ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರೇಹಳ್ಳಿ ಗ್ರಾಮದ ಜನರು ತಮ್ಮ ಮನೆಯ ಸುತ್ತ ಮುತ್ತ ತಾವೇ ಸ್ವಚ್ಛ ಮಾಡಿಕೊಂಡು ಇತರ ಗ್ರಾಮಸ್ಥರಿಗೆ ಮಾದರಿಯಾಗಿದ್ದಾರೆ.
ಹೌದು! ನನ್ನ ಮನೆ, ನನ್ನ ಬಟ್ಟೆ, ನಮ್ಮವರು, ನಾನು, ನನ್ನದು ಎಂದು ಬದುಕುವ ಜನ ಸ್ವಾರ್ಥಿಗಳಾಗೋಗ್ತಾರೆ. ಆದರೆ, ಈ ಸ್ವಾರ್ಥದಿಂದ ಲಾಭವೂ ಆಗುತ್ತೆ ಅನ್ನೋ ಒಂದು ಕಾನ್ಸೆಪ್ಟ್ ರಿಯಲ್ ಸ್ಟಾರ್ ಉಪೇಂದ್ರ ಅವರು ಸಿನಿಮಾದಲ್ಲಿ ತೋರಿಸಿದಂತೆ ಹಳ್ಳಿಯ ಜನರು ತಮ್ಮ ಹಳ್ಳಿಯನ್ನು ತಾವೇ ಸ್ವಚ್ಛ ಮಾಡಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಈಗ ಗ್ರಾಮಸ್ವಚ್ಛ ಮಾಡಿಕೊಂಡಿರುವ ವಿಡಿಯೋವನ್ನು ಸೂಪರ್ ಸ್ಟಾರ್ ಉಪೇಂದ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಮನೆ, ನಮ್ಮ ಸ್ವಚ್ಛತೆ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಪ್ರಜಾಕೀಯ ಕಾರ್ಯಕರ್ತ ಚೇತನ್ ಕುಮಾರ್ ಅರೇಹಳ್ಳಿ ಎಂಬುವರು ಈ ಅಭಿಯಾನ ಏರ್ಪಡಿಸಿದ್ದಾರೆ. ಅದರಂತೆ, ಗ್ರಾಮದ ಜನರೆಲ್ಲರೂ ಈ ಕೆಲಸದಲ್ಲಿ ಪಾಲ್ಗೊಂಡು ಸ್ವಚ್ಛ ಮಾಡಿದ್ದಾರೆ. ತಮ್ಮ ಮನೆ, ಗ್ರಾಮ, ಆವರಣ, ಮೋರಿಗಳನ್ನು ತಾವೇ ಸ್ವಚ್ಛಗೊಳಿಸುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅರೆಹಳ್ಳಿ ಗ್ರಾಮದ ಎಲ್ಲಾ ಗ್ರಾಮಸ್ಥರೂ ಸೇರಿ ಮಾಡುತ್ತಿರುವ ಸ್ವಚ್ಛತಾ ಕಾರ್ಯ ನೋಡಿ ಇದು ಇಡೀ ಕರ್ನಾಟಕಕ್ಕೇ ಸ್ಫೂರ್ತಿ ಮತ್ತು ಮಾದರಿ ಎಂದು ಸಂತೋಷಪಟ್ಟ ಕೆಎಂಎಫ್ ಮಾಜಿ ಎಂಡಿ ಪ್ರೇಮ್ ನಾಥ್ ಅವರು 20 ಸಾವಿರ ರೂಗಳನ್ನು ಅರೇಹಳ್ಳಿಯ ಆ ವಾರ್ಡ್ ಜನರಿಗೆ ಸೂಕ್ತರೀತಿ ಗ್ರಾಮ ಪಂಚಾಯಿತಿ ಸದಸ್ಯ ಚೇತನ್ ಕುಮಾರ್ ಮೂಲಕ ನೀಡಲು ಮುಂದೆಬಂದಿದ್ದಾರೆ ಎಂದು ಉಪೇಂದ್ರ ತಿಳಿಸಿದ್ದಾರೆ.
Evolution to Revolution… pic.twitter.com/QHpiaCfxeS
— Upendra (@nimmaupendra) May 12, 2021