ಜೇವರ್ಗಿ: ಪಟ್ಟಣದಲ್ಲಿ ಕ್ರೈಸ್ ಇಲಾಖೆ ವತಿಯಿಂದ ನಿರ್ಮಾಣ ವಾಗುತ್ತಿರುವ ಎಸ್.ಸಿ ಗರ್ಲ್ಸ್ ಹಾಸ್ಟೆಲ್ ಕಟ್ಟಡದ ಕಾಮಗಾರಿಯನ್ನು ಜೇವರ್ಗಿ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ ವೀಕ್ಷಣೆ ಮಾಡಿದರು.
ಹಾಸ್ಟೆಲ್ ಕಟ್ಟಡದ ಕಾಮಗಾರಿ 3.40 ಕೋಟಿ ರೂ. 40 ಲಕ್ಷ ವೆಚ್ಚದಲ್ಲಿ ನಡೆಯುತ್ತಿದ್ದು, ಗೂನ ಮಟ್ಟದ ಕಾಮಗಾರಿ ಮಾಡುವಂತೆ ಸ್ಥದಲ್ಲೇ ಇದ್ದ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಕಾಂಗ್ರೆಸ್ ಪಕ್ಷದ ನಾಯಕರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಪಾಟೀಲ ಮರೆಪ್ಪ ಸರಡಗಿ, ಇಲಾಖೆ ಅಧಿಕಾರಿಗಳು ಇದ್ದರು.