Breaking NewsNEWSನಮ್ಮರಾಜ್ಯಲೇಖನಗಳು

ಸಾರಿಗೆ ನೌಕರರ ಸಮಸ್ಯೆ ಬಿಟ್ಟು ಹೋಗದಿರಿ ಸಿಎಂ ಸಾಬ್‌: ಇದು ಜೀವನದಲ್ಲಿ ಅಳಿಸಲಾಗದ ಕಪ್ಪುಚುಕ್ಕೆಯಾಗುವುದು..!

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ಸಮಸ್ಯೆ ನಿವಾರಿಸದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿರುವುದು ಅದು ಜೀವನದಲ್ಲಿ ಮತ್ತೆ ಅಳಿಸಲಾರದ ಕಪ್ಪುಚುಕ್ಕೆಯಾಗಲಿದೆ.

ಆದ್ದರಿಂದ ಇನ್ನು ಮೂರುದಿನ ತಾವು ಮುಖ್ಯಮಂತ್ರಿಯಾಗಿರುವಾಗಲೇ ತಾವು ಸಾರಿಗೆ ನೌಕರರ ಸಮಸ್ಯೆ ಆಲಿಸಿ ಅವರಿಗೆ ಒಂದು ಶಾಶ್ವತ ಪರಿಹಾರ ಮಾಡಿಕೊಟ್ಟರೆ ತಮ್ಮನ್ನು ಬಾಧಿಸಲಿರುವ ಕಳಂಕದಿಂದಲೂ ತಾವು ಮುಕ್ತರಾಗಬಹುದು.

ಇನ್ನು ಸಾರಿಗೆ ನೌಕರರ ನಾಲ್ಕು ದಶಕದ ಬೇಡಿಕೆಯನ್ನು ಈಡೇರಿಸಿದ ಕೀರ್ತಿ ನಿಮ್ಮದಾಗುತ್ತದೆ. ಜತೆಗೆ ನಿಮ್ಮಲ್ಲಿ ನೆಮ್ಮದಿ ಭಾವ ಮೂಡುತ್ತದೆ. ಇಷ್ಟೆಲ್ಲ ನಿಮ್ಮದಾಗುವ ಸೌಭಾಗ್ಯವಿರುವಾಗ ನೀವು ಅದನ್ನು ಎಡಗಾಲಿನಿಂದ ಒದ್ದು ಹೋಗುವುದು ಸರಿಯಲ್ಲ. ಇನ್ನು ಕಾಲ ಮಿಂಚಿಲ್ಲ. ಹೀಗಾಗಿ ತಾವು ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಕಾಲ ಇನ್ನೂ ನಿಮ್ಮ ಬಳಿ ಇದೆ ಆದ್ದರಿಂದ ಒಂದು ಶಾಶ್ವತ ಪರಿಹಾರ ಮಾಡಿ ಎಂಬುವುದು ಕಳಕಳಿ.

ಈ ನಡುವೆ ಆಗಸ್ಟ್‌ 3ರಂದು ಪ್ರಕರಣ ಕೋರ್ಟ್‌ ನಲ್ಲಿ ವಿಚಾರಣೆಗೆ ಬರುವುದುರಿಂದ ಅದನ್ನು ನೋಡಿಕೊಂಡು ಬಳಿಕ ಒಂದು ನಿರ್ಧಾರ ತೆಗೆದುಕೊಳ್ಳೋಣ ಎಂದು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಮ್ಮನ್ನು ಭೇಟಿ ಮಾಡಿದ ನೌಕರರ ಸಂಘಟನೆಗಳ ಪದಾಧಿಕಾರಿಗಳಿಗೆ ಹೇಳಿ ಕಳುಹಿಸುತ್ತಿದ್ದೀರಿ.

ನೀವು ನಿಜವಾಗಲು ನೌಕರರಿಗೆ ಒಳ್ಳೆಯದನ್ನು ಬಯಸುತ್ತಿದ್ದರೆ ಕೋರ್ಟ್‌ನಲ್ಲಿ ವಿಚಾರಣೆ ಬರುವವರೆಗೆ ಏಕೆ ಕಾಯಬೇಕು ಒಂದು ಅಫಿಡವಿಟ್‌ ಹಾಕಿ ನೌಕರರ ಮೇಲಿರುವ ಎಲ್ಲ ರೀತಿಯ ಕೇಸ್‌ಗಳನ್ನು ವಾಪಸ್‌ ಪಡೆದುಕೊಳ್ಳುತ್ತೇವೆ. ಜತೆಗೆ ಏ.6ರ ಹಿಂದಿದ್ದಂತೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯಕ್ಕೆ ಹಾಜರಾಗಬಹುದು ಎಂದು ನಿರ್ಧರಿಸುವುದು ನಿಮ್ಮ ಕೈಯಲ್ಲೇ ಇದೆ. ಅದನ್ನು ಬಿಟ್ಟು ಈ ರೀತಿ ನೌಕರರ ಕಣ್ಣೊರೆಸುವ ಆಟವನ್ನು ಆಡುತ್ತಿರುವುದು ಏತಕ್ಕೆ ಎಂದು ವಕೀಲರು ಪ್ರಶ್ನಿಸುತ್ತಿದ್ದಾರೆ.

ಇನ್ನು ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು, ಹೈ ಕೋರ್ಟ್‌ ವಕೀಲರಾದ ಅಮೃತೇಶ್‌ ಮತ್ತು ನೀಲಕೇರಿ ಅವರಂತಹ ಸಮರ್ಥ ವಕೀಲರ ತಂಡವಿದ್ದರೂ ಕಾನೂನಿನಲ್ಲಿ ವಿಳಂಬವಾಗುತ್ತದೆ ಎಂಬ ಒಂದೇ ಒಂದು ಕಾರಣಕ್ಕೆ ನಿಮ್ಮ ಬಳಿ ಸಂಘಟನೆ ಪದಾಧಿಕಾರಿಗಳು ಬಂದರೂ ಅವರ ಸಮಸ್ಯೆಗೆ ಇನ್ನೂ ಸ್ಪಂದಿಸದೆ ಉದಾಸೀನತೆ ಭಾವದಲ್ಲೇ ಇರುವುದು ನಿಮಗೇ ಶೋಭೆ ತರುವುದೆ ಎಂಬುದನ್ನು ಒಮ್ಮೆ ಯೋಚಿಸಬೇಕಿದೆ.

ಇನ್ನು ನೀವು ಸಾರಿಗೆ ನೌಕರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮನಸ್ಸಿದ್ದರೆ ನುರಿತ ಮತ್ತು ಅನುಭವಿ ಈ ಮೂವರು ವಕೀಲರ ತಂಡವನ್ನು ಒಮ್ಮೆ ಸಭೆಕರೆದು ಅವರೊಂದಿಗೆ ಚರ್ಚಿಸಿ ಸಾಧಕ ಬಾಧಕಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಏಕೆ ಇಡಬಾರದು ಎಂಬುದು ವಕೀಲರ ಅನಿಸಿಕೆಕೂಡ ಆಗಿದೆ.

ಇನ್ನು ಇದೇ ಜುಲೈ 26ರಂದು ಸಿಎಂ ಬದಲಾವಣೆಯಾದರೆ ಸಾರಿಗೆ ಸಚಿವರು ಅದೇ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂಬ ಭರವಸೆ ಇಲ್ಲ. ಜತೆಗೆ ಹೊಸ ಸಿಎಂ ಅಧಿಕಾರ ವಹಿಸಿಕೊಂಡು ಆಡಳಿತದ ಒಳಹೊರಗನ್ನು ತಿಳಿದುಕೊಳ್ಳಲು ಕನಿಷ್ಠ ಎಂದರೂ 2-3ತಿಂಗಳ ಕಾಲ ತೆಗೆದುಕೊಳ್ಳುತ್ತದೆ.

ಹೀಗಾಗಿ ಈಗಲೇ ಸಂಕಷ್ಟದಲ್ಲಿ ಸಿಲುಕಿರುವ ಸಾರಿಗೆ ನೌಕರರು ಇನ್ನಷ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕುವುದಿಲ್ಲವೇ. ಸಾರಿಗೆ ನೌಕರರು ನಮ್ಮನೆ ಮಕ್ಕಳು ಎಂದು ಹೇಳುವ ಸಚಿವ ಸವದಿ ಅವರು ಮಕ್ಕಳು ಸಮಸ್ಯೆಯಲ್ಲಿ ಸಿಲುಕಿದ್ದರೂ ಕಂಡು ಕಾಣದಂತೆ ಇರುವುದು ಸರಿಯಲ್ಲ. ಇದು ನಿಮಗೆ ಕೊನೆಯ ಅವಕಾಶವೂ ಆಗಿರಬಹುದು ಆದ್ದರಿಂದ ತಾವು ನೌಕರರಿಗೆ ಒಂದು ಶಾಶ್ವತ ಪರಿಹಾರ ಮಾಡಬೇಕಿದೆ. ಈ ಮೂಲಕ ನೌಕರರ ಪಾಲಿನ ಹೀರೋ ಆಗಿ ಮೆರೆಯಿರಿ ಎಂಬುವುದು ನಮ್ಮ ಕಾಳಜಿಯೂ ಹೌದು.

9 Comments

  • ಸಾರಿಗೆ ನೌಕರರ ಸಮಸ್ಯೆಗಳನ್ನು ,ಸರಕಾರಕ್ಕೆ ತಿಳಿಸುತ್ತಿರುವ ನಿಮಗೆ ನೌಕರರಿಂದ ತುಂಬಾ ಧನ್ಯವಾದಗಳು .

  • ಧನ್ಯವಾದಗಳು. ನಮ್ಮ್ ಕಷ್ಟವನ್ನು ಅರಿತು ಸರಕಾರಕ್ಕೆ ತಿಳಿಸುತ್ತಿರುದಕ್ಕೆ ಧನ್ಯವಾದಗಳು ಸರ್‌ ನಿಮ್ಮ ಸಮಾಜಮುಖಿ ಕಾರ್ಯ ನಿರಂತರವಾಗಿರಲಿ ಸರ್‌.

  • ಸಾರಿಗೆ ನೌಕರರ ಬಗ್ಗೆ ತೋರಿರುವ ವಿಶೇಷ ಕಾಳಜಿಗೆ ಸಾರಿಗೆ ನೌಕರರ ಮತ್ತು ಅವರ ಕುಟುಂಬದ ಪರವಾಗಿ ನಿಮಗೆ ಅನಂತ ಅನಂತ ಕೃತಜ್ಞತೆಗಳು 🙏🙏

  • KSRTC Employees Na ಸರಕಾರಿ ನೌಕರರು ಎಂದು ಘೋಷಣೆ ಮಾಡಿ ಸರಕಾರಿ ನೌಕರರಿಗೆ ಸಿಗುವ ಎಲ್ಲಾ ಸವಲತ್ತು ಸಿಗುವ ಹಾಗೆ ಮಾಡಿ ಇದು CM BSY ಇಂದ ಸಾಧ್ಯ ದಯವಿಟ್ಟು ಘೋಷಣೆ ಮಾಡಿ

  • ತುಂಬಾ ದನ್ಯವಾದಗಳು ಸಾರಿಗೆ ಸಿಬ್ಬಂದಿಗಳ ಕಷ್ಟಕ್ಕೆ ದನಿಯಾಗಿದ್ದಿರಿ.ನಿಮ್ಮೆಲರ ಪ್ರಯತ್ನದಿಂದ ಸಿಬ್ಬಂದಿಗಳಿಗೆ ಒಳ್ಳೆಯದಾಗಲಿ

  • ನಮ್ಮ ನೋವು ಮತ್ತು ಕಷ್ಟಗಳನ್ನು ಅಚ್ಚುಕಟ್ಟಾಗಿ ತಾವು ತಿಳಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ನಮ್ಮ ಈ ಬೇಡಿಕೆ ಸಿಎಂ ಯಡಿಯೂರಪ್ಪ ನವರು ಮಾತ್ರ ಈಡೇರಿಸಲು ಸಾಧ್ಯ ದೇವರು ಅವರಿಗೆ ಆಯಸ್ಸು ಆರೋಗ್ಯ ಉನ್ನತವಾದ ಸ್ಥಾನಮಾನ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ.

  • ತುಂಬಾ ಧನ್ಯವಾದಗಳು ಸರ್, ಸಂಕಷ್ಟಕ್ಕೆ ಸಿಲುಕಿರುವ ಸಾರಿಗೆ ನೌಕರರ ಪರ ದ್ವನಿಯಾಗಿದ್ದಕ್ಕೆ

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...