ಬೆಂಗಳೂರು: ಸಾರಿಗೆ ನೌಕರರ ಪಾಲಿಗೆ ತಂದೆಯಂತಿರಬೇಕಾದ ಅನಂತ ಸುಬ್ಬರಾವ್ ನಮ್ಮ ಪಾಲಿಗೆ ಚಿರನಿದ್ರೆಯಲ್ಲಿ ಜಾರಿದ್ದಾರೆ ಎಂದು ನೊಂದ ನಿರ್ವಾಹಕಿಯೊಬ್ಬರು ಹೇಳಿದ್ದಾರೆ.
ಅನಂತ ಸುಬ್ಬರಾವ್ ನಿಗಮಕ್ಕೆ ಬಂದ ಮೇಲೆ ಚಾಲಕ, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಸಮಾಧಿ ಕಟ್ಟುವುದಕ್ಕೆ ಬುನಾದಿಹಾಕಿ, ಅಧಿಕಾರಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಇಂಥ ಅನಂತ ಸುಬ್ಬರಾವ್ಗೆ ಕೊಟ್ಟಿದ್ದು ನಾವು ಬೆವರು ಹರಿಸಿ ದುಡಿದ ಹಣವನ್ನು. ಆದರೆ ಅವರು ಅನುಕೂಲ ಮಾಡಿಕೊಟ್ಟಿದ್ದು ಅಧಿಕಾರಿಗಳಿಗೆ. ನಮಗೆ ಒಳ್ಳೆಯದನ್ನು ಮಾಡಬೇಕಾದ ಈತ ನಮ್ಮ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ.
AITUC ಸಂಘಟನೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಈತ ನೌಕರರ ಪಾಲಿಗೆ ವಿಷ ಕಕ್ಕುವ ಹಾವಾಗಿ ಬಂದ ಎಂಬುವುದೆ ನಮಗೆ ತಿಳಿಯಲಿಲ್ಲ. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಈತನ ಸಂಘಟನೆಗೆ ಯಾರೂ ಬೆಂಬಲ ಕೊಡಬೇಡಿ ಎಂದು ನಿರ್ವಾಹಿಕಿ ಮನವಿ ಮಾಡಿದ್ದಾರೆ.
ಹಿರಿಯರಾದ ಅನಂತ ಸುಬ್ಬರಾವ್ ಅವರು ಮಾಡಿರುವು ಸಹಿಸಿಕೊಳ್ಳಲಾಗದ ಮತ್ತು ಮರೆಯಲಾಗದ ಕೆಲಸ, ಇವರ ಮೊಸದ ಬಲೆಯ ಸುಳಿಗೆ ಸಿಲುಕಿ ನಾವು ಕಳೆದ 1988ರಿಂದಲೂ ವೇತನ ತಾರತಮ್ಯತೆಯನ್ನು ಅನುಭವಿಸುತ್ತ ಬಂದಿದ್ದೇವೆ. ಈಗಲಾದರೂ ನಾವು ಹೋರಾಟ ಮಾಡದಿದ್ದರೆ ನಮ್ಮ ಭವಿಷ್ಯ ಹಾಳಾಗುತ್ತದೆ ಎಂದು ತಿಳಿಸಿದ್ದಾರೆ.
ಇಲ್ಲಿ ಪ್ರತಿಭಟನೆ ಮಾಡೋರು ನಾವು, ಅದರಿಂದ ಕೆಲಸ ಕಳೆದುಕೊಳ್ಳುವವರು, ಅಮಾನತಾಗುವವರು, ವರ್ಗಾವಣೆಗೊಳಗಾಗುವವರು ಮತ್ತು ಪೊಲೀಸ್ ಕೇಸ್ ಹಾಕಿಸಿಕೊಳ್ಳುವವರು ನಾವು. ಆದರೆ ನಮ್ಮನ್ನೇ ಶಿಕ್ಷೆಗೊಳಪಡಿಸುವ ಅಧಿಕಾರಿಗಳು ನಮ್ಮ ಹೋರಾಟದಿಂದಲೇ ಹೆಚ್ಚಿನ ವೇತನ ಪಡೆದು ರಾಜರಂತೆ ಜೀವನ ಸಾಗಿದುತ್ತಿದ್ದಾರೆ.
ಇದರಿಂದ ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ನಮಗೂ ಸರಿ ಸಮಾನ ವೇತನ ಕೊಡಿ ಎಂದು ಹೋರಾಟ ಮಾಡಬೇಕು. ಇಲ್ಲದಿದ್ದರೆ ನಾವು ನಮ್ಮ ಕಾಲನ್ನೇ ಎಳೆದುಕೊಂಡು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾಯಬೇಕಾಗುತ್ತದೆ. ಅದನ್ನು ಬಿಟ್ಟು ಈಗಲೂ ಒಗ್ಗಟ್ಟಾಗಬೇಕಿದೆ. ಸುಬ್ಬರಾವ್ ಅವರನ್ನು ನಂಬಬೇಡಿ. ಅವರು ಮಾಡಿರುವ ಅನ್ಯಾಯದ ವಿರುದ್ಧ ನಾವು ಹೋರಾಟ ಮಾಡಲೇ ಬೇಕು.
ನಮ್ಮ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಏಕೆ ಕೆಲ ಅಧಿಕಾರಿಗಳು ಕೊಡುವ ಕಿರುಕುಳದಿಂದ. ಆದರೆ ಅಂಥ ಅಧಿಕಾರಿಯ ವಿರುದ್ಧ ಯೂನಿಯನ್ ಕಡೆಯಿಂದ ಒಂದೇ ಒಂದು ಕೇಸ್ ದಾಖಲಾಗಿರುವ ನಿದರ್ಶನವಿದಯೇ? ಇಲ್ಲ, ಏಕೆ ಈ ಯೂನಿಗಳು ಅಧಿಕಾರಿಗಳ ಪರ ಇರುವುದರಿಂದ.
ಯೂನಿಯನ್ಗಳು ನೌಕರರ ಪರ ಇಲ್ಲ, ಅಧಿಕಾರಿಗಳು ಮತ್ತು ಸರ್ಕಾರದ ಪರ ನಿಂತುಕೊಂಡಿರುತ್ತವೆ. ಇದರಿಂದ ಕೆಲ ಭ್ರಷ್ಟ ಅಧಿಕಾರಿಗಳು ನೌಕರರಿಗೆ ಕಿರುಕುಳ ಕೊಡುವುದನ್ನು ಮುಂದುವರಿಸುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಲೇ ಬೇಕು ಎಂದು ಈ ಹಿಂದೆಯೇ ನಿರ್ವಾಹಕಿ ಆಡಿಯೋ ಮಾಡಿ ಬಿಟ್ಟಿದ್ದಾರೆ. ಅದರಲ್ಲಿನ ಎಲ್ಲವನ್ನು ಕೇಳಿಸಿಕೊಳ್ಳಿ.