ಮೈಸೂರು: ಮೈಸೂರಿನಲ್ಲಿ ಲಾಕ್ಡೌನ್ ತೆರವುಗೊಂಡರು ಮೈಸೂರು ಮೃಗಾಲಯಕ್ಕೆ ಇನ್ನೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಈಗ ಕೊರೊನಾ ಸೋಂಕಿನ ತೀವ್ರತೆಯೂ ರಾಜ್ಯದಲ್ಲಿ ಕಡಿಮೆಯಾಗುತ್ತಿದ್ದು, ಲಾಕ್ಡೌನ್ ಸಡಿಲಗೊಂಡಿದೆ. ಹೀಗಾಗಿ 3 ಮೃಗಾಲಯಕ್ಕೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಬನ್ನೇರುಘಟ್ಟ ಮೃಗಾಲಯ ಕೂಡ ಇನ್ನೊಂದು ವಾರದಲ್ಲಿ ತೆರೆಯಲಿದೆ. ಆದರೆ ಮೈಸೂರು ಮೃಗಾಲಯಕ್ಕೆ ಮಾತ್ರ ಸಾರ್ವಜನಿಕರ ಪ್ರವೇಶಕ್ಕೆ ಇನ್ನು ಅವಕಾಶ ಮಾಡಿಕೊಟ್ಟಿಲ್ಲ. ಮುಂದಿನ ವಾರದೊಳಗೆ ಪ್ರವೇಶದ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಕೊರೊನಾದಿಂದ ತೀರ ಸಂಕಷ್ಟಕ್ಕೆ ಸಿಲುಕಿದ್ದ ಮೃಗಾಲಯಕ್ಕೆ ಈ ಬಾರಿ ಆಸರೆಯಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇವರ ಅಭಿಯಾನಕ್ಕೆ 3 ಕೋಟಿ ರೂ.ಗೂ ಅಧಿಕ ದೇಣಿಗೆ ಸಂಗ್ರವಾಗಿದ್ದು, ಪ್ರಾಣಿಗಳ ಹಸಿವು ನೀಗಿಸಲು ಜನರು ಮುಂದೆ ಬಂದಿದ್ದಾರೆ.
ಲಾಕ್‌ಡೌನ್‌ನಿಂದಾಗಿ ರಾಜ್ಯದ ಎಲ್ಲ 9 ಮೃಗಾಲಯಗಳೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ, ಪ್ರಾಣಿಗಳ ಆಹಾರಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಸ್ಥಿತಿ ಕರ್ನಾಟ ಮೃಗಾಲಯ ಪ್ರಾಧಿಕಾರಕ್ಕೆ ಬಂದೊದಗಿತ್ತು. ಈ ವೇಳೆ ಮೃಗಾಲಯಗಳ ಸಂಕಷ್ಟಕ್ಕೆ ನೆರವಾಗಿದ್ದು, ದರ್ಶನ್. ಅರಣ್ಯ ಇಲಾಖೆಯ ರಾಯಭಾರಿಯು ಆಗಿರುವ ನಟ ದರ್ಶನ್ ವಿಡಿಯೋ ಮೂಲಕ ಮೃಗಾಲಯ ಸಂಕಷ್ಟಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದರು.
ಈ ಬೆನ್ನಲ್ಲೆ 3.25 ಕೋಟಿ ಹಣ ಸಂಗ್ರಹವಾಗಿದೆ. ಹಣ ಮೃಗಾಲಯ ಪ್ರಾಧಿಕಾರದ ಖಾತೆಗೆ ಸಂದಾಯವಾಗಿದ್ದು. ದರ್ಶನ್ ಅವರ ಅಭಿಮಾನಿಗಳು ಹಾಗೂ ವನ್ಯಜೀವಿ ಪ್ರಿಯರು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ನೆರವಿಗೆ ಮುಂದಾಗಿದ್ದಾರೆ. 50 ರೂಪಾಯಿಂದ ಒಂದೂವರೆ ಲಕ್ಷದವರೆಗೂ ಸಾಕಷ್ಟು ಜನರು ನೆರವು ನೀಡಿದ್ದಾರೆ. ಇದರಿಂದ 3.25 ಕೋಟಿ ರೂ. ಸಂದಾಯವಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ನಟ ದರ್ಶನ್ಗೆ ಧನ್ಯವಾದ ತಿಳಿಸಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ತೆರವಾಗಿ ಪ್ರವಾಸೋದ್ಯಮ ಚಟುವಟಿಕೆ ಪ್ರಾರಂಭವಾಗಿದ್ದು, ಸದ್ಯ ಗದಗ, ಹಂಪಿ, ಮೃಗಾಲಯಗಳು ಪ್ರವಾಸಿಗರಿಗಾಗಿ ತೆರೆದಿವೆ. ಇನ್ನು ಮುಂದಿನವಾರದಿಂದ ಬನ್ನೇರುಘಟ್ಟ ಮೃಗಾಲಯ ಕೂಡ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ.