CrimeNEWSನಮ್ಮರಾಜ್ಯ

ಕೊರೊನಾಗೆ ಬಲಿಯಾಗಿದ್ದ ಬಿಎಂಟಿಸಿ ನಿರ್ವಾಹಕನ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಶರಣು

ಒಂದೇ ಕುಟುಂಬದ ಮೂವರ ಆತ್ಮಹತ್ಯೆ l ಸಾವಿಗೆ ನಮ್ಮ ಸ್ವಾಭಿಮಾನವೇ ಕಾರಣ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ಇಡೀ ಕುಟುಂಬವನ್ನೇ ಬಲಿ ಪಡೆದ ಕೊರೊನಾ
  • ನಾನೂ ನನ್ನ ಮಕ್ಕಳು ಯಾರಿಗೂ ಭಾರವಾಗುವುದಿಲ್ಲ

ಬೆಂಗಳೂರು: ಬಿಎಂಟಿಸಿ ಪೀಣ್ಯ ಡಿಪೋದಲ್ಲಿ ನಿರ್ವಾಹಕರಾಗಿದ್ದ ಪತಿ ಪ್ರಸನ್ನಕುಮಾರ್ ವರ್ಷದ ಹಿಂದೆ ಕೊರೊನಾದಿಂದ ಮೃತಪಟ್ಟಿದ್ದರು. ಪ್ರಸನ್ನಕುಮಾರ್ ಸಾವಿನ ಜಿಗುಪ್ಸೆಗೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.

ನೆಲಮಂಗಲದ ಮಾದನಾಯಕನ ಹಳ್ಳಿ ಬಳಿಯ ಪ್ರಕೃತಿ ಬಡಾವಣೆಯ ಬಿಎಂಟಿಸಿ ಪೀಣ್ಯ ಡಿಪೋ ನಿರ್ವಾಹಕ ಪ್ರಸನ್ನಕುಮಾರ್ ಅವರ ಪತ್ನಿ ವಸಂತ (40), ಪುತ್ರ ಯಶವಂತ್ (15) ಹಾಗೂ ಪುತ್ರಿ ನಿಶ್ಚಿತಾ (6) ಆತ್ಮಹತ್ಯೆ ಮಾಡಿಕೊಂಡವರು. ಒಂದು ರೂಮಿನಲ್ಲಿ ಮಗ ಇನ್ನೊಂದು ಕೊಠಡಿಯಲ್ಲಿ ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ವಸಂತ ಬರೆದ ಡೆತ್‍ನೋಟ್ ಸಿಕ್ಕಿದೆ.

ಕೊರೊನಾಕ್ಕೆ ಬಲಿಯಾದ ಬಿಎಂಟಿಸಿ ಪೀಣ್ಯ ಡಿಪೋ ನಿರ್ವಾಹಕ ಪ್ರಸನ್ನಕುಮಾರ್ ಅವರ ಕುಟುಂಬಕ್ಕೆ ಕೊರೊನಾ ಪರಿಹಾರ ನಿಧಿಯಡಿ ಬರಬೇಕಿದ್ದ 30 ಲಕ್ಷ ರೂ. ನೀಡಿದ್ದರೆ ಈ ಮೂವರು ಜೀವಗಳು ಬದುಕುಳಿಯುತ್ತಿದ್ದವು. ಆದರೆ, ಸರ್ಕಾರ ಮತ್ತು ನಿಗಮದ ಆಡಳಿತ ವರ್ಗ ಈ ನೌಕರನ ಕುಟುಂಬದ ಬಗ್ಗೆ ತೋರಿದ ನಿರ್ಲಕ್ಷ್ಯದಿಂದ ಇಂದು ಅವರು ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು.

ನನ್ನ ಪತಿ ಇಲ್ಲದ ಮೇಲೆ ನಾವು ಬದುಕಿ ಪ್ರಯೋಜನವಿಲ್ಲ. ನಾನೂ ನನ್ನ ಮಕ್ಕಳು ಯಾರಿಗೂ ಭಾರವಾಗುವುದಿಲ್ಲ. ನಮ್ಮ ಸಾವಿಗೆ ನಮ್ಮ ಸ್ವಾಭಿಮಾನವೇ ಕಾರಣ ಎಂದು ಡೆತ್ ನೋಟ್ ಬರೆದು ವಸಂತ ತನ್ನ ಮಕ್ಕಳ ಜೊತೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಿಂದ ಯಾರೂ ಹೊರಬರುತ್ತಿಲ್ಲ ಎಂದು ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಾದನಾಯಕನ ಹಳ್ಳಿ ಪೊಲೀಸರು ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಡೆತ್‍ನೋಟ್‍ನಲ್ಲಿ ಏನಿದೆ?
ಮಕ್ಕಳನ್ನು ಬಿಟ್ಟು ನಾನು ಒಬ್ಬಳೇ ಸಾಯಲು ತಯಾರಿಲ್ಲ. ಮನೆ ಖರೀದಿಗೆ ಸಾಲ ಮಾಡಿದ್ದೇವೆ. ಮನೆಯನ್ನು ಮಾರಾಟ ಮಾಡಿ ಸಾಲ ತೀರಿಸಿ. ಉಳಿದ ಹಣವನ್ನು ಅನಾಥಾಶ್ರಮಕ್ಕೆ ನೀಡಿ ಎಂದು ವಸಂತಾ 2 ಪುಟಗಳ ಡೆತ್‍ನೋಟ್ ಬರೆದಿದ್ದಾರೆ.

ಮನೆ ಖರೀದಿಗೆ ಬ್ಯಾಂಕ್ ಸಾಲ ಹಾಗೂ ಬಡ್ಡಿಗೆ ಸಾಲ ಪಡೆದಿದ್ದರು. ಅರ್ಧದಷ್ಟು ಮನೆ ಸಾಲವನ್ನು ಪ್ರಸನ್ನಕುಮಾರ್ ತೀರಿಸಿದ್ದರು. ಆದರೆ ಪತಿಯ ಹಠಾತ್ ಸಾವಿನಿಂದ ನೊಂದು ವಸಂತ ಮನೆಯಲ್ಲೇ ಏಕಾಂಗಿಯಾಗಿರುತ್ತಿದ್ದರು.

ಅಕ್ಕಪಕ್ಕದವರ ಜೊತೆಗೆ ಮಾತನಾಡುವುದನ್ನು ಬಿಟ್ಟಿದ್ದ ವಸಂತ ಯಾವಾಗಲು ಮಕ್ಕಳ ಬಳಿ ಸಾವಿನ ಬಗ್ಗೆಯೇ ಹೇಳುತ್ತಿದ್ದರು. ವಸಂತಗೆ ಹಲವು ಬಾರಿ ಅವರ ತಾಯಿ, ತಮ್ಮ ಸಮಾಧಾನ ಮಾಡಿದ್ದರು. ಆದರೂ ಒಂದುಕಡೆ ಆರ್ಥಿಕವಾಗಿ ಮತ್ತೊಂದು ಕಡೆ ಮಾನಸಿಕವಾಗಿ ಕುಗ್ಗಿದ ಜೀವ ಕೊನೆಗೆ ಪ್ರಾಣವನ್ನೇ ತೊರೆಯಲು ನಿರ್ಧರಿಸಿತು.

ಆತ್ಮಹತ್ಯೆಗೆ ಯತ್ನಿಸಿದ್ರು:
ಈ ಮೊದಲು ಕೂಡ ಮೂರು ಬಾರಿ ಆತ್ಮಹತ್ಯೆಗೆ ತಾಯಿ, ಮಕ್ಕಳು ಯತ್ನಿಸಿದ್ದರು. ಎರಡು ತಿಂಗಳ ಹಿಂದೆ ಹೆಸರುಗಟ್ಟ ಕೆರೆ ಬಳಿ ಆತ್ಮಹತ್ಯೆಗೆ ವಸಂತ ಪ್ರಯತ್ನಿಸಿದ್ದರು. ಆಗ ಮಗಳು ಕಿರುಚಾಡಿದ್ದರಿಂದ ಸಾರ್ವಜನಿಕರು ಕಾಪಾಡಿದ್ದರು.

ಶುಕ್ರವಾರ ಆತ್ಮಹತ್ಯೆಗೆ ಶರಣಾಗುವ ಮುನ್ನ ಮನೆಯನ್ನು ಲಾಕ್ ಮಾಡಿದ್ದರು. ಆರಂಭದಲ್ಲಿ ಮಗನಿಗೆ ನೇಣು ಹಾಕಿಕೊಳ್ಳಲು ಹೇಳಿ ಬಳಿಕ ಇನ್ನೊಂದು ಕೊಠಡಿಯಲ್ಲಿ ಮಗಳಿಗೆ ನೇಣು ಹಾಕಿ ಕೊನೆಗೆ ವಸಂತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮದುವೆಯಾಗಿ 17 ವರ್ಷವಾಗಿದ್ದರೂ ತುಂಬಾ ಅನ್ಯೋನ್ಯವಾಗಿದ್ದ ವಸಂತ, ಪ್ರಸನ್ನಕುಮಾರ್ ದಂಪತಿ ಸ್ವಂತ ಮನೆ ಕಟ್ಟಿಕೊಂಡು ಸುಖ ಜೀವನ ನಡೆಸುತಿದ್ದರು. ಮೈಸೂರು ಮೂಲದವರಾದ ಇಬ್ಬರೂ ಕೂಡ ಸಂಬಂಧಿಗಳು ಎಂಬ ವಿಚಾರ ಈಗ ತಿಳಿದುಬಂದಿದೆ.

ಶನಿವಾರ ಬೆಳಗ್ಗೆ ಬೆಳಗ್ಗೆ 9 ಗಂಟೆಯ ನಂತರ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.

Leave a Reply

error: Content is protected !!
LATEST
BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ