ಚಾಮರಾಜನಗರ: ಕೊರೊನಾ ಸಂಷ್ಟದ ಈ ಸಮಯದಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ. ಈ ನಡುವೆ ಶಾಲಾ ಶುಲ್ಕ ಹೆಚ್ಚಳ ಮಾಡುತ್ತಿರುವುದು ಎಷ್ಟು ಸರಿ ಎಂದು ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಮುಂದೆ ಪಾಲಕರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ. ಯಾರ ಮಾತಿಗೂ ಮನವಿಗೂ ಕಿವಿಗೊಡ ಸ್ಥಿತಿಯಲ್ಲಿದೆ. ಈ ರೀತಿಯ ಸರ್ಕಾರ ನಮಗೆ ಬೇಡ, ಇನ್ನು ಶಿಕ್ಷಣ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಇದ್ದಾರೆ ಆದರೆ ಏನು ಪ್ರಯೋಜನೆ ಎಂದು ಪ್ರತಿಭಟನೆ ವೇಳೆ ಸಚಿವ ಸುರೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಶಾಲಾ ಆಡಳಿತ ಮಂಡಳಿ ತಮಗಿಷ್ಟ ಬಂದ ರೀತಿ ನಡೆದುಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದವರು ಎಲ್ಲವನ್ನು ಮುಚ್ಚಿಕೊಂಡು ಕುಳಿತಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು.
ಈ ವೇಳೆ ಆಡಳಿತ ಮಂಡಳಿ ಜತೆ ಪಾಲಕರು ವಾಗ್ವಾದ ನಡೆಸಿದರು. ಕೋವಿಡ್ನಿಂದ ಸಂಕಷ್ಟದಲ್ಲಿದ್ದೇವೆ. ಈ ವೇಳೆ ಶೇ. 25 ರಷ್ಟು ಶಾಲಾ ಶುಲ್ಕ ಹೆಚ್ಚಳ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಶುಲ್ಕ ಪಾವತಿಸದ ಮಕ್ಕಳಿಗೆ ಆನ್ಲೈನ್ ಪಾಠವಿಲ್ಲ ಎಂದಿರುವ ಶಾಲಾ ಆಡಳಿತ ಮಂಡಳಿ ಇನ್ಯಾವುದಕ್ಕೆ ಆದ್ಯತೆ ಕೊಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.