CrimeNEWS

ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಮಕ್ಕಳಿಗೆ ಬರೆಹಾಕಿದ್ದಕ್ಕೆ ಜೈಲು ಸೇರಿದ ತಾಯಿ ಮತ್ತು ಪ್ರಿಯಕರ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಅಪ್ರಾಪ್ತಳನ್ನು ಮದುವೆಯಾದ ಕಾರಣಕ್ಕೆ ಅಪ್ಪ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇತ್ತ ಅಮ್ಮ ಅಕ್ರಮ ಸಂಬಂಧ ಹೊಂದಿದ್ದು, ಇದನ್ನು ಸಹಿಸಿಕೊಳ್ಳಲಾಗದೆ ಇಬ್ಬರು ಪುತ್ರಿಯರು ಜೈಲಿನಲ್ಲಿರುವ ಅಪ್ಪನಿಗೆ ವಿಷಯ ತಿಳಿಸಿದ್ದಕ್ಕೆ ಆ ಮಕ್ಕಳನ್ನು ತಳಿಸಿದ್ದು, ಸದ್ಯ ಈಗ ಅಮ್ಮ ಮತ್ತು ಅಮ್ಮನ ಪ್ರಿಯಕರ ಜೈಲು ಸೇರಿದ್ದಾರೆ.

ಜಯಮ್ಮ ಮತ್ತು ಹೇಮಂತ್ ಆರೋಪಿಗಳಾಗಿದ್ದು, ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು. ಅಪ್ರಾಪ್ತಳಾಗಿದ್ದ ಜಯಮ್ಮನನ್ನು ಮದುವೆಯಾದ ಕಾರಣಕ್ಕೆ ಪತಿ ಶಿಕ್ಷೆಗೆ ಗುರಿಯಾಗಿ ಹಾಸನದ ಜೈಲು ಸೇರಿದ್ದಾನೆ.

ಪತಿ ಜೈಲು ಪಾಲಾದ್ದರಿಂದ ಬದುಕಿಗಾಗಿ ಬ್ಯಾಟರಾಯನಪುರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜಯಮ್ಮನಿಗೆ ಹೇಮಂತನ ಪತ್ನಿ ಪರಿಚಯವಾಗಿದೆ. ಆಕೆ ಕೂಡ ಅದೇ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಹೇಮಂತನ ಪತ್ನಿ ಒಮ್ಮೆ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಗಂಡನಿಗೆ ಪರಿಚಯಿಸಿದ್ದಳೆ. ಬಳಿಕ ಈ ಇಬ್ಬರ ಸ್ನೇಹ ಅಕ್ರಮ ಸಂಬಂಧಕ್ಕೆ ನಾಂದಿ ಹಾಡಿದ್ದು, ಹೇಮಂತ್ ತನ್ನ ಪ್ರೇಯಸಿ ಜಯಮ್ಮನ ಮನೆಗೆ ಬಂದು ಸರಸವಾಡುತ್ತಿದ್ದ. ಇದನ್ನು ಸಹಿಸದ ಮುದ್ದು ಮಕ್ಕಳು ಅಡ್ಡಿ ಪಡಿಸುತ್ತಿದ್ದರು. ಹೀಗಾಗಿ ಹೇಮಂತ ಇಬ್ಬರು ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ.

ಚಿಕ್ಕ ವಯಸ್ಸಿನಲ್ಲಿ ಜಯಮ್ಮನನ್ನು ವರಿಸಿದ ಪಾಪಕ್ಕೆ ಜೈಲು ಪಾಲಾಗಿರುವ ಪತಿ ಒಮ್ಮೆ ಕರೆ ಮಾಡಿದ್ದಾನೆ. ಇಬ್ಬರು ಮಕ್ಕಳು ಮನೆಯಲ್ಲಿ ಹೇಮಂತ ಎಂಬಾತ ಇರುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ಗಾಬರಿಯಾದ ಜಯಮ್ಮನ ಪತಿ, ಪೋನ್ ನಲ್ಲಿ ಪತ್ನಿಗೆ ಹೆದರಿಸಿದ್ದಾನೆ. ಪತಿ ಕೋಪಿಸಿಕೊಂಡ ಹಿನ್ನೆಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಮೇಲೆ ಜಯಮ್ಮ ದೌರ್ಜನ್ಯ ಎಸಗಿದ್ದಾಳೆ.

ಅಷ್ಟೇ ಅಲ್ಲದೆ ಎರಡು ತಿಂಗಳಿನಿಂದ ಮಕ್ಕಳ ಮೈಮೇಲೆ ಬರೆ ಹಾಕಿ ಚಿತ್ರ ಹಿಂಸೆ ನೀಡಿದ್ದಾಳೆ. ವಿಧಿಯಿಲ್ಲದೆ ಇಬ್ಬರು ಮಕ್ಕಳು ಆ ಚಿತ್ರಹಿಂಸೆಗೆ ಒಳಗಾದರೂ ಸಹಿಸಿಕೊಂಡು ಅಲ್ಲಿಯೇ ಇದ್ದಾರೆ. ಇದನ್ನು ಸಹಿಸಿಕೊಳ್ಳದ ಸ್ಥಳೀಯರು ಗುರುವಾರ ಹಲ್ಲೆ ಮಾಡುತ್ತಿದ್ದ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ರಾಜರಾಜೇಶ್ವರಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಗಂಭೀರ ಗಾಯಗೊಂಡಿರುವ ಇಬ್ಬರು ಹೆಣ್ಣು ಮಕ್ಕಳನ್ನು ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಮಕ್ಕಳು ಗುಣಮುಖರಾದ ಬಳಿಕ ಸರ್ಕಾರದ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಪರ ಪುರುಷನ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿ ಪಡಿಸಿದ ಮಕ್ಕಳ ಮೇಲೆ ದೌರ್ಜನ್ಯ ಮಾಡಿದ ಆರೋಪದಡಿ ತಾಯಿ ಜೈಲು ಸೇರಿರುವ ಹಿನ್ನೆಲೆಯಲ್ಲಿ ಆ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ