ಬೆಂಗಳೂರು: ಕಳೆದ 24 ಗಂಟೆಯಲ್ಲಿ ಬಿಎಂಟಿಸಿಯ ಮೂವರು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಾರಿಗೆ ಸಂಘಟನೆಗಳ ಮುಖಂಡರು ಮತ್ತು ನೌಕರರು ಧರಣಿ ನಡೆಸುತ್ತಿದ್ದು, ಈ ಧರಣಿಗೆ ನಾವು ಬರಲು ಸಿದ್ದರಿದ್ದೇವೆ ಎಂದು ಕೆಕೆಆರ್ಟಿಸಿ ನೌಕರರು ಹೇಳುತ್ತಿದ್ದಾರೆ.
ಕೆಕೆಆರ್ಟಿಸಿ ನೌಕರರು ಹೇಳಿರುವುದು: ಸಾಮಾಜಿಕ ಜಾಲತಾಣಗಳಲ್ಲಿ ಬೀಗುವ ಮುಖಂಡರುಗಳೇ ದಯವಿಟ್ಟು ನಮ್ಮದೊಂದು ಮನವಿ. ನಿನ್ನೆದಿನ ಬೆಂಗಳೂರಿನ ಬಿಎಂಟಿಸಿ ಚನ್ನಸಂದ್ರ ಘಟಕದಲ್ಲಿ ಆತ್ಮ ಹತ್ಯೆ ಮಾಡಿ ಕೊಂಡಿರುವ ಚಾಲನಾ ಸಿಬ್ಬಂದಿಯ ಪರವಾಗಿ 50 ಲಕ್ಷ ರೂ. ಪರಿಹಾರ ಕೊಡಬೇಕೆಂದು ಕೆಲ ಧೀಮಂತ ಮುಖಂಡರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
ಆದ್ದರಿಂದ ಬೆಂಗಳೂರು ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸ್ಥಳೀಯ ಮತ್ತು ಸುತ್ತಮುತ್ತಲಿನ ಎಲ್ಲ ಮುಖಂಡರು ಮತ್ತು ಸ್ವಾಭಿಮಾನಿ ನೌಕರ ಬಂಧುಗಳು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ನೊಂದ ಕುಟುಂಬಗಳ ಪರವಾಗಿ ಧ್ವನಿ ಆಗಬೇಕು.
ಏಕೆಂದರೆ ಮುಂದೊಂದು ದಿನ ಈ ಚಾಲನಾ ಸಿಬ್ಬಂದಿಗಳ ಗತಿ ನಮಗೂ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇಂದೆ ಮುಗಿದರೆ ಪರವಾಗಿಲ್ಲ ಇಂದು ಸಂಜೆ ಮೇಲೆ ಮುಂದುವರಿದರೆ ಕಲ್ಯಾಣ ಕರ್ನಾಟಕ ಭಾಗದಿಂದ ನಾವು ಕೂಡ ಬಂದು ನಾಳೆ ಧರಣಿಯಲ್ಲಿ ಭಾಗವಹಿಸುತ್ತೇವೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.