ಕಲಬುರಗಿ: ರಾಜ್ಯ ಸರಕಾರ ಕೊರೊನಾ ಸಂದರ್ಭದಲ್ಲಿ ನೀಡಿರುವ ವಾಗ್ದಾನದಂತೆ ಸಾರಿಗೆ ನೌಕರರಿಗೆ ಅಗಸ್ಟ್ ಮತ್ತು ಸೆಪ್ಟೆಂಬರ್ ಈ ಎರಡು ತಿಂಗಳ ಸಂಬಳ ಪಾವತಿಸಬೇಕು. ಆದರೆ 2ತಿಂಗಳ ಸಂಬಳದಲ್ಲಿ ಕೇವಲ ಶೇ.50 ರಷ್ಟು ಮಾತ್ರ . ಪಾವತಿಸಲು ನಿರ್ಧರಿಸಿರುವುದನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ(ರಿ) ಖಂಡಿಸುತ್ತದೆ.
ಕಕರಸಾ ವಲಯ ಕಲಬುರಗಿ ವಿಭಾಗದ ಕೂಟ ಗೌರವ ಅಧ್ಯಕ್ಷ ಶೌಕತ್ ಅಲಿ ಆಲೂರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕಲ್ಯಾಣ ಕರ್ನಾಟಕ ವಲಯದಲ್ಲಿ ಒಟ್ಟು ನೌಕರರ ಸಂಬಳ 60 ರಿಂದ 65 ಕೊಟಿ ರೂ.ಗಳಷ್ಟು ಆಗುತ್ತದೆ ಅದೂ ಕೂಡ ಸರಿಯಾದ ಸಮಯಕ್ಕೆ ಸಿಗದೆ ನೌಕರರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಬದಕುತ್ತಿದ್ದಾರೆ.
ಹಸಿದ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಸಾಧ್ಯವಾಗದ ಹಲವು ನೌಕರರು ಆತ್ಮಹತ್ಯೆ ಮಾರ್ಗ ಹಿಡಿಯುತ್ತಿದ್ದಾರೆ. ಇನ್ನು ಕೆಲವರು ಕಿಡ್ನಿ ಮಾರುವುದಾಗಿ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳುತ್ತಿರುವುದು ಸಾರಿಗೆ ಇಲಾಖೆಯ ಆಡಳಿತ ವೈಫಲ್ಯ ಮತ್ತು ಕ್ರೂರವಾದ ಆಡಳಿತ ಎಂಧು ಸ್ಪಷ್ಟವಾಗಿ ಗೋಚರಿಸುತ್ತದೆ.
ಮುಷ್ಕರದ ಸಂಧರ್ಭದಲ್ಲಿ ನೌಕರರನ್ನು ಗುರಿಯಾಗಿಸಿಕೊಂಡು ಶಿಸ್ತು ಮತ್ತು ನಡತೆ ಹೆಸರಿನ ಮೇಲೆ ವರ್ಗಾವಣೆ, ಅಮಾನತು, ಸುಳ್ಳು ಕೇಸ್ ಹಾಗೂ ವಜಾದಂತಹ ಕಠಿಣ ಕ್ರಮಗಳನ್ನು ಜರುಗಿಸುವ ಸರಕಾರ ಸಂಬಳದ ವಿಷಯದಲ್ಲಿ ಜಾಣ ಕುರುಡನಂತೆ ನಡೆದು ಕೊಳ್ಳುತ್ತಿದೆ.
ಹೊಸಪೇಟೆ ವಿಭಾದಗದ ಕಾರ್ಮಿಕನನ್ನನು ಕಲಬುರಗಿ ವಿಭಾಗ-1 ಚಿಂಚೋಳಿ ಘಟಕಕ್ಕೆ ಮುಷ್ಕರದ ಹೆಸರಿನ ಮೇಲೆ ವರ್ಗಾವಣೆ ಮಾಡಲಾಗಿದೆ. ಸರಕಾರದ ಆದೇಶದಂತೆ ಮೂಲ ಸ್ಥಾನಕ್ಕೆ ಮರಳಿ ನಿಯೋಜನೆ ಮಾಡಿರುವದಿಲ್ಲ ಹಾಗೂ ಸಂಬಳವೂ ಇಲ್ಲ ಇದರಿಂದ ಆತ ನೊಂದು ಕಿಡ್ನಿ ಮಾರಲು ಮುಂದಾಗಿದ್ದು ಕಾರ್ಮಿಕರ ದುರಂತವಾಗಿದೆ.
ಅದಕ್ಕಾಗಿ ಸರಕಾರ ತಕ್ಷಣವೇ ತಡೆಹಿಡಿದಿರುವ ಸಂಬಳವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು. ಸುಳ್ಳು ಮೊಕದ್ದಮೆ ರದ್ದು ಮಾಡಿ ಅವರ ಮೂಲ ಸ್ಥಳಕ್ಕೆ ನಿಯೋಜನೆ ಹಾಗೂ ವಜಾ ವರ್ಗಾವಣೆ ಸಂಪೂರ್ಣವಾಗಿ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ.
ಜತೆಗೆ ಸಾರಿಗೆ ಕಾರ್ಮಿಕರ ಹಿತ ಕಾಯುವುದು ಆದ್ಯ ಜವಾಬ್ದಾರಿ ಮತ್ತು ಕರ್ತವ್ಯ ವಾಗಿರುವುದರಿಂದ ಅನಿವಾರ್ಯವಾಗಿ ಶಿಕ್ಷೆಗೆ ಒಳಪಟ್ಟಿರುವ ಕಾರ್ಮಿಕರ ಕುಟುಂಬ ಸಮೇತರಾಗಿ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಮತ್ತೊಮ್ಮೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.