ಪಿರಿಯಾಪಟ್ಟಣ : ಬೆಳೆ ನಷ್ಟವಾದ ಕಾರಣ ಮಾಡಿದ ಸಾಲ ತೀರಿಸಲಾಗದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾಗಳಿ ಗ್ರಾಮದ ನಡೆದಿದೆ.
ಗ್ರಾಮದ ಸಣ್ಣಹುಚ್ಚ(45) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಮೃತುರ ತಮಗಿದ್ದ 2 ಎಕರೆ ಜಮೀನಿನಲ್ಲಿ ಹೂ ಹಾಗೂ ತಂಬಾಕನ್ನು ಬೆಯುತ್ತಿದ್ದರು. ಹೂ ಸೇರಿದಂತೆ ಸಣ್ಣಪುಟ್ಟ ವ್ಯಾಪಾರನೂ ಮಾಡುತಿದ್ದ ಅವರು, ಕಳೆದ 1 ತಿಂಗಳ ಹಿಂದೆ ಮಗಳ ಮದುವೆಗಾಗಿ ಕೆಲವರ ಬಳಿ ಕೈ ಸಾಲವನ್ನು ಮಾಡಿಕೊಂಡಿದ್ದರು.
ಈ ನಡುವೆ ಕೊರೊನಾ ಲಾಕ್ ಡೌನ್ ಪ್ರಾರಂಭವಾದ ನಂತರ ಹೂವಿನ ವ್ಯಾಪಾರವೂ ಇಲ್ಲದೆ, ಮಾಡಿದ ಸಾಲವನ್ನು ತೀರಿಸಲಾದೆ ಜೀವನ ನಿರ್ವಹಿಸಲು ಕಷ್ಟಪಟ್ಟು ಹತಾಶರಾಗಿದ್ದರು.
ಈ ನೋವಿನಿಂದ ಹೊರಬರಲಾಗದೆ ಮಾಗಳಿ ಸಮೀಪ ಕೂಡು ತೋಟದ ಹತ್ತಿರ ತನ್ನ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.