ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಜನ ಸಾಮಾನ್ಯರು ನಿರ್ಗತಿಕರು ಅವೈಜ್ಞಾನಿಕ ಲಾಕ್ ಡೌನ್ ಜಾರಿಯಿಂದ ಅಳಲು ತೋಡಿಕೊಂಡರು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ! ಇದರ ನಡುವೆ ಈ ನಾಡಿನ ಜನಸಾಮಾನ್ಯರ ಬದುಕಿನ ಬಗ್ಗೆ ಸದಾ ಚಿಂತಿಸುವ ಜನಸಾಮಾನ್ಯರ ಪಕ್ಷ ಜೆಡಿಎಸ್ ಪಕ್ಷದಿಂದ ನಮ್ಮ ಅಪ್ಪಾಜಿ ಕ್ಯಾಂಟೀನ್ನಲ್ಲಿ ನಿತ್ಯ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹೆಸರಿನಲ್ಲಿ ಉಚಿತ ಊಟ ನೀಡುವ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಚಾಲನೆ ನೀಡಲಿದ್ದಾರೆ. ಸೋಮವಾರದಿಂದ ಅಪ್ಪಾಜಿ ಮೊಬೈಲ್ ಕ್ಯಾಂಟೀನ್ ಗೆ ಚಾಲನೆ ನೀಡಲಿದ್ದು ಬಡವರು, ನಿರ್ಗತಿಕರಿಗೆ ಉಚಿತ ಊಟ ಸಿಗಲಿದೆ ಎಂದು ಶರವಣ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈಗಾಗಲೇ ಅಪ್ಪಾಜಿ ಮೊಬೈಲ್ ಕ್ಯಾಂಟೀನ್ ನಲ್ಲಿ ಶರವಣ ₹5 ಊಟ ನೀಡುತ್ತಿದ್ದಾರೆ. ಇದೀಗ ಸಂಕಷ್ಟಕ್ಕೆ ಸಿಲುಕಿರುವ ಬಡವರು, ನಿರ್ಗತಿಕರಿಗೆ ಉಚಿತವಾಗಿ ನೀಡಲು ನಿರ್ಧಾರ ಮಾಡಿದ್ದಾರೆ.
ಬರುವ ಸೋಮವಾರದಿಂದ ಬಡವರ್ಗದ ಜನರು, ವಲಸಿಗರು, ಕೂಲಿ ಕಾರ್ಮಿಕರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.