CrimeNEWSದೇಶ-ವಿದೇಶ

ಸುಳ್ಳು ಸುದ್ದಿ, ದ್ವೇಷ ಭಾಷಣ ನಿಯಂತ್ರಣಕ್ಕೆ ಫೇಸ್ಬುಕ್ ಹೆಣಗಾಟ – ಬಜರಂಗದಳ ಅಪಾಯಕಾರಿ ಸಂಘಟನೆ ಎಂದ ವರದಿ!

ವಿಜಯಪಥ ಸಮಗ್ರ ಸುದ್ದಿ

ನ್ಯೂಯಾರ್ಕ್: ಭಾರತದಲ್ಲಿ ದ್ವೇಷ ಭಾಷಣ, ಸುಳ್ಳು ಸುದ್ದಿಗಳು ಮತ್ತು ಹಿಂಸಾಚಾರದ ಸಂಭ್ರಮವನ್ನು ನಿಯಂತ್ರಿಸಲು ಫೇಸ್ಬುಕ್ಗೆ ಕಷ್ಟ ವಾಗುತ್ತಿದೆ ಎಂದು ಫೇಸ್ಬುಕ್ನ ಆಂತರಿಕ ವರದಿ ಬಹಿರಂಗಪಡಿಸಿದೆ. ಕೆಲವು ಗುಂಪುಗಳು ಮುಸ್ಲಿಂ ವಿರೋಧಿ ವಿಚಾರಗಳು ಮತ್ತು ಮುಸ್ಲಿಂ ಅವಹೇಳನಕಾರಿ ವಿಚಾರಗಳನ್ನು ಪದೇಪದೆ ಹಂಚಿಕೊಳ್ಳುತ್ತವೆ ಎಂದೂ ಈ ವರದಿಗಳಲ್ಲಿ ವಿವರಿಸಲಾಗಿದೆ.

ನ್ಯೂಯಾರ್ಕ್ ಟೈಮ್ಸ್ ಈ ವರದಿಗಳನ್ನು ಆಧರಿಸಿ, ಪತ್ರಿಕಾ ವರದಿ ಪ್ರಕಟಿಸಿದೆ. ದ್ವೇಷ ಭಾಷಣ, ಸುಳ್ಳು ಸುದ್ದಿಗಳು ಮತ್ತು ಹಿಂಸಾಚಾರದ ಸಂಭ್ರಮವನ್ನು ಫೇಸ್ಬುಕ್‌ನ ನಿಯಮಗಳಿಂದ ನಿಯಂತ್ರಿ ಸಲು ಸಾಧ್ಯ ವಾಗುತ್ತಿಲ್ಲ ಎಂದು ಈ ವರದಿ ವಿವರಿಸಿದೆ.

ಭಾರತದಲ್ಲಿ ಫೇಸ್ಬುಕ್ ಬಳಕೆ ಕುರಿತು, ಫೇಸ್ಬುಕ್ ಆಂತರಿಕವಾಗಿ ನಡೆಸಿದ ಸಂಶೋಧನೆಯ ವರದಿಯಲ್ಲಿ ಈ ಮಾಹಿತಿ ಹೊರಬಿದ್ದಿದ್ದು, ಫೇಸ್ಬುಕ್ನಮಾಜಿ ಉದ್ಯೋಗಿ ಫ್ರಾನ್ಸಿಸ್ ಹಾಗನ್ ಅವರು ಬಹಿರಂಗಪಡಿಸಿರುವ ದಾಖಲೆಗಳಲ್ಲಿ ಈ ವರದಿಗಳೂ ಇವೆ.

ಫೇಸ್ಬುಕ್‌ನ ಉದ್ಯೋಗಿಯೊಬ್ಬರು ತಾವು ಕೇರಳದವರು ಎಂದು ಬಿಂಬಿಸಿಕೊಳ್ಳುವಂತಹ ನಕಲಿ ಖಾತೆಯನ್ನು 2019ರ ಫೆಬ್ರುವರಿಯಲ್ಲಿ ಆರಂಭಿಸಿದ್ದರು. ಆ ಖಾತೆಗೆ ಬರುವ ಸ್ನೇಹ ಸಲಹೆಗಳು,
ಸ್ನೇಹ ವಿನಂತಿಗಳು, ವಿಡಿಯೋ ಪೋಸ್ಟ್ ಸಲಹೆಗಳನ್ನು ಫೇಸ್ಬುಕ್ ನಿಯಮಕ್ಕೆ ಅನುಗುಣವಾಗಿ ಅಂಗೀಕರಿಸುತ್ತಾ ಹೋಗುವುದು ಅಧ್ಯಯನದ ಭಾಗವಾಗಿತ್ತು.

ಆ ಖಾತೆ ಆರಂಭಿಸಿದ ವಾರಗಳ ಅವಧಿಯಲ್ಲಿ ದ್ವೇಷ ಭಾಷಣ, ಸುಳ್ಳುಸುದ್ದಿ ಮತ್ತು ಹಿಂಸಾಚಾರವನ್ನು ಉದ್ದೀಪಿಸುವ ಫೇಸ್ಬುಕ್ ಗುಂಪುಗಳ, ಖಾತೆಗಳ, ಪೋಸ್ಟ್ಗಳ ಸಲಹೆಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದವು. ಇದಕ್ಕೆ ಸಂಬಂಧಿಸಿದ ವರದಿಯನ್ನು ನಂತರದ ಒಂದು ತಿಂಗಳಲ್ಲಿ ಫೇಸ್ಬುಕ್ ಆಂತರಿಕವಾಗಿ ಪ್ರಕಟಿಸಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವಿವರಿಸಿದೆ.

2019ರ ಚುನಾವಣೆ ಸಂದರ್ಭದಲ್ಲಿ ಆಡಳಿತ ಪಕ್ಷಕ್ಕೆ ಸಂಬಂಧಿಸಿದ ಬಾಟ್‌ಗಳು (ಕೃತಕ ಬುದ್ಧಿ ಮತೆ ನಿರ್ವಹಣೆಯ ಖಾತೆಗಳು) ಮತ್ತು ನಕಲಿ ಖಾತೆಗಳು, ಚುನಾವಣೆಯಲ್ಲಿ ಹೇಗೆ ಕೋಲಾಹಲ ಎಬ್ಬಿ ಸಿದ್ದವು ಎಂಬುದನ್ನೂ ಈ ಅಧ್ಯಯನದ ವರದಿಯು ದಾಖಲಿಸಿದೆ.

ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ವೀಕ್ಷಣೆಗೆ ಒಳಗಾದ ಪೋಸ್ಟ್ಗಳಲ್ಲಿ ಶೇ. 40ರಷ್ಟು ಪೋಸ್ಟ್ಗಳು ಸುಳ್ಳುಸುದ್ದಿಗಳಾಗಿದ್ದವು ಮತ್ತು ದೃಢೀಕರಿಸಲಾಗದಂತಹ ಮಾಹಿತಿಗಳಾಗಿದ್ದವು. ಈ ರೀತಿಯ ಒಂದೇ ಒಂದು ಖಾತೆಯಿಂದ ಮಾಡಲಾದ ಪೋಸ್ಟ್ ಅನ್ನು 3 ಕೋಟಿ ಜನರು ವೀಕ್ಷಿಸಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

2019ರ ಚುನಾವಣೆ ಸಂದರ್ಭದಲ್ಲಿ ಫೇಸ್ಬುಕ್ ಕೇಂದ್ರ ಕಚೇರಿಯ ಸಂಶೋಧಕರು ಭಾರತಕ್ಕೆ ಭೇಟಿ ನೀಡಿ, ಅಲ್ಲಿನ ಉದ್ಯೋ ಗಿಗಳ ಜತೆ ಮಾತುಕತೆ ನಡೆಸಿದ್ದರು. ಭಾರತದಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಕಠಿಣವಾದ ನಿಯಮಗಳ ಅಗತ್ಯವಿದೆ. ಅವುಗಳನ್ನು ಕಾರ್ಯರೂಪಕ್ಕೆ ತರಬೇಕು ಎಂಬುದು ಅಲ್ಲಿನ ಉದ್ಯೋ ಗಿಗಳ ಅಭಿಪ್ರಾಯವಾಗಿತ್ತು ಎಂಬುದನ್ನು ‘ಇಂಡಿಯನ್ ಎಲೆಕ್ಷನ್ ಕೇಸ್ ಸ್ಟಡಿ’ ವರದಿಯಲ್ಲಿ ಫೇಸ್ಬುಕ್ ದಾಖಲಿಸಿದೆ.

ಫೇಸ್ಬುಕ್ನಲ್ಲಿ ಸುಳ್ಳುಸುದ್ದಿ ಪ್ರಕಟವಾಗುವುದನ್ನು ತಡೆಯಲು ಭಾರತದಲ್ಲಿ ಕೃತಕ ಬುದ್ಧಿ ಮತ್ತೆ ವ್ಯವಸ್ಥೆಯನ್ನು ಫೇಸ್ಬುಕ್ ಅಳವಡಿಸಿಕೊಂಡಿದೆ. ಭಾರತದಲ್ಲಿ 22 ಭಾಷೆಗಳಲ್ಲಿ ಫೇಸ್ಬುಕ್ ಸೇವೆ ನೀಡುತ್ತಿದೆ.
ಆದರೆ ಐದು ಭಾಷೆಗಳಲ್ಲಿ ಮಾತ್ರ ಈ ವ್ಯವಸ್ಥೆ ಇದೆ. ಹೆಚ್ಚು ಬಳಕೆಯಲ್ಲಿರುವ ಹಿಂದಿ ಮತ್ತು ಬಂಗಾಳಿ ಭಾಷೆಯಲ್ಲಿ ಈ ವ್ಯವಸ್ಥೆ ಲಭ್ಯವಿಲ್ಲ. ಹೀಗಾಗಿ ಸುಳ್ಳುಸುದ್ದಿ, ದ್ವೇಷ ಭಾಷಣಕ್ಕೆ ಫೇಸ್ಬುಕ್ ಬಳಕೆಯಾಗುವುದನ್ನು ತಡೆಯಲು ಸಾಧ್ಯ ವಾಗುತ್ತಿಲ್ಲ . ಇದನ್ನು ಶೀಘ್ರವೇ ಆರಂಭಿಸಬೇಕು ಎಂದು ಆಂತರಿಕ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

ಚುನಾವಣೆ ಸಂದರ್ಭದಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಫೇಸ್ಬುಕ್ ಹಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಸುಳ್ಳು ಸುದ್ದಿ ಪತ್ತೆಮಾಡಲು ಬೇರೊಂದು ಕಂಪನಿಗೆ ಹೊರಗುತ್ತಿಗೆ ನೀಡಲಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಬಜರಂಗದಳ ಅಪಾಯಕಾರಿ ಸಂಘಟನೆ: ಕೆಲವು ಗುಂಪುಗಳು ಅದರಲ್ಲೂ ಪ್ರಧಾನವಾಗಿ ಬಜರಂಗ ದಳವುಮುಸ್ಲಿಂ ವಿರೋಧಿ ಭಾವನೆಯನ್ನು ಕೆರಳಿಸುವ ಪೋಸ್ಟ್ಗಳನ್ನು ಮಾಡುತ್ತಿತ್ತು ಎಂದು ವರದಿಯಲ್ಲಿ ಉಲ್ಲೇ ಖಿಸಲಾಗಿದೆ.

ಬಜರಂಗ ದಳವು ಧರ್ಮಾಧಾರಿತ ಹಿಂಸಾಚಾರವನ್ನು ಉದ್ದೀ ಪಿಸುವ ಕಾರಣ, ಫೇಸ್ಬುಕ್ ಅದನ್ನು ಅಪಾಯಕಾರಿ ಸಂಘಟನೆ ಎಂದು ಪರಿಗಣಿಸಿತ್ತು . ಆದರೆ ಭಾರತದಲ್ಲಿ ಫೇಸ್ಬುಕ್ಗೆ ಹೆಚ್ಚಿ ನ ಅಧಿಕಾರ ಇಲ್ಲದೇ ಇದ್ದ ಕಾರಣಕ್ಕೆ , ಇಂತಹ ಪೋಸ್ಟ್ಗಳ ನಿಯಂತ್ರ ಣ ಸಾಧ್ಯ ವಾಗಿರಲಿಲ್ಲ.

ಭಾರತವೂ ಸೇರಿದಂತೆ ವಿಶ್ವ ದ ಹಲವೆಡೆ ಮುಸ್ಲಿಂ ವಿರೋಧಿ ಭಾವನೆಯನ್ನು ಕೆರಳಿಸುವ ಪೋಸ್ಟ್ಗಳು ಹೆಚ್ಚಾ ಗುತ್ತಿದ್ದ ಕಾಲವದು. ಆದರೆ ಈಗ ಅದನ್ನು ನಿಯಂತ್ರಿ ಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಫೇಸ್ಬುಕ್ನ ಆಂತರಿಕ ವರದಿಯಲ್ಲಿ ವಿವರಿಸಲಾಗಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು