NEWSನಮ್ಮಜಿಲ್ಲೆ

ಸಾರಿಗೆ ಬಸ್‌ಗಾಗಿ ಪ್ರಯಾಣಿಕರ ಪರದಾಟ: ಸಮರ್ಪಕವಾಗಿ ಬಸ್‌ ಓಡಿಸದ ಬಿಎಂಟಿಸಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿರುವುದರಿಂದ ಒಂದು ತಿಂಗಳಿಗೂ ಹೆಚ್ಚು ಕಾಲ ಕರ್ನಾಟಕದಲ್ಲಿ ಜಾರಿಯಲಿದ್ದ ಲಾಕ್​ಡೌನ್, ಜೂನ್ 20ರ ನಂತರ ಅಂದರೆ ಇಂದಿನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಂತ ಹಂತವಾಗಿ ಸಾರಿಗೆ ಬಸ್‌ ಸಂಚಾರ ಆರಂಭವಾಗಿದೆ.

ಆದರೆ, ಇಂದು ಬೆಳಗ್ಗೆ 6ರಿಂದಲೇ ಆರಂಭವಾಗಬೇಕಿದ್ದ ಬಸ್‌ಗಳ ಸಂಚಾರ ಬೆಳಗ್ಗೆ 8.30ರವರೆಗೂ ಬಸ್‌ ನಿಲ್ದಾಣಗಳಿಗೆ ಬಸ್‌ಗಳು ಬಾರಲೇ ಇಲ್ಲ. ಇದರಿಂದ ಅವುಗಳನ್ನೇ ನಂಬಿಕೊಂಡು ಬಂದಿದ್ದ ಸಾರ್ವಜನಿಕರು ತಾವು ಹೋಗಬೇಕಾದ ಸ್ಥಳಗಳಿಗೆ ಹೋಗುವುದಕ್ಕಾಗಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಇಂದು ಕರ್ತವ್ಯಕ್ಕೆ ಹಾಜರಾದ ಸಾರಿಗೆ ಸಿಬ್ಬಂದಿಗೆ ಕಡ್ಡಾಯವಾಗಿ ಕಳೆದ ಶನಿವಾರವೇ ಕೋವಿಡ್‌ ಟೆಸ್ಟ್‌ ಮಾಡಿಸಿರುವ (72 ಗಂಟೆಯೊಳಗೆ) ಟೆಸ್ಟ್‌ನಲ್ಲಿ ಕೊರೊನಾ ನೆಗೆಟಿವ್‌ ವರದಿ ಬಂದಿರುವುದನ್ನು ಆಯಾಯಾ ಡಿಪೋಗಳಲ್ಲಿ ಕೊಡಬೇಕು ಎಂದು ಆದೇಶ ಹೊರಡಿಸಿದ್ದು, ವಾರದ ಹಿಂದಿನ ಕೋವಿಡ್‌ ಟೆಸ್ಟ್‌ (RT PCR) ವರದಿ ನೀಡಿದ್ದರೂ ಅದನ್ನು ಪಡೆಯದೆ ಸಿಬ್ಬಂದಿಗಳನ್ನು ವಾಪಸ್‌ ಕಳುಹಿಸಿದ್ದಾರೆ. ಇದಿರಿಂದ ಸಮರ್ಪಕವಾಗಿ ಬಸ್‌ಗಳು ರಸ್ತೆಗಿಳಿಯಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ಮೊದಲ ಲಸಿಕೆ ಹಾಕಿಸಿಕೊಂಡಿದ್ದು, ಒಂದುವಾರದ ಹಿಂದೆ ಮಾಡಿಸಿರುವ RT PCR ಟೆಸ್ಟ್‌ ವರದಿ ನೀಡಿದರೂ ಅದನ್ನು ಟಿಪೋಗಳಲ್ಲಿ ಮಾನ್ಯಮಾಡಿಲ್ಲ. ಇದಿರಿಂದ ಇಂದು ಮುಂಜಾನೆ ಕರ್ತವ್ಯಕ್ಕೆ ಹಾಜರಾಗಲು ಬಂದ ಸಿಬ್ಬಂದಿ ವಾಪಸ್‌ ಮನೆಗೆ ಮರಳಿದ್ದು, ಇಂದು RT PCR ಟೆಸ್ಟ್‌ ಮತ್ತೊಮ್ಮೆ ಮಾಡಿಸಿಕೊಂಡು ಬರುವುದಾಗಿ ತಿಳಿಸಿದ್ದಾರೆ.

ಆದರೆ, ತಮ್ಮ ಸಿಬ್ಬಂದಿ ಆರೋಗ್ಯವಾಗಿದ್ದು, ಜೂನ್‌ 12ರ ನಂತರ RT PCR ಟೆಸ್ಟ್‌ ನೆಗೆಟಿವ್‌ ಬಂದಿದ್ದರೂ ಅದನ್ನು ಮಾನ್ಯಮಾಡದೆ ಅಧಿಕಾರಿಗಳು ತಿರಸ್ಕರಿಸುತ್ತಿರುವುದರಿಂದ ಈ ಪರಿಣಾಮ ಪ್ರಯಾಣಿರ ಮೇಲೆ ಬೀರಿದೆ.

ಎಲ್ಲಾ ಟೆಸ್ಟ್‌ ಮಾಡಿಸಿಕೊಂಡಿದ್ದು ಆರೋಗ್ಯವಂತ ಸಿಬ್ಬಂದಿಯಾಗಿದ್ದರೆ ಅವರನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ಪ್ರಯಾಣಿಕರ ದೃಷ್ಟಿಯಿಂದ ಡಿಪೋ ಮಟ್ಟದ ಅಧಿಕಾರಿಗಳಿಗೆ ಮೇಲಧಿಕಾರಿಗಳು ಸೂಚನೆ ನೀಡಬೇಕಿತ್ತು. ಆದರೆ ಅವರು ತೆಗೆದುಕೊಂಡಿರುವ ಅವೈಜ್ಞಾನಿಕ ನಿರ್ಧಾರದಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.

Leave a Reply

error: Content is protected !!
LATEST
ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ