Friday, November 1, 2024
NEWSನಮ್ಮಜಿಲ್ಲೆ

ಬಿಎಂಟಿಸಿಯಲ್ಲಿ ಟಾರ್ಗೆಟ್ ಟಾರ್ಚರ್‌: ಕಡಿಮೆ ಆದಾಯ ತಂದಿದ್ದೀರಿ ಎಂದು ನಿರ್ವಾಹಕನಿಗೆ ಶಿಸ್ತು ಕ್ರಮ ಜರುಗಿಸಲು ನೋಟಿಸ್‌ ಕೊಟ್ಟ 34ನೇ ಡಿಪೋ ಡಿಎಂ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ‌ಏಪ್ರಿಲ್‌ನಲ್ಲಿ  ನಡೆದ ಮುಷ್ಕರದ ಬಳಿಕ ಸಾರಿಗೆ ನೌಕರರನ್ನು ಒಂದಲ್ಲ ಒಂದು ರೀತಿ ಕಾಡುತ್ತಿರುವ ಸಾರಿಗೆ ಅಧಿಕಾರಿಗಳು  ಚಿತ್ರಹಿಂಸೆ ನೀಡುವ ಮೂಲಕ ಒತ್ತಡ ಹೆಚ್ಚಾಗುವಂತೆ ಮಾಡುತ್ತಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಅದಕ್ಕೆ ನಿದರ್ಶನ ಎಂಬಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾರಿಗೆ ಸಿಬ್ಬಂದಿಗೆ ಟಾರ್ಗೆಟ್ ಟಾರ್ಚರ್ ನೀಡುತ್ತಿದೆ. ಹೌದು! ಸಂಸ್ಥೆಯು ನಿಗದಿಪಡಿಸಿದ ಆದಾಯ ಗುರಿಮುಟ್ಟದ ಚಾಲಕ ಮತ್ತು ನಿರ್ವಾಹಕರಿಗೆ ಬಿಎಂಟಿಸಿ ನೋಟಿಸ್ ನೀಡುತ್ತಿದೆ.

ಮಹಾನಗರ ಸಾರಿಗೆ ಸಂಸ್ಥೆಯ ಈ ನಡೆಯಿಂದ ಈಗಾಗಲೇ ಮಾನಸಿಕವಾಗಿ ಮತ್ತು ದೈಹಿಕವಾಗಿಯು ಕುಗ್ಗಿ ಹೋಗಿರುವ ಚಾಲನ ಸಿಬ್ಬಂದಿ ಈ ನೋಟಿಸ್‌ಗಳನ್ನು ನೀಡುತ್ತಿರುವುದರಿಂದ ಕಂಗಾಲಾಗಿದ್ದಾರೆ.

ಇನ್ನು ರಾತ್ರಿ ಪಾಳಿಯ ಸಿಬ್ಬಂದಿಗಳಿಗೆ ಹೆಚ್ಚಿನ ಆದಾಯ ತರುವಂತೆ ಕಿರುಕುಳ ನೀಡುತ್ತಿದ್ದಾರೆ. ನಿರ್ವಾಹಕರು ಆದಾಯ ತರದೇ ಇದ್ದರೆ ನಿರ್ಲಕ್ಷ್ಯ ತನ, ಅಸಡ್ಡೆ , ಬೇಜವಾಬ್ದಾರಿ ಹಣೆಪಟ್ಟಿಯನ್ನು ಬಿಎಂಟಿಸಿ ಕಟ್ಟುತ್ತಿದೆ. ಹೀಗಾಗಿ ಗುರಿಯನ್ನು ತಲುಪಲಾಗದೆ ಸಿಬ್ಬಂದಿ ನಾನಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಪ್ರಯಾಣಿಕರು ಬರಲಿ, ಬರದೇ ಹೋಗಲಿ ಆದಾಯ ತರಬೇಕು ಎಂದು  ಮೇಲಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಕೋವಿಡ್ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಬಾರಿ ಇಳಿಮುಖವಾಗಿದೆ. ಮಾತ್ರ ವಲ್ಲದೇ ಓಲಾ, ಊಬರ್ ಟ್ಯಾಕ್ಸಿ ಮತ್ತು ಮೆಟ್ರೋ ಸೇವೆ ಬಳಿಕ ಪ್ರಯಾಣಿಕರ ಸಂಖ್ಯೆ  ಇನ್ನಷ್ಟು ಇಳಿಮುಖವಾಗಿದೆ.  ಬಸ್‌ಗಳು ರಸ್ತೆಗೆ ಇಳಿದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರಿಲ್ಲ.

ಈ ನಡುವೆ ಬಿಎಂಟಿಸಿ ಅಧಿಕಾರಿಗಳ ಇಂಥ ಆದೇಶದಿಂದ ಸಾರಿಗೆ ನೌಕರರಿಗೆ ತಲೆನೋವು ಶುರುವಾಗಿದೆ. ಸಾಮಾನ್ಯ ಪಾಳಿಯಲ್ಲಿ ಕಾರ್ಯ ನಿರ್ವಹಿಸುವರಿಗೆ 7,500 ರೂ. ಆದಾಯ ಸಿಗುತ್ತದೆ. ರಾತ್ರಿ ತಂಗುವ ಪಾಳಿಯವರು 9 ರಿಂದ 10 ಸಾವಿರ ಆದಾಯದೊರೆಯುತ್ತದೆ. ರಾತ್ರಿ ಸೇವೆಯ ಬಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುವರು 5 ಸಾವಿರ ಆದಾಯ ಸಂಗ್ರಹಿಸಿ ಡಿಪೋಗಳಲ್ಲಿ ಪಾವತಿಮಾಡಬೇಕು. ನಗರದಲ್ಲಿ ಖಾಸಗಿ ಬಸ್ , ಮ್ಯಾಕ್ಸಿ ಕ್ಯಾಬ್‌ಗಳ ಹಾವಳಿ ಹೆಚ್ಚಿದೆ.

ಹೀಗಿರುವಾಗ ಆದಾಯ ಗುರಿಮುಟ್ಟವುದಾದರೂ ಹೇಗೆ ಎಂಬ ಆತಂಕದಲ್ಲಿ ಸಿಬ್ಬಂದಿ ಇದ್ದಾರೆ. ಈ ಮೊದಲು ಬಿಎಂಟಿಸಿಯಲ್ಲಿ ನಿತ್ಯ 52 ಲಕ್ಷ ಪ್ರಯಾಣಿಕರು ಓಡಾಡುತ್ತಿದ್ದರು. ಆದರೆ ಇದೀಗ 20 ಲಕ್ಷ ಪ್ರಯಾಣಿಕರು ಮಾತ್ರ ಓಡಾಡುತ್ತಿದ್ದಾರೆ. ಹೀಗಿದ್ದರೂ ಟಾರ್ಗೆಟ್ ರೀಚ್‌ಮಾಡುವಂತೆ ಸಿಬ್ಬಂದಿಗೆ ಒತ್ತಡ ಹೇರಿದರೆ ಅವರು ಎಲ್ಲಿಂದ ಆದಾಯ ತಂದು ಕಟ್ಟಬೇಕು. ಅಷ್ಟಕ್ಕೂ ಇದು ಸೇವೆಗೆ ಇರುವ ಸಂಸ್ಥೆಯೋ ಅಥವಾ ಆದಾಯ ತರುವ ಸಂಸ್ಥೆಯೋ?

ರಾಜ್ಯದ ಜನರ ಸೇವೆಗಾಗಿ ಸರ್ಕಾರದಿಂದ ಇರುವ ಒಂದು ಸಂಸ್ಥೆ ಹೀಗೆ ಹಿಂಸೆ ಮಾಡಿದರೆ ನೌಕರರು ಎಲ್ಲಿಗೆ ಹೋಗಬೇಕು ಎಂದು ನೊಂದ ನೌಕರರು ಪ್ರಶ್ನಿಸುತ್ತಿದ್ದಾರೆ.

ಘಟಕ 34ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗಪ್ಪ ಕಾಂಬ್ಳೆ ಎಂಬುವರಿಗೆ ರಾತ್ರಿ ಪಾಳಯದಲ್ಲಿ ಕಡಿಮೆ ಈ.ಪಿ.ಕೆ.ಎಂ (revenue) ತಂದಿದ್ದೀರಿ. ಇದರಿಂದ ಸಂಸ್ಥೆಗೆ ನಷ್ಟ ಸಂಭವಿಸಿದೆ. ಈ ಹಿನ್ನೆಲೆ 3 ದಿನಗಳೊಳಗಾಗಿ ಸೂಕ್ತ ಸಮಜಾಯಿಷಿ ನೀಡಿ. ಇಲ್ಲದಿದ್ದರೆ ಏಕಪಕ್ಷೀಯವಾಗಿ ಕ್ರಮಕೈಗೊಳ್ಳುತ್ತೀವೇ ಎಂದು ಬಿಎಂಟಿಸಿ ಘಟಕ ವ್ಯವಸ್ಥಾಪಕರು ನೋಟಿಸ್ ನೀಡಿದ್ದಾರೆ.

ಈಪಿಕೆಎಂ ಕಡಿಮೆ ತಂದಿರುವ ಮೂಲಕ ಸಂಸ್ಥೆಗೆ ಅನಗತ್ಯವಾಗಿ ನಷ್ಟವುಂಟಾಗಿರುತ್ತದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿರುತ್ತದೆ ಮತ್ತು ಸಂಸ್ಥೆಗೆ ಕೆಟ್ಟ ಹೆಸರು ಬರಲು ಕಾರಣರಾಗಿದ್ದೀರಿ. ಇದು ನಿಮ್ಮ ಕರ್ತವ್ಯದ ಮೇಲಿನ ಬೇಜವಾಬ್ದಾರಿತನವನ್ನು ತೋರಿಸುತ್ತಿದೆ. ಹೀಗಾಗಿ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬಾರದೇಕೆ ಎಂದು ನೋಟಿಸ್‌ ನೀಡಿದ್ದಾರೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...