NEWSನಮ್ಮಜಿಲ್ಲೆರಾಜಕೀಯ

ಸಿಂಧಗಿ-ಹಾನಗಲ್‌ ಉಪ ಚುನಾವಣೆ ಸಮರ: ಯಾರಿಗೆ ಬೀಳಲಿದೆ ಸಾರಿಗೆ ನೌಕರರ ವೋಟ್‌?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಸಿಂಧಗಿ-ಹಾನಗಲ್‌ ಮತಕ್ಷೇತ್ರದಲ್ಲಿ ಸಾರಿಗೆ ನೌಕರರ ಮತ್ತು ಕುಟುಂಬದ ಸುಮಾರು ಆರು ಸಾವಿರ ಮತಗಳು ಇದ್ದು, ಈ ಬಾರಿ ಯಾರನ್ನು ಬೆಂಬಲಿಸಿದ್ದಾರೆ ಈ ಮತದಾರರು….?

ಕಳೆದ ಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಅವರು ಹಾನಗಲ್‌ ಮತಕ್ಷೇತ್ರಕ್ಕೆ ಹೊಸ ಪರಿಚಯವಿದ್ದರು ಕೇವಲ 6500 ಮತಗಳಿಂದ ಸೋಲು ಅನುಭವಿಸಿದ್ದರು. ಆದರೂ ಕ್ಷೇತ ಬಿಡದೆ ಅಲ್ಲೆ ನೆಲೆಯೂರಿ ಸಮಾಜಮುಖಿ ಕೆಲಸಗಳೊಂದಿ ಸಕ್ರಿಯವಾಗಿ ಉಳಿದ್ದಾರೆ.

ಈಗ ಶಾಸಕ ಸಿ.ಎಂ.ಉದಾಸಿಯವರ ಅಕಾಲಿಕ ಮರಣದಿಂದ ಉಪಚುನಾವಣೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರವಾದ ಕಾರಣ ಇದು ಅವರಿಗೆ ಪ್ರತಿಷ್ಠೆಯ ಚುನಾವಣೆಯಾಗಿದೆ.  ಅಷ್ಟೇ ಅಲ್ಲ ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೂ ಸಹ ಪ್ರತಿಷ್ಠೆಯ ಚುನಾವಣೆಯಾಗಿದೆ.

ಇನ್ನೊಂದೆಡೆ ಸತಾಯ ಗತಾಯ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಜೆಡಿಎಸ್‌ ನಾಯಕರು ಕೂಡ ಅಬ್ಬರ ಪ್ರಚಾರ ಮಾಡಿದ್ದಾರೆ.

ಹೀಗಾಗಿ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್ ಈ ಮೂರು ಪಕ್ಷಗಳ ನಡುವೆ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಹಾನಗಲ್ಲ, ಸಿಂಧಗಿ ಕ್ಷೇತ್ರದ ಸಾರಿಗೆ ನೌಕರರು ಮತ್ತು ಕುಟುಂಬದವರ ಮತಗಳು ಬಹಳ ಪ್ರಾಮುಖ್ಯತೆ ಪಡೆಯಲಿವೆ.

ಮುಷ್ಕರದಲ್ಲಿ ನಡೆದಿರುವ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಮುಷ್ಕರದ ಹಿಂದಿನ ದಿನದಂತೆ ಯಥಾಸ್ಥಿತಿಯಾಗಿ ಕರ್ತವ್ಯ ನಿರ್ವಹಿಸಲು  ಅವಕಾಶ ಮಾಡಿಕೊಂಡಿ ಎಂದು ತಾಲೂಕಿಗೆ ಬಂದ ಮಂತ್ರಿಗಳಿಗೂ ಮತ್ತು ಸಾರಿಗೆ ಸಚಿವರಿಗೂ ಪ್ರತಿಬಾರಿ ಮನವಿ ಮಾಡಿದ್ದದರೂ ಈ ವರೆಗೂ ಬರಿ ಭರವಸೆಯಾಗಿ ಉಳಿದಿರುವುದು ನೌಕರರಲ್ಲಿ ನಿರಾಸೆ ತಂದಿದೆ.

ಒಂದುಕಡೆ ಸಚಿವರ ಭರವಸೆಯಾದರೆ ಮತ್ತೊಂದು ಕಡೆ ಅಧಿಕಾರಿಗಳು ಕಾರ್ಮಿಕರನ್ನು ವೈರಿಗಳಂತೆ ನೋಡಿ ಬೇಜವಾಬ್ದಾರಿತನದಿಂದ ಸರ್ಕಾರ, ಸಚಿವರ ದಾರಿತಪ್ಪಿಸಿ ಸಾರಿಗೆ ನೌಕರರಲ್ಲಿ ಸರ್ಕಾರದ ಬಗ್ಗೆ ಬೆಸರ ನಿರಾಸೆ ಮೂಡಿಸುವಲ್ಲಿ ಅಧಿಕಾರಿಗಳು ಪ್ರಮುಖ ಪಾತ್ರವಹಿಸಿದ್ದಾರೆ..

ಆದರೆ ಸಚಿವರ ಭರವಸೆಯಲ್ಲಿ ಮತ ಚಲಾಯಿಸುತ್ತಾರೂ, ಸರ್ಕಾರಕ್ಕೆ ಈ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೂ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಒಟ್ಟಾರೆ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್ ಈ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕ್ಷೇತ್ರಗಳಾಗಿದ್ದು, ಸಾರಿಗೆ ನೌಕರರ ಮತಗಳು ಇಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ ಎಂದರೆ ತಪ್ಪಾಗಲಾರದು… ಈ ಚುನಾವಣೆಯ ಫಲಿತಾಂಶ 2024ರ ಚುನಾವಣೆಯ ಭವಿಷ್ಯ ಎಂಬುದು ಅಕ್ಷರಶಃ ಸತ್ಯ….

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ