ವಿಜಯಪಥ ಸಮಗ್ರ ಸುದ್ದಿ
ಸಿಯೋಲ್: ವಿಶ್ವ ಆರೋಗ್ಯ ಸಂಸ್ಥೆಗೆ ನಮ್ಮ ದೇಶದಲ್ಲಿ ಈವರೆಗೂ ಒಂದೇ ಒಂದು ಕೊರೊನಾ ಪ್ರಕರಣಗಳು ದಾಖಲಾಗಿಲ್ಲ ಎಂದು ದೇಶವೊಂದು ಮಾಹಿತಿ ನೀಡಿದ್ದು ಆಶ್ಚರ್ಯವನ್ನುಂಟು ಮಾಡಿದೆ.\
ಹೌದು! ಏಪ್ರಿಲ್‌ನಿಂದ ಈ ವರೆಗೂ ಉತ್ತರ ಕೊರಿಯಾದಲ್ಲಿ 25,986 ಜನರನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಈ ವರೆಗೂ ಒಂದೇ ಒಂದೂ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತವಿರುವ ಉತ್ತರ ಕೊರಿಯಾ ತಿಳಿಸಿದೆ.
ಏಪ್ರಿಲ್ 23-29ರ ಅವಧಿಯಲ್ಲಿ ಪರೀಕ್ಷಿಸಲಾದ 751 ಜನರ ಪೈಕಿ 139 ಜನರಿಗೆ ಇನ್ಫ್ಲುಯೆನ್ಸ ಮಾದರಿಯ ರೋಗ ಲಕ್ಷಣಗಳು ಅಥವಾ ತೀವ್ರ ಉಸಿರಾಟದ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ ಇದು ಕೊರೊನಾ ಸೋಂಕು ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ಉತ್ತರ ಕೊರಿಯಾ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.
ಇಡೀ ಜಗತ್ತೇ ಮಾರಕ ಕೊರೊನಾ ಸೋಂಕಿನಿಂದ ತತ್ತರಿಸುತ್ತಿದ್ದು, ಸೋಂಕಿತರ ನಿರ್ವಹಣೆ ಸಾಧ್ಯವಾಗದೇ ಪರದಾಡುತ್ತಿವೆ, ಈ ಸಮಯದಲ್ಲಿ ಈ ದೇಶದಲ್ಲಿ ಒಂದೇ ಒಂದು ಸೋಂಕು ಪ್ರಕರಣವಿಲ್ಲವೇ!? ಎಂದು ಆಶ್ಚರ್ಯಕರ ಪ್ರಶ್ನೆ ಮೂಡುವುದು ಸಹಜ.
ಆದರೆ, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತವಿರುವ ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ದಾಖಲಾಗಿಲ್ಲ ಎಂಬ ಬಗ್ಗೆ ಉತ್ತರ ಕೊರಿಯಾ ಸರ್ಕಾರವೇ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದೆ.
ಜಗತ್ತಿನಲ್ಲಿ ಮೊದಲು ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದೇ ಚೀನಾದಲ್ಲಿ. ಹೀಗಿರುವಾಗ ಉತ್ತರ ಕೊರಿಯಾದಲ್ಲಿ ಸೋಂಕಿತರು ಇಲ್ಲ ಎಂಬ ಕಿಮ್ ಜಾಂಗ್ ಉನ್ ಸರ್ಕಾರದ ಹೇಳಿಕೆ ಅನುಮಾನಕ್ಕೀಡಾಗಿದೆ. ಇನ್ನು ಒಂದೇ ಒಂದು ಕೊರೊನಾ ಸೋಂಕು ಇಲ್ಲ ಎಂಬ ಈ ಮಾಹಿತಿ ಕೇಳಿ ಜಗತ್ತು ಅನುಮಾನದಿಂದ ನೋಡುತ್ತಿದೆ.
ಇನ್ನು ಜಗತ್ತಿನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಉತ್ತರ ಕೊರಿಯಾ ವಿದೇಶಗರಿಗೆ ತನ್ನ ದೇಶದ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಅಲ್ಲದೆ ಪ್ರವಾಸೋದ್ಯಮ ಬಂದ್ ಮಾಡಿತ್ತು. ಈ ಹಿಂದೆ ರೋಗಲಕ್ಷಣಗಳಿರುವ ತನ್ನದೇ ದೇಶದ ಪ್ರಜೆಗಳನ್ನೂ ಕೂಡ ದೇಶ ಪ್ರವೇಶಕ್ಕೆ ನಿರ್ಬಂಧ ಹೇರಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.