ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬನಶಂಕರಿ ಘಟಕ 20ರ ಚಾಲಕರೊಬ್ಬರು ಅಧಿಕಾರಿಗಳ ಕಿರುಕುಳದಿಂದ ಒತ್ತಡಕ್ಕೆ ಒಳಗಾಗಿದ್ದ ಚಾಲಕರೊಬ್ಬರಿಗೆ ಲಕ್ವ ಹೊಡೆದು ಹೃದಯಾಘಾತದಿಂದ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಪರುವಯ್ಯನ ಪಾಳ್ಯದ ಬಿಎಂಟಿಸಿ ಚಾಲಕ ಬಸವರಾಜು ಎಂಬುವರೆ ಹೃದಯಾಘಾತದಿಂದ ಮೃತಪಟ್ಟವರು.
ಕರ್ತವ್ಯಕ್ಕೆ ಬರಬೇಕಾದರೆ ಲಂಚಕೊಡಬೇಕು ಇಲ್ಲದಿದ್ದರೆ ರೂಟ್‌ಗಳನ್ನು ಕೊಡುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಳೆದ 2-3 ದಿನದ ಹಿಂದೆ ಬಸವರಾಜು ಸಂಬಂಧಿಗಳು ಕೂಡ ಡಿಪೋಗೆ ಬಂದು ಡಿಎಂ ಜತೆ ಮಾತನಾಡಿದ್ದರು ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಅಮೂಲ್ಯವಾದ ಜೀವಗಳು ಹೋಗುತ್ತಿವೆ. ಆದರೂ ಸರ್ಕಾರ ಈ ಬಗ್ಗೆ ಗಮನಹರಿಸದಿರುವುದು ನಾಚಿಕೆಗೇಡಿನ ಸಂಗತಿ.
ಕಳೆದ 24 ಗಂಟೆಯಲ್ಲಿ ಬಿಎಂಟಿಸಿಯಲ್ಲಿ ಅಧಿಕಾರಿಗಳ ಕಿರುಕುಳದಿಂದ ಮೂವರು ನೌಕರರು ಜೀವಕಳೆದು ಕೊಂಡಿದ್ದಾರೆ. ಆದರೂ ಈ ಬಗ್ಗೆ ಸಾರಿಗೆ ಸಚಿವರು ತುಟಿ ಬಿಚ್ಚದಿರುವುದಕ್ಕೆ ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಮೃತರ ಕುಟುಂಬಕ್ಕೆ ತಲಾ 50 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದು ಹೋರಾಟ ಮಾಡುತ್ತಿದ್ದಾರೆ.