ಬೆಂಗಳೂರು: ಅಭಿಮಾನಿಗಳೇ ಆತ್ಮಹತ್ಯೆ ಮಾಡಿಕೊಂಡು ಪುನೀತ್ಗೆ ಕೆಟ್ಟ ಹೆಸರು ತರಬೇಡಿ’ ಎಂದು ಗುರುವಾರ ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಕೈಮುಗಿದು ಬೇಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಘಣ್ಣ ಅವರು, ‘ಅಭಿಮಾನಿಗಳೆ ದೇವರು ಅಂತ ಅಪ್ಪಾಜಿ ಹೇಳುತ್ತಿದ್ದರು. ದೇವರುಗಳಾದ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಮನವಿ ಮಾಡಿಕೊಳ್ಳುತ್ತೇನೆ ದುಡುಕಿನ ನಿರ್ಧಾರ ಮಾಡಬೇಡಿ ಎಂದು ಬೇಡಿಕೊಂಡರು.
ನಾವು ಪುನೀತ್ ಅಗಲಿಕೆಯಿಂದ ನೋವಿನಲ್ಲಿದ್ದೇವೆ, ಪುನೀತ್ ಪತ್ನಿ ಮತ್ತು ಮಕ್ಕಳು ದುಃಖದಲ್ಲಿದ್ದಾರೆ. ಈ ನಡುವೆ ನೀವು ಆತ್ಮಹತ್ಯೆ ಮಾಡಿಕೊಂಡು ನಿಮ್ಮ ತಂದೆ-ತಾಯಿಗೆ ನೋವು ಕೊಡಬೇಡಿ. ಒಬ್ಬರ ಹಿಂದೆ ಒಬ್ಬರು ಹೋದರೆ ಭೂಮಿ ಮೇಲೆ ಯಾರು ಇರುವುದಿಲ್ಲ. ಸಣ್ಣ ಮಕ್ಕಳಿಗೆ ಇದನ್ನೇ ಹೇಳಿಕೋಡುತ್ತೀರಾ ಎಂದು ವಿನಮ್ರವಾಗಿ ಪ್ರಶ್ನಿಸಿದರು.
ಪುನೀತ್ 11ನೇ ಪುಣ್ಯಾರಾಧನೆ ಕಾರ್ಯಕ್ರಮದ ಯೋಚನೆ ಮಾಡುತ್ತಿದ್ದೇವೆ. ಆ ಬಗ್ಗೆ ನಂತರದ ದಿನಗಳಲ್ಲಿ ತಿಳಿಸುತ್ತೇವೆ. ನಾನು ಪ್ರತಿನಿತ್ಯ ಅಪ್ಪು ಸಮಾಧಿ ಬಳಿಗೆ ದಿನ ಹೋಗುತ್ತಿದ್ದೇನೆ. ನೂರಾರು ಅಭಿಮಾನಿಗಳು ನಿತ್ಯವೂ ಬರುತ್ತಿದ್ದಾರೆ ಎಂದರು.