ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ, ಸಾರ್ವಜನಿಕರಿಗೆ ಕಾನೂನಿನ ಅರಿವು ಮತ್ತು ನೆರವು ಹಾಗೂ ಅಗತ್ಯ ಸೇವೆ ಒದಗಿಸಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರವು ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್. ನಟೇಶ್ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 1800-425-7308, 080-29602919, 080 22222919, ಹೊಸಕೋಟೆ ತಾಲೂಕು ಸಹಾಯವಾಣಿ 9483200493, ಆನೇಕಲ್ ಸಹಾಯವಾಣಿ 9591615228, ದೊಡ್ಡಬಳ್ಳಾಪುರ ಸಹಾಯವಾಣಿ 9535169498, ದೇವನಹಳ್ಳಿ ಸಹಾಯವಾಣಿ 8197006627 ಹಾಗೂ ನೆಲಮಂಗಲ ಸಹಾಯವಾಣಿ 9353739649 ಇಲ್ಲಿಗೆ ಕರೆ ಮಾಡಿ, ಕೋವಿಡ್ -19 ಸಂಬಂಧಿಸಿದಂತೆ ಕಾನೂನಿನ ಅರಿವು ಮತ್ತು ನೆರವು ಪಡೆಯಬಹುದು.
ಸಹಾಯವಾಣಿ ಕೇಂದ್ರ ಆರಂಭಿಸಿರುವುದರ ಜೊತೆಗೆ ಕೋವಿಡ್ -19 ನಿಯಂತ್ರಣ ಸಂಬಂಧ ಹಲವು ಜಾಗೃತಿ ಕಾರ್ಯಕ್ರಮಗಳು, ವರ್ಚುವಲ್ ಸಭೆಗಳನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ನಾಗರಿಕರು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಟೇಶ್ ತಿಳಿಸಿದ್ದಾರೆ.