ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸರ್ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ 1000 ಕ್ಕೂ ಹೆಚ್ಚು ಕುಟುಂಬಗಳಿಗೆ ಆಮ್ ಆದ್ಮಿ ಪಕ್ಷದಿಂದ ಪಡಿತರ ಕಿಟ್ ಗಳ ವಿತರಣೆ ಮಾಡಲಾಯಿತು.
ಜೀವನ್ ಭೀಮಾನಗರ ವಾರ್ಡ್, ಕೊನೇನ ಅಗ್ರಹಾರ ವಾರ್ಡ್, ಸರ್ವಘ್ನನಗರ ವಾರ್ಡ್, ಸಿವಿ ರಾಮನ್ ನಗರ ವಾರ್ಡ್ಮತ್ತು ಬೆನಿಗಾನಹಳ್ಳಿ ವಾರ್ಡ್ಗಳ ವ್ಯಾಪ್ತಿಯ 1000 ಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ಕಿಟ್(5 kg ಅಕ್ಕಿ, 1 kg ತೊಗರಿ ಬೇಳೆ, 1/2 ltr ಎಣ್ಣೆ ಮತ್ತು ಸಾಂಬಾರ್ ಪೌಡರ್) ವಿತರಿಸಲಾಯಿತು.
ಇದಲ್ಲದೇ, ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಪ್ರತಿದಿನ 1000 ಕ್ಕೂ ಹೆಚ್ಚು ಊಟದ ಪೊಟ್ಟಣಗಳನ್ನೂ ನೀಡಲಗುತ್ತಿದೆ ಎಂದು ಆಪ್ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.