ಯಾದಗಿರಿ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಯಾದಗಿರಿಯಲ್ಲಿನ ಲಾಡ್ಜ್ ಒಂದರ ಮೇಲೆ ಪೊಲೀಸರು ದಾಳಿ ಮಾಡಿ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ಯಾದಗಿರಿ ನಗರದ ಗಂಜ್ ಏರಿಯಾದಲ್ಲಿರುವ ಲಾಡ್ಜ್ ನಲ್ಲಿ ಹಲವಾರು ದಿನಗಳಿಂದ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದರು.
ಈ ವೇಳೆ ಈ ಲಾಡ್ಜ್ ನಲ್ಲಿ ಸ್ಥಳೀಯ ಮಹಿಳೆಯರನ್ನು ಬಳಿಸಿಕೊಂಡು, ಲಾಡ್ಜ್ ಮ್ಯಾನೇಜರ್ ನಾಗರಾಜ್ ಸೂಗೂರು ಎಂಬಾತ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಇನ್ನೂ ದಾಳಿಯಲ್ಲಿ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿರುವ ಪೊಲೀಸರು, ಲಾಡ್ಜ್ ಮ್ಯಾನೇಜರ್ ಸೇರಿ ಒಟ್ಟು ಮೂವರು ಗ್ರಾಹಕರನ್ನು ಬಂಧಿಸಿದ್ದು, ಒಬ್ಬ ಗ್ರಾಹಕ ಪರಾರಿಯಾಗಿದ್ದಾನೆ.
ಎಸ್ಪಿ ವೇದಮೂರ್ತಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಂತೋಷ ಬನ್ನಹಟ್ಟಿ, ಸಿಪಿಐ ಸೋಮಶೇಖರ್ ಕೆಂಚರೆಡ್ಡಿ ನೇತೃತ್ವದಲ್ಲಿ, ಯಾದಗಿರಿ ಮಹಿಳಾ ಠಾಣಾ ಪಿಎಸ್ ರಾಘವೇಂದ್ರ ಕಾರ್ಯಾಚರಣೆ ನಡೆಸಿದರು.