ನಿಮಿಷ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ಪೊಲೀಸರು ಸರಿ ಆಟೋದಲ್ಲೇ ಹೋಗಿ ಎಂದು ಹೇಳಿದ್ದಾಗಿ ಚಾಲಕ ಉದಯ್ ಹೇಳಿದ್ದಾರೆ.

ಶಿವಕುಮಾರ್ ತಾಯಿಯ ಶವನ್ನು ಆಟೋದಲ್ಲಿ ಹಿಡಿದು ಕುಳಿತು ಮಳವಳ್ಳಿ ತಲುಪಿದ್ದಾನೆ. ಮಳೆಯಿಂದಾಗಿ ಶವ ಅರ್ಧ ಒದ್ದೆಯಾಗಿತ್ತು. ತನ್ನ ತಾಯಿಯನ್ನು ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರು ಪ್ರಯೋಜನವಾಗಲಿಲ್ಲ. ಇನ್ನು ಶವ ಸಾಗಿಸಲು ಒಂದು ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗದಷ್ಟು ರಾಜ್ಯದಲ್ಲಿ ಆಡಳಿತ ಶಕ್ತವಾಗಿಲ್ಲ ಎಂದರೆ ಏನರ್ಥ? ರಾಜ್ಯ ಸರ್ಕಾರ ಸತ್ತು ಹೋಗಿದೆ ಎಂದಲ್ಲವೇ ಎಂದು ಮಳವಳ್ಳಿಯಲ್ಲಿ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...