ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಭಾಗಶಃ ಅನ್‌ಲಾಕ್ ಆಗಿದ್ದು ಮಾಲ್, ಸಿನಿಮಾ ಥಿಯೇಟರ್, ಧಾರ್ಮಿಕ ಕ್ಷೇತ್ರಗಳನ್ನು ಹೊರತುಪಡಿಸಿ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೂ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಪಾಸಿಟಿವಿಟಿ ರೇಟ್ ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗದಿದ್ರೂ ಅನ್‌ಲಾಕ್ ಮಾಡಲಾಗಿದ್ದು ಬಸ್ ಸಂಚಾರಕ್ಕೂ ಅನುಮತಿಸಲಾಗಿದೆ. ಬಸ್ ಗಳಲ್ಲಿ ಶೇ.50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರೋದ್ರಿಂದ ಕೆಎಸ್ ಆರ್ ಟಿಸಿ ಬಸ್‌ಗಳು ಮಾತ್ರ ಸದ್ಯ ರಸ್ತೆಗಿಳಿಯಲಿದ್ದು, ಖಾಸಗಿ ಬಸ್‌ಗಳು ಈ ತಿಂಗಳ ಅಂತ್ಯದವರೆಗೂ ಸೇವೆ ಆರಂಭಿಸೋದಿಲ್ಲ.
ರಾಜ್ಯದ ಇತರ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸೋಂಕಿನ ಪ್ರಯಾಣ ಏರಿಕೆ ಆಗುತ್ತಾನೆ ಇದೆ. ಜಿಲ್ಲೆಯಲ್ಲಿ ನಿನ್ನೆ 374 ಪಾಸಿಟಿವ್ ಕೇಸ್ ದಾಖಲಾಗಿದ್ದು, 15 ಮಂದಿ ಬಲಿಯಾಗಿದ್ದರು. ಸದ್ಯ ಜಿಲ್ಲೆಯಲ್ಲಿ ಈಗ ಪಾಸಿಟಿವಿಟಿ ರೇಟ್ ಶೇ. 5.68 ಇದೆ. ಒಟ್ಟು 6,820 ಆಕ್ಟೀವ್ ಕೇಸ್‍ಗಳಿವೆ. ಈವರೆಗೂ 1,080 ಮಂದಿ ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.
ಕೆಲ ದಿನಗಳಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ಏರುತ್ತಲೇ ಇದೆ. ಇದಕ್ಕೆ ಕಾರಣ ಟೆಸ್ಟಿಂಗ್ ಪ್ರಕ್ರಿಯೆ. ಹೌದು, ಈ ಹಿಂದೆ ಜಿಲ್ಲೆಯಲ್ಲಿ ಸಾಮಾನ್ಯವಾಗಿ 2 ರಿಂದ 3 ಸಾವಿರ ಸ್ಯಾಂಪಲ್‍ಗಳನ್ನು RTPCR ಟೆಸ್ಟ್‌ಗೆ ಒಳಪಡಿಸಲಾಗುತಿತ್ತು. ಆದರೆ ಇದೀಗ ಜಿಲ್ಲಾಡಳಿತದ ಸೂಚನೆಯಂತೆ ದಿನವೊಂದಕ್ಕೆ 8 ರಿಂದ 9 ಸಾವಿರ ಟೆಸ್ಟಿಂಗ್ ನಡಿಯುತ್ತಿದೆ. ಗ್ರಾಮಗಳಲ್ಲಿ ಕೊರೊನಾ ಟೆಸ್ಟಿಂಗ್ ಹೆಚ್ಚಾಗಿ ನಡೀತಿದ್ದು ಪಾಸಿಟಿವ್ ಕೇಸ್‍ಗಳು ದಾಖಲಾಗುತ್ತಿವೆ ಎಂದು ಹೇಳಲಾಗಿದೆ.