NEWSನಮ್ಮಜಿಲ್ಲೆರಾಜಕೀಯ

ಅನೈತಿಕ ತೆರಿಗೆ ವಿಧಿಸಿರುವ ಬಿಬಿಎಂಪಿ ವಿರುದ್ಧ ಆಮ್ ಆದ್ಮಿ ಪಕ್ಷ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಬೆಂಗಳೂರಿನ ಜನ ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಈ ನಡುವೆ ನೀವು ತೆರಿಗೆ ವಸೂಲಿ ನೆಪದಲ್ಲಿ ದಂಡ ವಿಧಿಸುವುದು ಸರಿಯಲ್ಲ. ಆದರಿಂದ ನೀವು ಹಾಕುತ್ತಿರುವ ದಂಡವನ್ನು ವಾಪಸ್‌ ಪಡೆಯಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಗೌರವ ಗುಪ್ತಾ ಅವರಿಗೆ ಆಮ್ ಆದ್ಮಿ ಪಾರ್ಟಿ ಮನವಿ ಸಲ್ಲಿಸಿತು.

ಗುರುವಾರ ಬಿಬಿಎಂಪಿ ಕಚೇರಿ ಮುಂದೆ ಜಮಾವಣೆಗೊಂಡ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ಮಾಡಿ, 2020 ಮತ್ತು 2021 ರ ಕೋವಿಡ್ ಬಿಕ್ಕಟ್ಟು ಮತ್ತು ಲಾಕ್‌ಡೌನ್‌ಗಳಿಂದಾಗಿ ನಾಗರಿಕರು ಅನೇಕ ಸಂಕಷ್ಟಗಳಿಗೆ ಒಳಾಗಿದ್ದಾರೆ. ಸತತ 15 ತಿಂಗಳು, ಉದ್ಯೋಗವನ್ನು ಕಳೆದುಕೊಂಡು ಆದಾಯವಿಲ್ಲದೆ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳು ಹೆಚ್ಚು ಸಮಸ್ಯೆ ಎದುರಿಸುತ್ತಿವೆ. ಈ ನಡುವೆ ನೀವು ತೆರಿಗೆ ಕಟ್ಟಿಲ್ಲ ಎಂದು ದಂಡವಿಧಿಸುವ ಕೆಲಸಕ್ಕೆ ಕೈ ಹಾಕಿರುವುದು ಸರಿಯಲ್ಲಿ ಈ ಕೂಡಲೇ ದಂಡ ಹಾಕಿರುವುದನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಇನ್ನು ಇತರ ದೇಶಗಳಲ್ಲಿನ ಸರ್ಕಾರಗಳು ಆಸ್ತಿ ತೆರಿಗೆಗಳಲ್ಲಿ ವಿನಾಯಿತಿ ನೀಡಿ, ಹಣಕಾಸಿನ ನೆರವು ನೀಡುವ ಮೂಲಕ ಬದುಕಿನ ಭದ್ರತೆ ನೀಡಿವೆ. ನಮ್ಮ ದೇಶದಲ್ಲಿ ಸರ್ಕಾರ ನಾಗರಿಕರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಸೋಂಕಿತರು ಆಸ್ಪತ್ರೆ ವೆಚ್ಚವನ್ನು ಭರಿಸಲು ತಮ್ಮ ಉಳಿತಾಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಆದರೂ ಸರ್ಕಾರ ಜನರ ನೆರವಿಗೆ ಬಾರದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಸಂದಿಗ್ಧತೆಯ ಸಮಯದಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಬೇಡಿಕೆ ನೋಟಿಸ್ ಕಳುಹಿಸುವ ಮೂಲಕ ಮತ್ತು ಹೆಚ್ಚುವರಿಯಾಗಿ ದಂಡ ವಿಧಿಸುವ ಮೂಲಕ ಜನತೆಗೆ ಆಘಾತಕಾರಿ ಶಾಕ್ ನೀಡಿದೆ ಎಂದು ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಕಿರಿಕಾರಿದರು.

ಬೆಂಗಳೂರಿನ ಹಲವು ನಿವಾಸಿಗಳು ಆಮ್ ಆದ್ಮಿ ಪಕ್ಷದ (ಎಎಪಿ) ಇತರ ಸದಸ್ಯರ ಜೊತೆಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಎಸ್‌ಎಎಸ್ ಯೋಜನೆಯಡಿ ಶ್ರದ್ಧೆಯಿಂದ ತೆರಿಗೆ ಪಾವತಿಸುವ ನಿವಾಸಿಗಳಿಗೆ ಕೂಡ ಈ ದಂಡ ಸಹಿತ ತೆರಿಗೆ ಬಡ್ಡಿ ಪಾವತಿಸಲು ನೋಟಿಸ್‌ಗಳನ್ನು ನೀಡಲಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಏಕೆಂದರೆ ವಲಯ ಮರು ವರ್ಗೀಕರಣದ ಆಧಾರದ ಮೇಲೆ ಅನ್ವಯವಾಗುವ ದರಗಳ ಪ್ರಕಾರ ಅವರು ಆಸ್ತಿ ತೆರಿಗೆಯನ್ನು ಪಾವತಿಸಲಿಲ್ಲ ಎಂಬ ಕಾರಣಕ್ಕೆ. ಇದು ಸರಿಯಾದ ನಡೆಯಲ್ಲ ಎಂದು ಬಿಬಿಎಂಪಿ ವಿರುದ್ಧ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಮುಂದಿನ ದಿನಗಳಲ್ಲಿ ಕಷ್ಟಪಟ್ಟು ತೆರಿಗೆ ಪಾವತಿಸುತ್ತಿರುವ ಜನರನ್ನು ತೆರಿಗೆ ಕಳ್ಳರು ಎಂದು ಜನರಿದರೆ ಜನರೇ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಈ ಕೆಳಗಿನ ಕಾರಣಗಳಿಗಾಗಿ ನೋಟಿಸ್ ಹಿಂಪಡೆಯುವಂತೆ ಎಎಪಿ ಆಗ್ರಹ
1) ಕೋವಿಡ್ ಸಂದರ್ಭದಲ್ಲಿ ಈ ರೀತಿ ದಂಡ ವಿಧಿಸುವುದು ನಾಗರಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರ ತಳೆದಿರುವ ಬೇಜವಾಬ್ದಾರಿಯುತ ಅಸಡ್ಡೆ ತೋರಿಸುತ್ತದೆ.

2) ನೀವು ನಾಗರಿಕರ ಸ್ಥಿತಿಯನ್ನು ನಿರ್ಲಕ್ಷಿಸುತ್ತಿದ್ದೀರಿ ಮತ್ತು ಈ ದಂಡವನ್ನು ಪಾವತಿಸಲು ಒತ್ತಾಯಿಸುತ್ತಿದ್ದೀರಿ. ವಿಪರ್ಯಾಸ ಎಂದರೆ ಪ್ರಾಮಾಣಿಕ ತೆರಿಗೆ ಪಾವತಿಸುವ ನಾಗರಿಕರ ಮೇಲೆ ಕೂಡ ದಂಡ ವಿಧಿಸಲಾಗಿದೆ.

3) ತಂತ್ರಜ್ಞಾನ ಮತ್ತು ಜಿಪಿಎಸ್ ಮ್ಯಾಪಿಂಗ್ ಯುಗದಲ್ಲಿ, ಜಿಪಿಎಸ್ ಬಳಸಿ ವಲಯ ವರ್ಗೀಕರಣ ಮತ್ತು ಮರು ವರ್ಗೀಕರಣವನ್ನು ಖಾತ್ರಿಪಡಿಸುವ ಹಲವು ವೇಗದ ಮತ್ತು ತಾಂತ್ರಿಕವಾಗಿ ಮುಂದುವರಿದ ಮಾರ್ಗಗಳಿವೆ. ಹೀಗಿರುವಾಗ ಕಟ್ಟಡದ ಗಾತ್ರಗಳನ್ನು ಪರಿಶೀಲಿಸಲು ತಂತ್ರಜ್ಞಾನವನ್ನು ಬಳಸಬೇಕು.

4) ಬೆಸ್ಕಾಂ ಮತ್ತು ಇತರ ಯುಟಿಲಿಟಿ ಬಿಲ್ಲುಗಳನ್ನು ಲಿಂಕ್ ಮಾಡುವುದರಿಂದ ವಾಣಿಜ್ಯ/ವಸತಿ ಬಳಕೆಗಳ ಬಗ್ಗೆ ಸ್ಪಷ್ಟತೆ ನೀಡಬೇಕು.

5) ವಲಯಗಳ ವರ್ಗೀಕರಣದಲ್ಲಿ ಪಾರದರ್ಶಕತೆಯ ಕೊರತೆಯಿದೆ, ಸರಳ ಮಧ್ಯಮ ವರ್ಗದ ನಿವಾಸಿಗಳು ತಮ್ಮ ವಸತಿ ವಲಯಗಳನ್ನು ನಿಖರವಾಗಿ ನಿರ್ಣಯಿಸಲು ಅಸಾಧ್ಯ.

ಆದ್ದರಿಂದ, ಬಿಬಿಎಂಪಿಯಿಂದ ನೀಡಲಾದ ತೆರಿಗೆ ಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಮತ್ತು ವಸತಿ ಆಸ್ತಿ ಮಾಲೀಕರಿಗೆ 6 ತಿಂಗಳು ಹೆಚ್ಚುವರಿ ಸಮಯವನ್ನು ಮತ್ತು ವಾಣಿಜ್ಯ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆ ವ್ಯತ್ಯಾಸವನ್ನು ಪಾವತಿಸಲು 3 ತಿಂಗಳು ಹೆಚ್ಚುವರಿ ಸಮಯವನ್ನು ಒದಗಿಸಬೇಕು ಹಾಗೂ ದಂಡವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸುತ್ತಿದ್ದೇವೆ.

ಈ ಸೂಚನೆಯನ್ನು ಹಿಂಪಡೆಯದಿದ್ದರೆ ಎಎಪಿ ನಾಯಕರು ಮತ್ತು ಕಾರ್ಯಕರ್ತರು ಸರ್ಕಾರದ ಈ ಕಠಿಣ ನೀತಿಯ ವಿರುದ್ಧ ಅನಿರ್ದಿಷ್ಟ ಮುಷ್ಕರ ನಡೆಸುತ್ತಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ನಗರ ಘಟಕ ಅಧ್ಯಕ್ಷ ಮೋಹನ್ ದಾಸರಿ ಹಾಗೂ ಕಾರ್ಯಕರ್ತರೊಂದಿಗೆ ಮುಖ್ಯ ಆಯುಕ್ತರಿಗೆ ಎಚ್ಚರಿಕೆ ಪತ್ರವನ್ನು ನೀಡಲಾಯಿತು. ಪಣಿರಾಜ್ ಎಸ್. ವಿ, ರಾಜಶೇಖರ್ ದೊಡ್ಡಣ್ಣ, ಸುಮನ್ ಪ್ರಶಾಂತ್, ಜಗದೀಶ್ ಚಂದ್ರ, ಪುಟ್ಟಣ್ಣ ಗೌಡ ಹಾಗೂ ಇತರರು ಭಾಗವಹಿಸಿದ್ದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...