ಎನ್ಸಿಎಲ್ಎಟಿ ಅಧ್ಯ ಕ್ಷ ಸ್ಥಾನ: ತರಾತುರಿಯಲ್ಲಿ ಭರ್ತಿಗೆ ಸುಪ್ರೀಂ ಅಸಮಾಧಾನ
ನ್ಯೂಡೆಲ್ಲಿ: ರಾಷ್ಟ್ರೀ ಯ ಕಂಪನಿ ಕಾನೂನು ಮೇಲ್ಮ ನವಿ ನ್ಯಾ ಯಮಂಡಳಿಗೆ (ಎನ್ಸಿಎಲ್ಎಟಿ) ಹಂಗಾಮಿ ಅಧ್ಯ ಕ್ಷರನ್ನಾ ಗಿ ನ್ಯಾ ಯಮೂರ್ತಿ ಎಂ. ವೇಣುಗೋಪಾಲ್ ಅವರನ್ನು ತರಾತುರಿಯಲ್ಲಿ ನೇಮಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯ ನ್ಯಾ ಯಮೂರ್ತಿ ಎನ್.ವಿ.ರಮಣ, ನ್ಯಾ ಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಲ್. ನಾಗೇಶ್ವರ ರಾವ್ ಅವರನ್ನು ಒಳಗೊಂಡ ನ್ಯಾ ಯಪೀಠವು ಈ ಕುರಿತ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಳ್ಳು ವುದಾಗಿ ತಿಳಿಸಿದೆ.
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಗುರುವಾರದ ವಿಚಾರಣೆ ವೇಳೆ ಹಾಜರಿರಬೇಕು ಎಂದು ಪೀಠಸೂಚಿಸಿದೆ.
ಎನ್ಸಿಎಲ್ಎಟಿ ಅಧ್ಯ ಕ್ಷರಾದ ಚೀಮಾಅವರ ನಿವೃತ್ತಿ ಗೆ 10 ದಿನಮೊದಲೇ ವೇಣುಗೋಪಾಲ್ ಅವರನ್ನು ನೇಮಿಸಲಾಗಿದೆ. ಇದು ಹೇಗೆ ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಪೀಠ ಅಸಮಾಧಾನ ವ್ಯ ಕ್ತಪಡಿಸಿತು.
ಕೇಂದ್ರ ಸರ್ಕಾರ ಎನ್ಸಿಎಲ್ಟಿಗೆ 8 ನ್ಯಾ ಯಾಂಗ ಸದಸ್ಯ ರು ಮತ್ತು 10 ತಾಂತ್ರಿ ಕ ಸದಸ್ಯ ರನ್ನು ನೇಮಿಸುವ ಪ್ರಸ್ತಾವನೆಗೆ ಶನಿವಾರ ಅನುಮೋದನೆ ನೀಡಿತ್ತು.