ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಕೋವ್ಯಾಕ್ಸಿನ್ ಉತ್ಪಾದನೆಗೆ ಪ್ರೋತ್ಸಾಹ ಸಿಕ್ಕಿದ್ದು, ರಾಜ್ಯಕ್ಕೆ ಜೂನ್‌ನಲ್ಲಿ 60 ಲಕ್ಷ ಡೋಸ್ ವ್ಯಾಕ್ಸಿನ್ ಪೂರೈಕೆಯಾಗುವ ಸಾಧ್ಯತೆ ಇದೆ.
ಜುಲೈ ಅಥವಾ ಆಗಸ್ಟ್ ತಿಂಗಳಿಗೆ ಲಸಿಕೆ ಉತ್ಪಾದನೆಯು 6 ಕೋಟಿ ಗಡಿ ತಲುಪಿಲಿದೆ. ಸೆಪ್ಟೆಂಬರ್ ಒಳಗೆ ಪ್ರತಿ ತಿಂಗಳು ಹತ್ತು ಕೋಟಿ ಕೋವ್ಯಾಕ್ಸಿನ್ ಉತ್ಪಾದನೆಯಾಗಲಿದೆ. ಈವರೆಗೂ 3.11 ಕೋಟಿ ಕೋವ್ಯಾಕ್ಸಿನ್ ಡೋಸ್ ಅನ್ನು ಭಾರತ್ ಬಯೋಟೆಕ್ ಪೂರೈಕೆ ಮಾಡಿದೆ.
ವ್ಯಾಕ್ಸಿನ್ ತಯಾರಿಕೆಗೆ ನಮ್ಮದೇ ಆದ ಚೌಕಟ್ಟಿದೆ. ತಂತ್ರಜ್ಞಾನ, ನಿಯಂತ್ರಕ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕೇಂದ್ರೀಯ ಔಷಧ ಮಾಪನ ನಿಯಂತ್ರಣ ಸಂಘಟನೆಯ ಮಾರ್ಗಸೂಚಿ ಪಾಲಿಸಬೇಕು ಎಂದು ಭಾರತ್ ಬಯೋಟೆಕ್ ಹೇಳಿದೆ.
ಕೋವ್ಯಾಕ್ಸಿನ್ ಅಲಭ್ಯತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ನೀಡಿದ್ದು, ಲಸಿಕೆ ಉತ್ಪಾದನೆ ದಿನಗಳಲ್ಲಿ ಆಗೋದಲ್ಲಾ. ಮಾರ್ಚ್‌ನಲ್ಲಿ ತಯಾರಿ ಶುರು ಮಾಡಿದರೆ ವ್ಯಾಕ್ಸಿನ್ ಜೂನ್‌ನಲ್ಲಿ ಲಭ್ಯವಾಗುತ್ತದೆ. ಕೋವ್ಯಾಕ್ಸಿನ್ ಲಸಿಕೆ ತಯಾರಿಕೆಗೆ 120 ದಿನಗಳು ಬೇಕು ಎಂದು ತಿಳಿಸಿದೆ.