ಬೆಂಗಳೂರು: ಸಾರಿಗೆ ನೌಕರ ಬಂಧುಗಳೇ ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ಸಂಸ್ಥೆಯ ಹಲವಾರು ನೌಕರರನ್ನು ಮನಸೋ ಇಚ್ಛೆ ಅಮಾನತು, ವರ್ಗಾವಣೆ ಮತ್ತು ವಜಾದಂತ ಕ್ರಮ ತೆಗೆದುಕೊಂಡು ಸಾವಿರಾರು ನೌಕರರು ಬಿದಿ ಪಾಲಾಗುವಂತೆ ಮಾಡಿದ್ದಾರೆ.
ಇದರಲ್ಲಿ ಆಡಳಿತ ವರ್ಗ ಹಾಗೂ ಸರ್ಕಾರದ ಎರಡು ಪಾತ್ರಗಳು ಪ್ರಮುಖವಾಗಿ ಇದ್ದಾವೆ. ನ್ಯಾಯ ಸಮ್ಮತವಾದ ಸರಿ ಸಮಾನ ವೇತನ ಹಾಗೂ ಇನ್ನಿತರ ವಂಚಿತ ಸೌಲಭ್ಯಗಳಿಗೋಸ್ಕರ ಮುಷ್ಕರ ನಡೆಸಿದ ಸಂದರ್ಭದಲ್ಲಿ ಇಂತಹ ಮಹಾನ್ ಕಾರ್ಯಕ್ಕೆ ಮುಂದಾಗಿ ಯಾವುದೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸದೆ. ಕಾರ್ಮಿಕರನ್ನು ಬಲಿಪಶು ಮಾಡಿದ್ದಾರೆ.
ಈ ಸಂಬಂಧ ಮುಷ್ಕರದ ನಂತರ ಹಲವಾರು ಸಂಘಟನೆಗಳು ಹಾಗೂ ನಮ್ಮ ನೌಕರರು ರಾಜ್ಯದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಹಾಗೂ ಬಹಳ ಮುಖ್ಯವಾಗಿ ಸರ್ಕಾರದ ಮುಖ್ಯಮಂತ್ರಿ ಗಳಿರಬಹುದು ಸಾರಿಗೆ ಸಚಿವರು ಮತ್ತು ಸಂಸ್ಥೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಮನವಿ ಮಾಡಲಾಗಿದೆ. ಆದರೆ ಇವರಾರು ನಮ್ಮ ನಮವಿಗೆ ಸ್ಪಂದಿಸಿಲ್ಲ.
ದಿನನಿತ್ಯ ಈವರೆಗೂ ತಿಂಗಳುಗಳ ಕಾಲ ಸತತವಾಗಿ ಮುಷ್ಕರದ ಸಂದರ್ಭದಲ್ಲಿ ಏನೋ ಕೆಲವೊಂದು ಲೋಪದೋಷಗಳು ಆಗಿರಬಹುದು. ನಮಗೋಸ್ಕರ ನಾವು ಹೋರಾಟಗಳನ್ನು ಮಾಡಿದೆವು ನೌಕರರನ್ನು ಈರೀತಿ ನಡೆಸಿಕೊಳ್ಳುವುದು ಸರಿಯಲ್ಲ ದಯವಿಟ್ಟು ಮುಷ್ಕರದ ಸಂದರ್ಭದಲ್ಲಿ ಆಗಿರುವಂತಹ ಎಲ್ಲಾ ಶಿಸ್ತುಕ್ರಮಗಳನ್ನು ರದ್ದುಪಡಿಸಿ ಹಿಂದಿನಂತೆ ಎಲ್ಲಾ ನೌಕರರು ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.
ಅದರ ಪರಿಣಾಮ ಸಾರಿಗೆ ಸಚಿವರು ಇರಬಹುದು ಹಾಗೂ ಮುಖ್ಯಮಂತ್ರಿಗಳು ಇರಬಹುದು ಮಾಧ್ಯಮಗಳ ಮುಂದೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕರ್ತವ್ಯಕ್ಕೆ ಮರು ನಿಯೋಜಿಸಿದ್ದೇ ವೆಂದು ಹಲವಾರು ದಿನಾಂಕಗಳನ್ನು ಘೋಷಣೆ ಮಾಡುತ್ತಾ ಬಂದಿರುವುದು ನಾವೆಲ್ಲರೂ ನೋಡಿದ್ದೇವೆ. ಆದರೆ ಯಾವುದೇ ಸಮಸ್ಯೆಯಿಂದ ಅಂದರೆ ಶಿಸ್ತು ಕ್ರಮದಿಂದ ಯಾವೊಬ್ಬ ನೌಕರರು ಹೊರಬಂದಿದ್ದು ಕಂಡುಬರುತ್ತಿಲ್ಲ.
ಜನಪ್ರತಿನಿಧಿಗಳು ಬದ್ಧತೆಯಿಂದ ಆಗುವ ಕೆಲಸಗಳನ್ನು ವಿವರಿಸಬೇಕಾಗುತ್ತದೆ. ಆದರೆ ನಮ್ಮ ನೌಕರರು ತಮ್ಮ ಜೀವನಕೋಸ್ಕರ ಬೇರೆಲ್ಲಿಯೂ ಕರ್ತವ್ಯ ನಿರ್ವಹಿಸದಂತೆ ದಿನಾಂಕಗಳನ್ನು ನಿಗದಿ ಮಾಡಿ ಮೂರರಿಂದ ನಾಲ್ಕು ಸಾವಿರ ನೌಕರ ಕುಟುಂಬಗಳು ಜಾತಕಪಕ್ಷಿಯಂತೆ ಕಾಯುವಂತೆ ಮಾಡಿದ್ದೆ ಇವರ ಸಾಧನೆ.
ನಾವು ನ್ಯಾಯಸಮ್ಮತವಾದ ಬೇಡಿಕೆಗಳನ್ನಿಟ್ಟು ಮುಷ್ಕರ ಮಾಡಿದ ಸಂದರ್ಭದಲ್ಲಿ ಆಡಳಿತ ಮಂಡಳಿ ಆಗಿರಬಹುದು ಅಥವಾ ಸರ್ಕಾರ ವಾಗಿರಬಹುದು ಮಧ್ಯಪ್ರವೇಶ ಮಾಡಿ ನೌಕರರ ಸಮಸ್ಯೆಗಳನ್ನು ಆಲಿಸಬೇಕಿತ್ತು. ಆದರೆ ಆ ಬದಲಿಗೆ ಏಕಾಏಕಿ ಕಾನೂನು ವಿರುದ್ಧವಾಗಿ ಶಿಸ್ತುಕ್ರಮದ ಹೆಸರಿನಲ್ಲಿ ನೌಕರರಿಗೆ ಹಲವಾರು ತೊಂದರೆ ಕೊಟ್ಟರು., ಈಗಲೂ ಅದು ಮುಂದುವರಿದಿದೆ.
ಹೀಗಾಗಿ ಮುಷ್ಕರದ ವೇಳೆ ತೆಗೆದುಕೊಂಡಿರುವ ಆ ಎಲ್ಲ ಕ್ರಮಗಳನ್ನು ರದ್ದುಪಡಿಸಿ ಅದರಲ್ಲೂ ವಜಾಗೊಂಡಿರುವ ನೌಕರರನ್ನು ನೇಮಕ ಮಾಡುವಂತೆ ಒತ್ತಾಯಿಸಿ ನಿನ್ನೆಯಿಂದ (ಅ.27) ಸಾರಿಗೆ ಸಂಸ್ಥೆಯಲ್ಲಿರುವ ಸಿಐಟಿಯು ಫೆಡರೇಶನ್ ವತಿಯಿಂದ ಮೌರ್ಯ ಸರ್ಕಲ್ ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
ಇಂದು (ಅ.28) ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಎಲ್ಲಾ ಬಾಧಿತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕಿದೆ. ಈ ನಡುವೆ ನನ್ನ ಸಂಘ ಬೇರೆ ನಾನು ಆ ಸಂಘ ಈ ಸಂಘ ಎಂಬ ಬೇಧ-ಭಾವ ಮರೆತು… ನಾನು ಆ ನಾಯಕನ ಪರವಾಗಿ ಈ ನಾಯಕನ ಪರವಾಗಿ ಎಂಬುದನ್ನು ಮರೆತು ಒಂದಾಗಿ ಧರಣಿಯನ್ನು ಬೆಂಬಲಿಸಬೇಕು.
ಎಲ್ಲ ನೌಕರರು ತಮ್ಮ ತಮ್ಮ ಬದುಕಿನ ವ್ಯವಸ್ಥೆ ಗೋಸ್ಕರ ಬಂದು ಭಾಗವಹಿಸಿ. ಸಮಸ್ಯೆಗಳನ್ನು ಸರ್ಕಾರ ಬಗೆಹರಿಯುವವರೆಗೂ ಧರಣಿಯನ್ನು ಮುಂದುವರಿಸೋಣ ಎಂದು ಎಲ್ಲಾ ನೌಕರರಲ್ಲಿ ಅಹೋರಾತ್ರಿ ಧರಣಿ ನಿರತ ನೌಕರರು ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.