NEWSನಮ್ಮಜಿಲ್ಲೆನಮ್ಮರಾಜ್ಯ

ಬೀದರ್‌ – ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟ ಭರವಸೆ ಈಡೇರಿಸುವೆ: ಸಚಿವ ಶ್ರೀರಾಮುಲು ಮತ್ತೊಮ್ಮೆ ಭರವಸೆ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಸಾರಿಗೆ ಮುಷ್ಕರದ ಸಮಯದಲ್ಲಿ ಆಗಿರುವ ಹಲವು ಸಮಸ್ಯೆಗಳ ನಿವಾರಣೆಗೆ ಹಾಗೂ ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ಕೂಟದಿಂದ ಮನವಿ ಸಲ್ಲಿಸಲಾಯಿತು.

ಬೀದರ್‌ ನಗರಕ್ಕೆ ಸೋಮವಾರ ಆಗಮಿಸಿದ  ಶ್ರೀರಾಮುಲು ಅವರನ್ನು ಭೇಟಿ ಮಾಡಿ ಮುಷ್ಕರದ ಸಮಯದಲ್ಲಿ ಆದ ತೊಂದರೆಗಳನ್ನು ಸರಿಪಡಿಸುವಂತೆ ಹಾಗೂ ಬೀದರ ವಿಭಾಗದ ಕೆಲವು ಸಮಸ್ಯೆಗಳನ್ನೂ ಸಹ ಗಮನಕ್ಕೆ ತಂದು ವೇತನ ಆಯೋಗದ ಮಾದರಿಯಲ್ಲಿ ಸರಿಸಮಾನ ವೇತನ ನೀಡುವಂತೆ ಒತ್ತಾಯಿಸಲಾಯಿತು.

ಈ ವೇಳೆ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಸವರು ಭರವಸೆ ನೀಡಿದರು. ಬಳಿಕ ಮತ್ತೊಮ್ಮೆ ನಮ್ಮನ್ನು ಒಳಗಡೆ ಕರೆದು ಸುದೀರ್ಘವಾಗಿ ಸಮಾಧಾನದಿಂದ ಮಾತನಾಡಿಸಿ ಶೀಘ್ರದಲ್ಲೇ ನಿಮ್ಮ ಸಮಸ್ಯೆ ಬಗೆಹಸುತ್ತೇನೆ ಎಂದರು.

ಮನವಿ ಪತ್ರದಲ್ಲೇನಿದೆ?: ಡಿಸೆಂಬರ್-2020 ರಲ್ಲಿ ಸಾರಿಗೆ ನೌಕರರಿಗೆ ನೀಡಿದ ಭರವಸೆಗಳನ್ನು ಮತ್ತು ಏಪ್ರೀಲ್-2021 ರಲ್ಲಿ ನಡೆದ ಸಾರಿಗೆ ಮುಷ್ಕರದಲ್ಲಿ ಉಂಟಾದ ಹಲವು ಸಮಸ್ಯೆಗಳನ್ನು ಬಗೆಹರಿಸಿ ಕೊಟ್ಟು ಸಾರಿಗೆ ಕಾರ್ಮಿಕರಿಗೆ ಸಮಾಜದಲ್ಲಿ ಇತರರಂತೆ ಬದುಕಲು ಅವಕಾಶ ಮಾಡಿಕೊಡಬೇಕು.

ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳನ್ನು ಯಾವುದೇ ಶಿಕ್ಷೆ ದಂಡ ಮತ್ತು ನಿಂಬಂಧನೆಗಳನ್ನು ವಿಧಿಸದ ಈ ಕೂಡಲೆ ಪುನರ್ ನೇಮಕ ಮಾಡಿಕೊಳ್ಳುವುದು.

ಮಾತೃ ಘಟಕಗಳಿಗೆ ವರ್ಗಾವಣೆ ಮಾಡುವುದು ಹಾಗೂ 22 ಮತ್ತು 23 ರ ಅಡಿಯಲ್ಲಿ ನೀಡಲಾದ ಎಲ್ಲ ಆಪಾದನಾ ಪತ್ರಗಳು ಮತ್ತು ಮುಷ್ಕರದ ಸಮಯದಲ್ಲಿ ದಾಖಲಿಸಿದ ಎಲ್ಲ ಪೊಲೀಸ್ ಪ್ರಕರಣಗಳು ಹಿಂಪಡೆದು ಏ.6-2021 ರ ಯಥಾಸ್ಥಿತಿ ಕಾಪಾಡುವುದು.

ಡಿಸೆಂಬರ್-2020 ರ ತಿಂಗಳಿನ ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರಿಗೂ ಸರಕಾರಿ ನೌಕರರಂತೆ ಸರಿಸಮಾನ ವೇತನವನ್ನು ವೇತನ ಆಯೋಗದ ಮಾದರಿಯಲ್ಲಿ ನೀಡುವುದಾಗಿ ನೀಡಿದ ಲಿಖಿತ ಭರವಸೆಯನ್ನು ಈಡೇರಿಸುವುದು.

ಸಾರಿಗೆ ನಿಗಮಗಳಲ್ಲಿ ಕೂಡಲೇ ಕಾರ್ಮಿಕ ಸಂಘಗಳ ಚುನಾವಣೆ ನಡೆಸುವುದು, 5. ಬೀದರ ವಿಭಾಗದ ಔರಾದ ಘಟಕವು ಪನಿಶ್‌ಮೆಂಟ್ ಘಟಕ ಎಂದು ಬಿಂಬಿಸಿ, ಈ ಘಟಕಕ್ಕೆ ಅಧಿಕಾರಿಗಳಿಂದ ಆಗುತ್ತಿರುವ ಮಲತಾಯಿ ಧೋರಣೆ ನಿವಾರಿಸಿ ಅವಶ್ಯಕ ಆಡಳಿತ ಮತ್ತು ಸಂಚಾರ ಸಿಬ್ಬಂದಿಗಳನ್ನು ಮಂಜೂರಾತಿ ಅನ್ವಯ ಕೂಡಲೇ ನಿಯೋಜಿಸುವುದು. ಇದರಿಂದ ಕಾರ್ಮಿಕರ ಮೇಲೆ ಹೆರುತ್ತೀರುವ ಅನ್ಯಾಯದ ಕೆಲಸದ ಒತ್ತಡ ನಿವಾರಣೆ ಮಾಡುವುದು ಹಾಗೂ ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿ ಸಂಸ್ಥೆಯ ಘನತೆ ಹೆಚ್ಚಿಸುವುದು.

ಎಲ್ಲ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಈ ಸಮಯದಲ್ಲಿ ಕೂಟದ ಮುಖಂಡರಾದ ಬಸವರಾಜ ಚಾಮರೆಡ್ಡಿ, ಜಗನಾಥ ಶಿವಯೋಗಿ, ಅಶೋಕ ಬುಧನೂರ, ಸಂತೋಷ , ಶಿವಾನಂದ ಚಳಕಾಪುರ, ಸಂಜಯ ಹಿಬಾರೆ ಮುಂತಾದವರು ಇದ್ದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...