NEWSನಮ್ಮರಾಜ್ಯರಾಜಕೀಯ

ಪ್ರಧಾನಿ ಮೋದಿ ಮಹಾನ್‌ ಸುಳ್ಳುಗಾರ: ಕೆಪಿಸಿಸಿ ಮುಖ್ಯ ವಕ್ತಾರ ಉಗ್ರಪ್ಪ ವಾಗ್ದಾಳಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ದೇಶ ಕಂಡ ಅತ್ಯಂತ ಸುಳ್ಳುಗಾರ ಮತ್ತು ಮಹಾ ಭ್ರಷ್ಟ ಪ್ರಧಾನಿಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಒಬ್ಬರೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.

ನಗರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳುಗಳನ್ನು ಹೇಳಿಕೊಂಡು ಹೆಚ್ಚು ದಿನ ಜನರನ್ನು ವಂಚಿಸಲು ಸಾಧ್ಯವಿಲ್ಲ. 18 ದಿನ ಕುರುಕ್ಷೇತ್ರ ಯುದ್ಧ ನಡೆದಿದೆ. ವೈರಸ್ ವಿರುದ್ಧ ನಾವು 21 ದಿನ ಯುದ್ಧ ಮಾಡೋಣ ಎಂದು ಪ್ರಧಾನಿ ಮೋದಿ 2020ರ ಮಾರ್ಚ್‌20ರಂದು ಹೇಳಿದ್ದರು.

ಅವತ್ತು ಕೇವಲ 565 ಪಾಸಿಟಿವ್ ಪ್ರಕರಣಗಳಿದ್ದವು. ಇವತ್ತು ಎಷ್ಟು ಕೋಟಿ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ? ಮೂರು ಲಕ್ಷ ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇದು ಮೋದಿ ದೇಶದ ಜನತೆಗೆ ಹೇಳಿದ ಮಹಾಸುಳ್ಳು ಎಂದು ಕಿಡಿಕಾರಿದರು.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಸುಮಾರು 39 ಸಾವಿರ ಕೋಟಿ ಕಿಕ್‌ಬ್ಯಾಕ್ ಪಡೆಯಲಾಗಿದೆ. ಈ ಹಣ ಮೋದಿ ಮೂಲಕವೇ ಅದಾನಿ, ಅಂಬಾನಿ ಕುಟುಂಬಕ್ಕೆ ತಲುಪಿದೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ಅವರ ಇಮೇಜ್ ಶೇ.64ರಿಂದ 65 ಇತ್ತು. ಈಗ ಅದು ಶೇ.24ಕ್ಕೆ ಕುಸಿದಿದೆ. ಮೋದಿ ಇಮೇಜ್ ಕುಸಿದಿರುವ ಕಾರಣಕ್ಕಾಗಿಯೇ ಗುಜರಾತಿನಲ್ಲಿ ಮೊದಲ ಸಲ ಶಾಸಕರಾಗಿರುವ ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಮಾಡಲಾಗಿದೆ.

ತೈಲಬೆಲೆ ಏರಿಕೆ ವಿರುದ್ಧ ಜನರ ಆಕ್ರೋಶವನ್ನು ತಪ್ಪು ದಾರಿಗೆ ಎಳೆಯಲು ಬಿಜೆಪಿ ಮುಖಂಡರು ವ್ಯವಸ್ಥಿತವಾದ ಸಂಚು ನಡೆಸುತ್ತಿದ್ದಾರೆ ಎಂದು ದೂರಿದರು.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ