ವಿಜಯಪುರ: ಪ್ರೇಯಸಿಯ ಕಣ್ಣೆದುರೇ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರದ ಭೀಮಾತೀರದಲ್ಲಿ ನಡೆದಿದೆ.
ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಈ ಮರ್ಯಾದೆ ಹತ್ಯೆ ನಡೆದಿದ್ದು, ಪ್ರೇಯಸಿಯ ಕಣ್ಣೆದುರೇ 32 ವರ್ಷದ ಪ್ರಿಯಕರ ರವಿ ನಿಂಬರಗಿ ಹತ್ಯೆಕೋರರ ದಾಳಿಗೆ ಉಸಿರು ಚೆಲ್ಲಿದ್ದಾನೆ. ಈ ಭೀಕರ ಹತ್ಯೆಗೈದು ಶವವನ್ನೂ ಬಿಡದೇ ಪಾಪಿಗಳು ಕೊಂಡೊಯ್ದಿದ್ದಾರೆ.
ಮೂರ್ನಾಲ್ಕು ವರ್ಷಗಳಿಂದ ಅನ್ಯಕೋಮಿನ ಯುವತಿ ಅಮೀನಾ ಬೇಗಂನನ್ನು ಪ್ರೀತಿಸುತ್ತಿದ್ದ ರವಿಯನ್ನು ಹತ್ಯೆಗೈಯಲು ಹುಡುಗಿ ಮನೆಯವರು ಪ್ಲಾನ್ ಮಾಡಿದರು.
ಅದರಂತೆ ರವಿ ಬಳಗಾನೂರನಿಂದ ಸಂತೆ ಮಾಡಿಕೊಂಡು ಬರುವ ವೇಳೆ ಅಡ್ಡಗಟ್ಟಿದ 8 ಮಂದಿ ಇದ್ದ ತಂಡ ಏಕಾಏಕಿ ಪ್ರಹಾರ ಮಾಡಿ ಕೊಲೆಗೈದು ಶವವನ್ನು ಬಿಡದೇ ತೆಗೆದುಕೊಂಡು ಹೋಗಿದೆ.
ಯುವಕನ ಮನೆಗೆ ಓಡೋಡಿ ಬಂದು ಯುವತಿ ವಿಷಯ ಮುಟ್ಟಿಸಿದ್ದಾರೆ. ಈ ಪ್ರಕರಣ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.