NEWSನಮ್ಮರಾಜ್ಯ

ಅನಿವಾರ್ಯದಿಂದ ಲೇಬರ್‌ ಕೋರ್ಟ್‌ ಕದ ತಟ್ಟುತ್ತಿರುವ ವಜಾಗೊಂಡ ಸಾರಿಗೆ ನೌಕರರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮುಷ್ಕರದ ವೇಳೆ ವಜಾಗೊಂಡಿರುವ ಸುಮಾರು 2,156 ಸಾರಿಗೆ ನೌಕರರು ಸರ್ಕಾರ ಮತ್ತು ಸಾರಿಗೆ ನಿಗಮಗಳ ವಿಳಂಬ ದೋರಣೆಯಿಂದ ತ್ರಿಶಂಕುಸ್ಥಿತಿಯಲ್ಲಿದ್ದು, ವಿಧಿ ಇಲ್ಲದೆ ಲೇಬರ್‌ ಕೋರ್ಟ್‌ ಕದತಟ್ಟುತ್ತಿದ್ದಾರೆ.

ಹೌದು! ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಮುಷ್ಕರದ ವೇಳೆ ವಜಾ ಮಾಡಿರುವ ನೌಕರರನ್ನು ಇನ್ನೂ ಕರ್ತವ್ಯಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ವಜಾಗೊಂಡಿರುವ ನೌಕರರನ್ನು ವಜಾ ಆದೇಶ ಹೊರಡಿಸಿದ 6ತಿಂಗಳ ಒಳಗಾಗಿ ಮತ್ತೆ ಅವರ ಪ್ರಕರಣವನ್ನು ವಾಪಸ್‌ ಪಡೆದು ಕರ್ತವ್ಯಕ್ಕೆ ತೆಗೆದುಕೊಳ್ಳಬೇಕಿತ್ತು. ಈ ಬಗ್ಗೆ ಸಚಿವರು ಭರವಸೆಯನ್ನೂ ನೀಡಿದ್ದರು.

ಆದರೆ, ನೌಕರರನ್ನು ವಜಾ ಮಾಡಿ ಇದೇ ಅಕ್ಟೋಬರ್‌ 8ರಿಂದ ಹಂತಹಂತವಾಗಿ ಆರು ತಿಂಗಳುಗಳು ಮೀರಲಿದೆ. ಹೀಗಿದ್ದರೂ ನಿಗಮಗಳು ಈ ವಜಾ ಮಾಡಿರುವ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತ ಯಾವುದೇ ಸೂಚನೆಗಳು ಸದ್ಯದ ಮಟ್ಟಿಗೆ ಕಾಣಿಸುತ್ತಿಲ್ಲ. ಹೀಗಾಗಿ ವಜಾಗೊಂಡಿರುವ ಎಲ್ಲ ನೌಕರರು ಈಗ ಕಾರ್ಮಿಕ ನ್ಯಾಯಾಲಯ (ಲೇಬರ್‌ ಕೋರ್ಟ್‌)ದ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಈ ಹಿಂದಿನಿಂದಲೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ವಜಾಗೊಂಡಿರುವ ನೌಕರರು ಸೇರಿದಂತೆ ಎಲ್ಲ ನೌಕರರನ್ನು 10ದಿನದೊಳಗಾಗಿ ವಾಪಸ್‌ ತೆಗೆದುಕೊಳ್ಳುತ್ತೇವೆ ಎಂದು ಹೇಳಿಕೊಂಡೇ ಬಂದಿದ್ದಾರೆ. ಸಚಿವರ ಹೇಳಿದ ಹತ್ತು, ಹತ್ತು ದಿನಗಳು ಹಲವು ಬಾರಿ ಉರುಳಿ ಹೋಗಿವೆ, ಇನ್ನೂ ಉರುಳುತ್ತಲೇ ಇವೆ. ಆದರೆ ನೌಕರರ ಮೇಲಿನ ವಜಾ ಆದೇಶವನ್ನು ಮಾತ್ರ ರದ್ದು ಮಾಡಿ ಕೆಲಸಕ್ಕೆ ತೆಗೆದುಕೊಂಡಿಲ್ಲ.

ಇನ್ನು ಇಲ್ಲಿಯವರೆಗೂ ಸಚಿವರು ಮತ್ತು ಸರ್ಕಾರ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಂಬಿದ್ದ ವಜಾಗೊಂಡ ನೌಕರರು ಈಗ ವಿಧಿಯಿಲ್ಲದೆ ಲೇಬರ್‌ ಕೋರ್ಟ್‌ ಮೊರೆ ಹೋಗಬೇಕಿದೆ.

ಹೀಗೆ ಲೇಬರ್‌ ಕೋರ್ಟ್‌ಗೆ ನೌಕರರು ಹೋಗುತ್ತಿರುವುದರಿಂದ ಅವರಿಗೆ ಇನ್ನಷ್ಟು ಆರ್ಥಿಕ ಹೊರೆ ಬೀಳುತ್ತಿದೆ. ಈ ಹೊರೆಯನ್ನು ಸಚಿವರು ತಪ್ಪಿಸಬಹುದಿತ್ತು. ಆದರೆ ಅವರು ದಿನ ದೂಡುವುದರಲ್ಲೇ ಕಾಲ ಕಳೆಯುತ್ತಿರುವುದರಿಂದ ನೌಕರರು ಮಾಡದ ತಪ್ಪಿಗೆ ಪರಿತಪ್ಪಿಸುವಂತಾಗಿದೆ.

ಇನ್ನು ಈಗಲಾದರೂ ವಜಾಗೊಂಡಿರುವ ಎಲ್ಲ ನೌಕರರ ವಜಾ ಆದೇಶವನ್ನು ರದ್ದು ಮಾಡುತ್ತೇವೆ ಯಾರು ಲೇಬರ್‌ ಕೋರ್ಟ್‌ ಮೊರೆ ಹೋಗಬೇಡಿ ಎಂದು ಹೇಳಿ 3-4 ದಿನದಲ್ಲಿ ವಜಾ ಆದೇಶ ರದ್ದು ಮಾಡಿದರೆ ನೌಕರರಿಗೆ ಸದ್ಯ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸಬಹುದಾಗಿದೆ.

ಈಗಾಗಲೇ ಕೆಲಸವೂ ಇಲ್ಲದೆ ಇತ್ತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೌಕರರಿಗೆ ಭರವಸೆ ನೀಡಿದ ಸಚಿವರು ಇನ್ನೂ ಆ ಭರವಸೆ ಈಡೇರಿಸದ ಕಾರಣ ನೋವಿನಲ್ಲೇ ಲೇಬರ್‌ ಕೋರ್ಟ್‌ ಕದ ತಟ್ಟುವಂತಾಗಿದೆ.

ಒಂದು ವೇಳೆ ವಜಾಗೊಂಡ ನೌಕರರು ಲೇಬರ್‌ ಕೋರ್ಟ್‌ ಮೊರೆ ಹೋಗದಿದ್ದರೆ ಈಗಾಗಲೇ ನೌಕರರನ್ನು ಕಂಡರೆ ಕೆಂಡಕಾರುತ್ತಿರುವ ಕೆಲ ಅಧಿಕಾರಿಗಳಿಗೆ ಒಂದು ಬಲವಾದ ಕಾನೂನು ಅಸ್ತ್ರ ಸಿಕ್ಕಿದಂತ್ತಾಗಿ ಅವರನ್ನು ಇನ್ನಷ್ಟು ಹಿಂಸಿಸುವುದು ಸರಳವಾಗಿ ಬಿಡಲಿದೆ.

ಹೀಗಾಗಿ ಕೆಲ ಅಧಿಕಾರಿಗಳು ನೌಕರರನ್ನು ಅಡಕತ್ತರಿಯಲ್ಲಿ ಸಿಲುಕಿಸಿ ನಂತರ ನಾವು ಮುಂದಿನ ಕ್ರಮ ತೆಗೆದುಕೊಳ್ಳೋಣ ಎಂಬ ಲೆಕ್ಕಚಾರದಲ್ಲಿ ಸರ್ಕಾರ ಮತ್ತು ಸಚಿವರ ದಾರಿ ತಪ್ಪಿಸುತ್ತದ್ದಾರೆ ಎಂಬ ದೂರು ಕೂಡ ಕೇಳಿ ಬರುತ್ತಿದೆ.

ಒಂದು ವೇಳೆ ಲೇಬರ್‌ ಕೋರ್ಟ್‌ ಮೊರೆ ಹೋದರೆ ನೌಕರರಿಗೆ ಹೋದರೆ ಆರ್ಥಿಕ ಸ್ವಲ್ಪ ಹೊರಬೀಳಲಿದೆ. ಆದರೆ ಅಧಿಕಾರಿಗಳ ಕಾನೂನು ಅಸ್ತ್ರದಿಂದ ತಪ್ಪಿಸಿಕೊಂಡು ತಮ್ಮ ನ್ಯಾಯಕ್ಕಾಗಿ ಹೋರಾಡಲು ಶಕ್ತಿ ಬರಲಿದೆ.

ಇದು ಏನೇ ಇರಲಿ ಈಗಲೂ ಕಾಲ ಮಿಂಚಿಲ್ಲ ಸಚಿವರು ಲೇಬರ್‌ ಕೋರ್ಟ್‌ ಮೊರೆ ಹೋಗುತ್ತಿರುವ ನೌಕರರನ್ನು ತಡೆದು ನೀವು ಕೋರ್ಟ್‌ಗೆ ಹೋಗುವುದು ಬೇಡ ನಿಮ್ಮ ವಿರುದ್ಧದ ವಜಾ ಆದೇಶವನ್ನು ನಾವು ವಾಪಸ್‌ ಪಡೆದುಕೊಳ್ಳುತ್ತೇವೆ ಎಂದು ಆ ಎಲ್ಲ ನೌಕರರನ್ನು ತಡೆಯ ಬಹುದಾಗಿ. ಹೀಗಾಗಿ ಆ ನಿಟ್ಟಿನಲ್ಲಿ ಸಚಿವರು ಹೆಜ್ಜೆಹಾಕಬೇಕು ಎಂಬುವುದು ನೊಂದ ನೌಕರರ ಮನವಿ.

Leave a Reply

error: Content is protected !!
LATEST
ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ