ಬೆಂಗಳೂರು: ಪಡಿತರ ಚೀಟಿ ಕೋರಿ ಹಲವು ವರ್ಷಗಳಿಂದ ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಅನುಮೋದನೆ ನೀಡಿದ್ದು , 4.11 ಲಕ್ಷ ಪಡಿತರ ಚೀಟಿಗಳನ್ನು ಮಂಜೂರುಮಾಡಲಾಗಿದೆ ಎಂದುಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ವಿಧಾನಸೌಧದ ಮೆಟ್ಟಿ ಲುಗಳ ಮೇಲೆ ಸೋಮವಾರ ಆಯೋಜಿಸಿದ್ದ ಜನಸೇವಕಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
2.66 ಲಕ್ಷ ಬಿಪಿಎಲ್ ಮತ್ತು 1.45 ಎಪಿಎಲ್ ಪಡಿತರ ಚೀಟಿಗಳಿಗೆ ಅನುಮೋದನೆ ನೀಡಿದ್ದೇನೆ. ಇದರಿಂದ 4.11 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.
ಮನೆಬಾಗಿಲಿಗೆ ಸರ್ಕಾರದ ಸೇವೆಗಳು: ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಯ ಜನಸೇವಕ- ಮನೆಬಾಗಿಲಿಗೆ ಸರ್ಕಾರದ ಸೇವೆಗಳು, ಜನಸ್ಪಂದನ- ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ, 1902 ಸಹಾಯವಾಣಿ, ಮೊಬೈಲ್ಆ್ಯ ಪ್, ವೆಬ್ ಪೋರ್ಟಲ್‌ಗಳು ಹಾಗೂ ಸಾರಿಗೆ ಇಲಾಖೆಯ 30 ಸಂಪರ್ಕರಹಿತ ಆನ್ ಲೈನ್ ಸೇವೆಗಳನ್ನು ಲೋಕಾರ್ಪಣೆ ಮಾಡಿದರು.