ರಾಯಚೂರು: ಕೊರೊನಾದಿಂದ ಸತ್ತವರ ಮನೆಗೆ ಬಿಜೆಪಿ ನಾಯಕರು ಯಾರೂ ಹೋಗಲಿಲ್ಲ. ಅಂದರೆ ಬಿಜೆಪಿ ಸರ್ಕಾರ ಜನರಿಗೆ ಬೂದಿ ಆಶೀರ್ವಾದ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಾಯಚೂರಿನಲ್ಲಿ ಕಲಬುರಗಿ ವಿಭಾಗೀಯ ಮಟ್ಟದ ಕಾಂಗ್ರೆಸ್ ಸಭೆ ಬಳಿಕ ಮಾತನಾಡಿದ ಅವರು, 4 ಲಕ್ಷ ಜನ ಕೊರೊನಾಗೆ ಬಲಿಯಾಗಿದ್ದಾರೆ. ಜನರಿಗೆ ಬಿಜೆಪಿ ಸರ್ಕಾರ ಏನು ಆಶೀರ್ವಾದ ಮಾಡಿದೆ. ಜನ ಸತ್ತಿರುವ ಬೂದಿ ನೋಡಿದವಲ್ಲಾ ಇದೇನಾ ಆಶೀರ್ವಾದ ಎಂದು ಕಿಡಿಕಾರಿದರು.
ಸರ್ಕಾರ ಔಷಧ, ಗೋಧಿ, ಆಸ್ಪತ್ರೆ ಬೆಡ್ ಕೊಟ್ಟು ಆಶೀರ್ವಾದ ಮಾಡಲಿಲ್ಲ. ಸಿಎಂ ಯಾಕೆ ಬದಲಾವಣೆ ಮಾಡಿದ್ದಾರೆ ಅಂತ ಬಿಜೆಪಿ ಅವರು ಹೇಳಬೆಕು ಎಂದರು.
ಅಕ್ಟೋಬರ್‌ನಲ್ಲಿ ಗಾಂಧಿ ನೆನಪಲ್ಲಿ ಪ್ರತಿ ಪಂಚಾಯತಿಯಲ್ಲಿ ಸಭೆ. ನವೆಂಬರ್ ನೆಹರು ಜನ್ಮದಿನ ಹಿನ್ನೆಲೆ ಪ್ರಜಾಪ್ರಭುತ್ವ ಕುರಿತು ಜಾಗೃತಿ. ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನ ಹಿನ್ನೆಲೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದರು.
ಇನ್ನು ನಮ್ಮ ಎಲ್ಲಾ ಕಾರ್ಯಕರ್ತರಿಗೂ ಕೆಲಸ ಹಂಚುತ್ತಿದ್ದೇವೆ. ನಿಷ್ಕ್ರಿಯ ಇದ್ದವರು ಕೆಲಸ ಮಾಡುವವರಿಗೆ ಅವಕಾಶ ಕೊಡಬೇಕು ಅನ್ನೋ ಸಂದೇಶ ನೀಡಿದ್ದೇವೆ ಅಂತ ಶಿವಕುಮಾರ್ ಹೇಳಿದರು.
ಸಭೆಯಲ್ಲಿ ವಿಭಾಗೀಯ ಮಟ್ಟದ ನಾಯಕರಿಗೆ ಟಾರ್ಗೆಟ್ ಕೊಟ್ಟಿದ್ದೇವೆ. ಟಾರ್ಗೆಟ್ ಏನಂದ್ರೆ 75 ವರ್ಷದ ಸ್ವಾತಂತ್ರ್ಯ ಹಿನ್ನೆಲೆ ಇಡೀ ವರ್ಷ ಆಚರಣೆ ಮಾಡುವುದು. ಕಾಂಗ್ರೆಸ್ ಮಾತ್ರವಲ್ಲದೆ ಎಲ್ಲರನ್ನು ಒಳಗೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕು. ಒಂದೊಂದು ತಿಂಗಳು ಒಂದೊಂದು ಹೆಸರಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.