ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: 120 ಟನ್ ಆಮ್ಲಜನಕ ತುಂಬಿದ ಟ್ಯಾಂಕರ್ ಗಳನ್ನು ಹೊತ್ತುಕೊಂಡು ಸೋಮವಾರ ಜಮ್‌ಶೆಡ್‌ಪುರ ದಿಂದ ಹೊರಟಿದ್ದ ರೈಲು ಮಂಗಳವಾರ ಬೆಳಗ್ಗೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಸುರಕ್ಷಿತವಾಗಿ ತಲುಪಿದೆ.
ಆಕ್ಸಿಜನ್ ಸ್ಪೆಷಲ್ ವಿಶೇಷ ರೈಲಿನಲ್ಲಿ 120 ನ್ ಆಮ್ಲಜನಕ ತುಂಬಿದ ಟ್ಯಾಂಕರ್ ರೈಲು ಕರ್ನಾಟಕಕ್ಕೆ ಬರುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಜನತೆಗೆ ಕೊಂಚ ನೆಮ್ಮದಿ ತರಿಸಿದೆ.
ಗ್ರೀನ್ ಕಾರ್ಡ್ ಮೂಲಕ ಜಮದದಶೆಡ್‌ಪುರದಿಂದ ಸೋಮವಾರ ಬೆಳಗಿನಜಾವ ಹೊರಟಿದ್ದ ರೈಲು 30 ತಾಸಿನ ಬಳಿಕ ಇಂದು ಬೆಳಗ್ಗೆ 9.30ಕ್ಕೆ ವೈಟ್‌ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ತಲುಪಿತು. ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಆಕ್ಸಿಜನ್ ರವಾನಿಸಲಾಗುವುದು.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಪಿಯೂಸ್ ಗೊಯಲ್ ಕೋವಿಡ್ ರೋಗಿಗಳ ಚಿಕಿತ್ಸೆಗೆ ಇದರಿಂದ ಅನುಕೂಲ ಆಗಲಿದೆ ಎಂದಿದ್ದಾರೆ. ಇನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿ ಸಕಾಲಿಕ ನೆರವಿಗೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಎಂದಿದ್ದಾರೆ.