ಹಾವೇರಿ: ಜಿಲ್ಲೆಯಲ್ಲಿ ಬೆಳೆ ವಿಮೆ ವಿತರಣೆ ಬಾಕಿ ಇರುವ ರೈತರ ಪಟ್ಟಿಯನ್ನು ಆಯಾ ತಾಲೂಕಿನ ರೈತ ಸಂಪರ್ಕದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಅರ್ಹ ರೈತರು ತಮ್ಮ ಹೆಸರನ್ನು ಪರಿಶೀಲಿಸಿಕೊಂಡು ಆಧಾರ್ ಕಾರ್ಡ್ ಸರಿಪಡಿಸಿ ಬ್ಯಾಂಕ್‍ನಲ್ಲಿ ಎನ್.ಪಿ.ಸಿ.ಐ ಸೀಡಿಂಗ್ ಮಾಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.
2019-20 ನೇ ಸಾಲಿನ ಮುಂಗಾರು ಹಂಗಾಮು, ಹಿಂಗಾರು ಮತ್ತು ಬೇಸಿಗೆ ಹಂಗಾಮು, 2020 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೆಳೆ ವಿಮೆ ವಿತರಣೆ ಮಾಡಿ ಉಳಿದ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಿ ಜಿಲ್ಲೆಯಲ್ಲಿ 2019 ಮುಂಗಾರು ಹಂಗಾಮಿನಲ್ಲಿ 3181 ರೈತರು.
2019 ಹಿಂಗಾರು ಹಂಗಾಮಿನಲ್ಲಿ 538 ರೈತರು, ಬೇಸಿಗೆ ಹಂಗಾಮಿನಲ್ಲಿ 5 ರೈತರು ಹಾಗೂ 2020 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 512 ರೈತರು ಸೇರಿ ಜಿಲ್ಲೆಯಲ್ಲಿ 4236 ರೈತರ ಆಧಾರ ಸಂಖ್ಯೆ ಹಾಗೂ ಮ್ಯಾಪಿಂಗ್ ಆಗಲಾರದೇ ಬೆಳೆ ವಿಮೆ ಪರಿಹಾರ ಮೊತ್ತ ವಿತರಣೆಗೆ ಬಾಕಿ ಇದೆ.
ಬೆಳೆ ವಿಮೆ ವಿತರಣೆಗೆ ಬಾಕಿ ಇದ್ದ ರೈತರ ಪಟ್ಟಿಯನ್ನು ಆಯಾ ತಾಲೂಕಿನ ರೈತ ಸಂಪರ್ಕ ಕೇಂದ್ರದ ಸೂಚನಾ ಫಲಕದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.
ಮೇಲ್ಕಂಡ ಸಾಲಿನಲ್ಲಿ ವಿಮೆ ನೋಂದಣಿ ಮಾಡಿಸಿದ ಪ್ರಕಟಿಸಿದ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಕುರಿತು ಪರಿಶೀಲಿಸಿ ಹತ್ತಿರದ ಆಧಾರ ನೋದಣಿ ಕೇಂದ್ರಗಳಲ್ಲಿ ಆಧಾರ ಕಾರ್ಡ್ ಸರಿಪಡಿಸಿ ಸಂಬಂಧಿಸಿದ ಬ್ಯಾಂಕ್‍ಗಳಲ್ಲಿ ಸರಿಪಡಿಸಿಕೊಂಡಲ್ಲಿ ಬೆಳೆ ವಿಮೆ ಪರಿಹಾರ ಮೊತ್ತ ಜಮೆ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.