Vijayapatha – ವಿಜಯಪಥ
Saturday, November 2, 2024
NEWSನಮ್ಮರಾಜ್ಯರಾಜಕೀಯ

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕುಸಿಯುತ್ತಿದೆ: ವಿರೋಧಿಗಳಿಗೆ ಬೆವರಿಳಿಸಿದ ವಿಶ್ವನಾಥ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕುಸಿಯುತ್ತಿದ್ದು, ಪರ್ಯಾಯ ನಾಯಕತ್ವ ಬೇಕಾಗಿದೆ ಎಂದು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಗಂಭೀರ ಆರೋಪ ಮಾಡಿದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಅವರ ಕಾಲದಲ್ಲಿ ಕ್ಲಾಸಿಕ್‌ ಕಂಪ್ಯೂಟರ್‌, ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಬಾಟ್ನಿಂಗ್‌ ಹಗರಣದಿಂದ ನಾಯಕತ್ವವೇ ಕುಸಿದು ಹೋಯಿತು. ಇಲ್ಲಿಯೂ ನಾಯಕತ್ವ ಕುಸಿಯುತ್ತಿದೆ. ಇದರಿಂದ ಪಕ್ಷಕ್ಕೆ ಪ್ರಯೋಜನ ಇಲ್ಲ. ಅವರ ಮಾರ್ಗದರ್ಶನದಲ್ಲಿ ಪರ್ಯಾಯ ನಾಯಕತ್ವ ಕೊಡಿ. ವೀರಶೈವರಿಗೇ ಕೊಡಿ ಎಂದು ಆಗ್ರಹಿಸಿದರು.

ನಾನು ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿಲ್ಲ. ನಾನು ಮಾತನಾಡಿರುವುದು ಪಕ್ಷದ ನೈತಿಕತೆ, ಪಾರದರ್ಶಕತೆ, ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ. ನನ್ನ ಮೇಲೆ ಕ್ರಮ ತೆಗೆದುಕೊಳ್ಳಿ. ಆದರೆ, ಯಾರ ಮೇಲೆ ಕ್ರಮ ತೆಗೆದುಕೊಳ್ಳುವುದು ಎಂಬುದು ಬಹಳ ಮುಖ್ಯ. ಸತ್ಯ ಹೇಳುವವರ ಮೇಲೆ ಕ್ರಮ ತೆಗೆದುಕೊಳ್ಳುವುದಲ್ಲ. ಜನಾಭಿಪ್ರಾಯ ಯಾರಿಂದ ಕುಸಿಯುತ್ತಿದೆ ಎಂಬುದನ್ನು ನೀವು ನೋಡಬೇಕು ಎಂದು ತಿಳಿಸಿದರು.

ನೀವು ಬಿಜೆಪಿಯವರೇ ಎಂದು ರೇಣುಕಾಚಾರ್ಯ ಕೇಳುತ್ತಾನೆ. ನಾನು ಶುದ್ಧ ಬಿಜೆಪಿಯವ, ನೀನು ಮಿಕ್ಸಡ್‌ ಬಿಜೆಪಿ. ಕೆಜೆಪಿಯಿಂದ ಬಂದವನು ನೀನು. ಹಿಂದೆ ಇದೇ ಯಡಿಯೂರಪ್ಪರ ವಿರುದ್ಧ ನನ್ನನ್ನು ಸಚಿವ ಮಾಡಲಿಲ್ಲ ಎಂದು ಹೈದರಾಬಾದ್‌ಗೆ ಓಡಿ ಹೋಗಿದ್ರಲ್ಲ? ನಂತರ ನಿಮ್ಮನ್ನು ಯಾಕೆ ಸಚಿವ ಸ್ಥಾನದಿಂದ ತೆಗೆದರು? ಜಯಲಕ್ಷ್ಮೀ ನರ್ಸ್‌ ಕಥೆ ಏನಾಯ್ತು ಎಂದು ರೇಣುಕಾಚಾರ್ಯ ವಿರುದ್ಧ ಹರಿಹಾಯ್ದರು.

ಹಾಲಪ್ಪ ನೀನು ಸ್ನೇಹಿತನ ಮನೆಗೆ ಊಟಕ್ಕೆ ಹೋಗಿ, ಆತನ ಹೆಂಡತಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿ ಸಚಿವ ಸ್ಥಾನ ಕಳೆದುಕೊಂಡೆ. ನನ್ನ ವಿರುದ್ಧ ಮಾತನಾಡುತ್ತೀರಾ ನೀವು ಎಂದು ಹಾಲಪ್ಪ ವಿರುದ್ಧ ಹರಿಹಾಯ್ದರು.

ನನ್ನಂಥ ಹುಚ್ಚನ ತ್ಯಾಗದಿಂದ ಇಂದು ನೀನು ಬಿಡಿಎ ಅಧ್ಯಕ್ಷ ಆಗಿದ್ದೀಯಾ? ದೋಚುತ್ತಿದ್ದೀಯಾ. ನಿಮ್ಮಂಥ ಭ್ರಷ್ಟರು ನನಗೆ ಪಾಠ ಹೇಳುತ್ತೀರಾ ಎಂದು ಬಿಡಿಎ ಅಧ್ಯಕ್ಷ ವಿಶ್ವನಾಥ್‌ ವಿರುದ್ಧವೂ ಕಿಡಿಕಾರಿದರು.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ