ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ನಿಗಮದಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳ ಪೈಕಿ 19 ಅಧಿಕಾರಿಗಳನ್ನು ಇಂದು (ಜುಲೈ 14) ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇದೇ ಜುಲೈ 4ರಂದು ನಿಮ್ಮ ನೆಚ್ಚಿನ ವಿಜಯಪಥ ಆನ್‌ಲೈನ್ ಪತ್ರಿಕೆ ಹಲವಾರು ವರ್ಷಗಳಿಂದ ಒಂದೇ ಕಡೆ ಬೇರು ಬಿಟ್ಟುಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳ ವರ್ಗಾವಣೆ ಏಕೆ ಆಗಿಲ್ಲ ಎಂಬ ಬಗ್ಗೆ ಹೈ ಕೋರ್ಟ್‌ನಲ್ಲಿ ರಿಟ್ ಅರ್ಜಿ ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ ಎಂದು ವರದಿ ಪ್ರಕಟಿಸಿತು.
ಈ ಬಗ್ಗೆ ಸಾರಿಗೆ ನೌಕರರ ಪರ ಹೈ ಕೋರ್ಟ್‌ನಲ್ಲಿ ವಕಾಲತ್ತು ವಹಿಸಿರುವ ಕರ್ನಾಟಕ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅವರ ವಕೀಲರ ತಂಡ ಸದ್ದಿಲ್ಲದೆ ರಿಟ್ ಅರ್ಜಿ ಸಲ್ಲಿಸುವ ಸಿದ್ಧತೆಯಲ್ಲಿ ತೊಡಗಿದ್ದು, ಈಗ ಸಾರಿಗೆಯ KSRTC, BMTC, NWKRTC ಮತ್ತು NEKRTC ಸಂಸ್ಥೆಗಳಲ್ಲಿ ಹತ್ತಾರು ವರ್ಷದಿಂದ ಒಂದೇ ಕಡೆ ಬೇರು ಬಿಟ್ಟಿರುವ ಅಧಿಕಾರಿಗಳ ಎದೆಯಲ್ಲಿ ನಡುಕ ಶುರುವಾಗಿದೆ ಎಂದು ವರದಿ ಬಿತ್ತರಿಸಲಾಗಿತ್ತು.
ಹಲವು ವರ್ಷಗಳಿಂದ ಒಂದೇಕಡೆ ಬೇರು ಬಿಟ್ಟಿರುವ ಸಾರಿಗೆ ಅಧಿಕಾರಿಗಳ ವಿರುದ್ಧ ಶೀಘ್ರವೇ ಹೈ ಕೋರ್ಟ್‌ನಲ್ಲಿ ರಿಟ್ ಅರ್ಜಿ !
ಈ ವರದಿಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ನಾಲ್ಕೂ ಸಾರಿಗೆ ನಿಗಮಗಳ ಪೈಕಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ನಿಗಮದ 19 ಅಧಿಕಾರಿಗಳನ್ನು ವಿವಿಧೆಡೆಗೆ ವರ್ಗಾವಣೆ ಮಾಡಿ ಇಲಾಖೆಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ವರ್ಗಾವಣೆ ಗೊಂಡ ಅಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ….