ಪಿರಿಯಾಪಟ್ಟಣ: ಜೀವ ವಿಮಾ ಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಕರೆ ಮೇರೆಗೆ ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣ ಉಪಶಾಖೆಯ ಪ್ರತಿನಿಧಿಗಳು ಪಟ್ಟಣದ ಎಲ್‌ಐಸಿ ಕಚೇರಿ ಮುಂದೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಎನ್.ಎಚ್.ವಿಶ್ವನಾಥ್, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣ ಉಪಶಾಖೆಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಳಾಗಿದ್ದು ಸರಕಾರ ಜೀವ ವಿಮಾ ಪ್ರತಿನಿಧಿಗಳಿಗೆ ಕಲ್ಯಾಣ ನಿಧಿ ರಚಿಸುವುದು, ಗ್ರಾಚ್ಯುಟಿ ಹೆಚ್ಚಿಸುವುದು, ಎಲ್ಲ ಪ್ರತಿನಿಧಿಗಳಿಗೆ ಗುಂಪು ವಿಮೆ ಮೆಡಿಕಲ್ ಕ್ಲೈಮ್ ನೀಡಬೇಕು.
ವಿಮಾ ಪ್ರತಿನಿಧಿಗಳನ್ನು ವೃತ್ತಿಪರರು ಎಂದು ಗುರುತಿಸಬೇಕು. ಜನರು ಕಟ್ಟುವ ವಿಮಾಕಂತಿಗೆ ಜಿಎಸ್‌ಟಿ ತೆಗೆದು ಹಾಕಬೇಕು, ವಿಮಾ ಕಂತಿನ ಪಾವತಿ ವಿಳಂಬದ ಮೇಲಿನ ಶುಲ್ಕ ಕಡಿತ, ವಿಮಾ ಸಾಲದ ಮೇಲಿನ ಬಡ್ಡಿ ದರ ಕಡಿತ ಮಾಡುವುದು, ಪಾಲಿಸಿದಾರರ ಬೋನಸ್ ಹೆಚ್ಚಿಸುವುದರ ಮೂಲಕ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಎಂಬುವುದು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಿರ್ದೇಶಕರರಾದ ವರದರಾಜು, ಹರೀಶ್ ಬಿ.ಬಿ, ಕೆ.ಆರ್.ಅರವಿಂದ, ಚೆಲುವರಾಜು, ಟಿ.ಎನ್.ರಾಮಣ್ಣ, ಪಿ.ಸುರೇಶ್, ಅಭಿಲಾಷ, ಗೌತಮ್ಮ ಪಿ.ಎನ್., ತಿಮ್ಮಶೆಟ್ಟಿ, ಡಿ.ವಿ.ರುದ್ರಪ್ಪ, ದೊಡ್ಡಹೊನ್ನೇಗೌಡ, ಚಂದ್ರೇಗೌಡ, ಎಂ.ಎ.ಚಂದ್ರಶೇಖರ್, ನೀಲಕಂಠ ಸೇರಿದಂತೆ ಮತ್ತಿತರರು ಹಾಜರಿದ್ದರು.