NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ವಜಾ ಕಾನೂನು ಬಾಹಿರ – ಎಸಿಬಿಗೆ ದೂರು ಕೊಟ್ಟ ನೌಕರ – ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮುಷ್ಕರದ ವೇಳೆ ಸಕಾರಣವಿಲ್ಲದೆ ಏಕಾಏಕಿ ವಜಾ, ಅಮಾನತು ಮಾಡುವ ಮೂಲಕ ಭ್ರಷ್ಟಚಾರ ಎಸಗಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಜಾ ಪ್ರಕ್ರಿಯೆಯಲ್ಲಿ ತೊಡಗಿದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯ ಒದಗಿಸಿ ಕೊಡಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳ​​ಕ್ಕೆ ಬಿಎಂಟಿಸಿ ನೌಕರರೊಬ್ಬರು ದೂರು ಸಲ್ಲಿಸಿದ್ದಾರೆ.

ಬೆಂಗಳೂರು ನಗರದ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳದ ಆಧೀಕ್ಷಕ ಜಿ.ಎಚ್.ಯತೀಶ್ ಚಂದ್ರ ಅವರಿಗೆ ಕಾನೂನು ಬಾಹಿರವಾಗಿ ವಜಾಗೊಂಡ ಬಿಎಂಟಿಸಿ ನೌಕರ ಗುಡ್ಡಪ್ಪ ಬಿ. ಎಂಬುವರು ಇದೆ ಜ.22ರಂದು ದೂರು ಸಲ್ಲಿಸಿದ್ದು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡು ವಜಾಗೊಂಡ ನೌಕರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ನೌಕರ ಸಲ್ಲಿಸಿದ ದೂರಿನಲ್ಲೇನಿದೆ: ಸಾರ್ವಜನಿಕ ಆಸ್ತಿ ಎಂದು ಕರೆಯಲ್ಪಡುವ ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಜತೆಗೆ ಈ ಬೆಂ.ಮ.ಸಾ.ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಎಲ್ಲ ಸಾರಿಗೆ ನೌಕರರಿಗೆ ಸಂಸ್ಥೆಯ ವಾಹನಗಳಲ್ಲಿ ವಾಸ ಸ್ಥಳದಿಂದ ಕರ್ತವ್ಯ ಸ್ಥಳಕ್ಕೆ ಹೋಗಿ ಬರಲು ಉಚಿತ ಪಾಸ್‌ ನೀಡಲಾಗಿದೆ.

ಇಂತಹ ಸಂದರ್ಭದಲ್ಲಿ ಒಂದು ವೇಳೆ ಸಾರಿಗೆ ಸಂಸ್ಥೆಯ ಯಾವುದೇ ಒಬ್ಬ ನೌಕರ ಕೆಲಸದಿಂದ ವಜಾ ಆದರೆ ಆ ನೌಕರನಿಗೆ ಸಾರಿಗೆ ಸಂಸ್ಥೆ ನಿಯಮದ ಪ್ರಕಾರ ಸಂಸ್ಥೆ ಕಡೆಯಿಂದ ನೀಡಲಾದ ಸೌಲಭ್ಯಗಳನ್ನು ವಾಪಸ್‌ ಪಡೆಯಬೇಕು. ಆದರೆ ಹಾಗೆ ಮಾಡದೆ ಡಿಸೆಂಬರ್‌ ಕೊನೆಯವರೆಗೂ ಪಾಸ್‌ ನೀಡಿದ್ದು ಸಂಸ್ಥೆಗೆ ಕಾನೂನಿಗೆ ವಿರುದ್ಧವಾಗಿದೆಯಲ್ಲ ಈ ಬಗ್ಗೆ ಮೊದಲೇ ಏಕೆ ಕ್ರಮ ಕೈಗೊಂಡಿಲ್ಲ, ಎಂದರೆ ಅಧಿಕಾರಿಗಳು ಕಾನೂನು ಬಾಹಿರವಾಗಿ ನೌಕರರ ವಜಾಗೊಳಿಸಿದ್ದೇವೆ ಎಂದು ಒಪ್ಪಿಕೊಂಡಂತಲ್ಲವೆ.

ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ವಜಾಗೊಳಿಸಿದ ಮರು ಕ್ಷಣವೆ ಎಲ್ಲ ಸೌಲಭ್ಯಗಳನ್ನು ಹಿಂಪಡೆದು ಸಂಸ್ಥೆಯ ನಿಯಮವನ್ನು ಪಾಲಿಸಬೇಕಿತ್ತು. ಅದನ್ನು ಮಾಡದೆ ಡಿಸೆಂಬರ್‌ ಕೊನೆಯವರಗೂ ಓಡಾಡುವುದಕ್ಕೆ ಪಾಸ್‌ ಕೊಟ್ಟು ಜನವರಿ 1ರಿಂದ ವಜಾಗೊಂಡ ನೌಕರರ ಬಸ್ ಪಾಸನ್ನು ರಿನೀವಲ್ ಮಾಡಿಕೊಡದಂತೆ ಆದೇಶ ಮಾಡುವ ಅಧಿಕಾರಿಗಳ ಇಂತಹ ಹಲವು ಬೇಜವಾಬ್ದಾರಿ ಕ್ರಮಗಳು ಸಾರಿಗೆ ಸಂಸ್ಥೆ ಸಕಲ ಸಂಪತ್ತನ್ನು ಕಬಳಿಸುವ ಪ್ರಯತ್ನವಾಗಿದೆ ಎಂದು ದೂರಿದ್ದಾರೆ.

ಇದಲ್ಲದೆ ಏಪ್ರಿಲ್‌ 7 ರಲ್ಲಿ ಪ್ರಾರಂಭವಾದ ಸಾರಿಗೆ ನೌಕರರ ಮುಷ್ಕರ ಸಂಬಂಧ ಕಾರ್ಮಿಕ ನ್ಯಾಯಾಲಯದಲ್ಲಿ ದೂರು ದಾಖಲಾಗಿರುವುದರಿಂದ ಈ ಸಮಯದಲ್ಲಿ ಯಾರ್ಯಾರು ತಪ್ಪು ಮಾಡಿರುವರೋ ಅವರ ತಪ್ಪಿಗೆ ತಕ್ಕಂತೆ ಶಿಕ್ಷೆ ವಿಧಿಸುತ್ತದೆ. ತಪ್ಪು ಮಾಡದೇ ಇದ್ದವರಿಗೆ ನಿರ್ದೋಷಿ ಎಂಬ ಆದೇಶ ಹೊರಬೀಳಲಿದೆ.

ಆದರೆ ಘನ ನ್ಯಾಯಾಲಯವು ಯಾರದು ತಪ್ಪು ಯಾರದು ಸರಿ ಎಂದು ತೀರ್ಪು ಕೈಗೊಳ್ಳುವ ಮುನ್ನವೇ ಮುಷ್ಕರದಲ್ಲಿ ಪಾಲ್ಗೊಂಡು ಅಥವಾ ಪಾಲ್ಗೊಳ್ಳದೇ ಕರ್ತವ್ಯಕ್ಕೆ ಗೈರಾದ ಬಹುತೇಕ ಸಾರಿಗೆ ನೌಕರರ ಬಳಿ ಒಂದು ದಿನಕ್ಕೆ ಎರಡು ನೂರು ರೂಪಾಯಿ ಅಂತೆ ಎಷ್ಟು ದಿನ ಗೈರು ಆಗಿರುವರೋ ಅಷ್ಟು ದಿನದ್ದೂ ಅವರವರ ಸಂಬಳದಲ್ಲಿ ಕಂತುಗಳ ಪ್ರಕಾರ ದಂಡದ ಹೆಸರಿನಲ್ಲಿ ಹಣವನ್ನು ವಸೂಲಿ ಮಾಡಿ ಮುಷ್ಕರದಲ್ಲಿ ಪಾಲ್ಗೊಂಡ ಕೆಲವು ಸಾರಿಗೆ ನೌಕರರನ್ನು ರಕ್ಷಣೆ ಮಾಡುವ ಮೂಲಕ ಮತ್ತು ಇನ್ನೂ ಕೆಲವು ನೌಕರರ ಮೇಲೆ ಕ್ರಮಕೈಗೊಳ್ಳುವ ಮೂಲಕ ಸಾರಿಗೆ ಸಂಸ್ಥೆಯ ನಿಯಮದ ವಿರುದ್ಧ ಕರ್ತವ್ಯ ನಿರ್ವಹಿಸಿ ಸಾರಿಗೆ ಸಕಲ ಸಂಪತ್ತನ್ನು ಕಬಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾರಿಗೆ ನೌಕರರ ವಜಾ ಪ್ರಕ್ರಿಯೆಯಲ್ಲಿ ತೊಡಗಿದ ಅಧಿಕಾರಿಗಳು ಸಾರಿಗೆ ಸಂಸ್ಥೆ ನೀಡಿದ ಅಧಿಕಾರವನ್ನು ತಮ್ಮ ತಮ್ಮ ಸ್ವಂತಃ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರ ಆಸ್ತಿಯಾದ ಬೆಂ.ಮ.ಸಾ.ಸಂಸ್ಥೆಯ ಸಕಲ ಸಂಪತ್ತನ್ನು ಸ್ವಂತ ಖಾಸಗೀ ಕಂಪನಿಯಂತೆ ವೈಯಕ್ತಿಕ ಲಾಭಕ್ಕಾಗಿ ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ.

ಇದರಿಂದ ಸಾರಿಗೆ ಸಂಸ್ಥೆಗೆ ಮತ್ತು ಸಾರ್ವಜನಿಕರಿಗೆ ಅನ್ಯಾಯವಾಗಿದೆ ಹಾಗಾಗಿ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಸಾರಿಗೆ ನೌಕರರ ಮುಷ್ಕರದ ವಿಷಯವಾಗಿ ವಜಾ ಪ್ರಕ್ರಿಯೆಯಲ್ಲಿ ತೊಡಗಿದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬಿಎಂಟಿಸಿ ವಜಾಗೊಂಡ ನೌಕರ ಗುಡ್ಡಪ್ಪ ಬಿ. ಎಸಿಬಿ ಕಚೇರಿಗೆ ದೂರು ನೀಡುವ ಮೂಲಕ ವಿನಂತಿಸದಿಕೊಂಡಿದ್ದಾರೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...