ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದರೂಸಾವಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಪರಿಣಾಮ ಜೂನ್ 7ರ ನಂತರವೂ ಲಾಕ್‍ಡೌನ್ ಮುಂದುವರಿಯಲಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಜೂನ್ 7ರಂದು ರಾಜ್ಯ ಅನ್‍ಲಾಕ್ ಆಗೋದು ಡೌಟೇ. ಕೊರೊನಾ ಮೊದಲ ಅಲೆಯಲ್ಲಿ ಭಾರತ ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಅಂದ್ರೆ ಬರೋಬ್ಬರಿ 75 ದಿನಗಳು ಲಾಕ್‍ಡೌನ್ ಆಗಿತ್ತು. ಆದರೆ ಈಗ ಒಂದು ವರ್ಷದ ಕೇಸುಗಳು ಎರಡೆರಡು ತಿಂಗಳಲ್ಲೇ ಕಾಡೋಕೆ ಶುರುವಾಗಿವೆ. ಅದೂ ಕೂಡ ನಿರೀಕ್ಷಿಸಲಾಗದಷ್ಟೂ ಗಂಭೀರ ಪರಿಸ್ಥಿತಿಯಲ್ಲಿದೆ.
ಹೀಗಿರುವಾಗ ಕೇವಲ 43 ದಿನದಲ್ಲೆಲ್ಲಾ ರಾಜ್ಯವನ್ನು ಅನ್‍ಲಾಕ್ ಮಾಡಿದರೆ ಮತ್ತೆ ಇನ್ನಷ್ಟು ಅಪಾಯ ಎದುರಿಸಬೇಕಾಗುತ್ತದೆ ಅನ್ನೋದು ತಜ್ಞರ ಸಲಹೆ ಆಗಿದೆ. ಹೀಗಾಗಿ ಸರ್ಕಾರ ಕೂಡ ಜೂನ್ 7ರ ಬಳಿಕವೂ ಲಾಕ್‍ಡೌನ್ ಮುಂದುವರಿಸುವ ಚಿಂತನೆಯಲ್ಲಿದೆ.
ತಜ್ಞರ ಸಲಹೆಗಳನ್ನ ಆಧರಿಸಿ ಹೇಳೋದಾದ್ರೆ ಸದ್ಯಕ್ಕೆ ಜೂನ್ 7ಕ್ಕೂ ಲಾಕ್‍ಡೌನ್ ಮುಗಿಯೋ ಗ್ಯಾರಂಟಿ ಇಲ್ಲ. ಯಾಕಂದ್ರೆ ಬೆಂಗಳೂರು ಒಂದರಲ್ಲೇ ಆಸ್ಪತ್ರೆಗೆ ದಾಖಲಾಗಿರುವ ಶೇ.70 ರಷ್ಟು ರೋಗಿಗಗಳು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ.
ಐಸಿಯು ಬೆಡ್‍ನಲ್ಲಿದ್ದರೂ ಗುಣಮುಖರಾಗಲು ಬಹಳ ಟೈಂ ಹಿಡೀತಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಬೆಡ್‍ಗಳು ಸಿಗ್ತಿಲ್ಲ. ಪರಿಣಾಮ ಕೊರೊನಾದಿಂದ ಮೃತಪಡುತ್ತಿರುವವರ ಸಂಖ್ಯೆಯೂ ಕೂಡ ಹೆಚ್ಚಿದೆ. ಇದೆಲ್ಲಾ ಗಮನಿಸಿಯೇ ತಜ್ಞರು ಯಾವಾಗ ಲಾಕ್‍ಡೌನ್ ತೆರವು ಮಾಡಬಹುದು ಅನ್ನೋದರ ಬಗ್ಗೆ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ.
ಸೋಂಕಿನ ಪ್ರಮಾಣ ಶೇ.5ಕ್ಕೆ ಇಳಿಯದೇ ಲಾಕ್‍ಡೌನ್ ತೆಗೆಯಬಾರದು ಅಂತ ಐಸಿಎಂಆರ್ ಹೇಳಿದೆ. ಸೋಂಕಿನ ಪ್ರಮಾಣ ಶೇ.10ರಷ್ಟಿದ್ದರೆ ಸರ್ಕಾರ ಲಾಕ್‍ಡೌನ್ ಮುಂದುವರಿಸಬಹುದು. ಸೋಂಕಿನ ಪ್ರಮಾಣ ಶೇ.8ಕ್ಕೆ ಇಳಿದರೆ ಲಾಕ್‍ಡೌನ್‍ನಿಂದ ಒಂದಿಷ್ಟು ಸಡಿಲಿಕೆ ಸಾಧ್ಯತೆ ಇದೆ.
ಸೋಂಕು, ಸಾವಿನ ಪ್ರಮಾಣ ಆಧರಿಸಿ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದು, ತಜ್ಞರು ಹೀಗೆ ತಮ್ಮ ವರದಿ ಕೊಡ್ತಿದ್ದಾಗೆ ಇತ್ತ ಸಚಿವರು ಕೂಡ ಈಗಲೇ ಲಾಕ್‍ಡೌನ್ ಓಪನ್ ಮಾಡೋದು ಬೇಡ ಅಂತ ಸಿಎಂಗೆ ಸಲಹೆ ನೀಡಲು ಶುರುವಾಗಿದ್ದಾರಂತೆ. ಹೀಗಾಗಿ ಜೂನ್ 7ರ ನಂತರವೂ ಲಾಕ್ಡೌನ್ ಮುಂದುವರಿಯಲಿದೆ ಎನ್ನಲಾಗುತ್ತಿದೆ.
ಆದರೆ, ಸರ್ಕಾರ ಈ ಲಾಕ್‍ಡೌನ್ ಇನ್ನೂ 14 ದಿನ ಹೀಗೆ ಮುಂದುವರಿಸೋದಾ ಅಥವಾ ಹಂತ ಹಂತವಾಗಿ ಮುಕ್ತ ಮಾಡೋದಾ ಅನ್ನೋ ಚರ್ಚೆಯಲ್ಲಿದೆ. ಒಂದು ವೇಳೆ ತಜ್ಞರ ಇನ್ನೆರಡು ವಾರ ಲಾಕ್‍ಗೆ ಕಿವಿಗೊಟ್ಟಿದ್ದೇ ಆದ್ರೆ ಜೂನ್ ಅಂತ್ಯದವರೆಗೂ ಲಾಕ್ ಆದ್ರೂ ಅಚ್ಚರಿ ಇಲ್ಲ.