ಬೆಂಗಳೂರು: ಹತ್ತು ದಿನಗಳಲ್ಲಿ ಆರು ಮಂದಿ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ 30ಕ್ಕೂ ಹೆಚ್ಚು ಸಾರಿಗೆ ನೌಕರರು ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರ ರಾಜೀನಾಮೆಗೆ ಆಗ್ರಹಿಸಿ ಸೆಪ್ಟೆಂಬರ್ 14ರ ಬುಧವಾರದಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ ಎಂದು ಪಕ್ಷದ ಮಾಧ್ಯಮ ವಕ್ತಾರ ಮೋಹನ್ ತಿಳಿಸಿದರು.
ಸಾರಿಗೆ ನೌಕರರೇ ಈ ನಿಗಮಗಳ ಅಧಿಕಾರಿಗಳು ಈ ಹಿಂದಿನಿದಲೂ ನಡೆಸುತ್ತಿರುವ ಸಭೆಗಳಿಂದ ನೌಕರರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಉದಾಹರಣೆಗೆ ಮುಷ್ಕರ ಸಂದರ್ಭದಲ್ಲಿ ಆಗಿದ್ದ ವಜಾ, ನೌಕರರನ್ನು ವಾಪಸ್ ಪಡೆಯಲು ಇನ್ನು ಮುಂದೆ ಯಾವುದೇ ಹೋರಾಟ ಮಾಡುವುದಿಲ್ಲ ಎಂದು ಮನವಿ ನೀಡಬೇಕಂತೆ ಮತ್ತು ಸಮಾನ ವೇತನ ವಿಷಯ ಹಾಗೂ ಪೊಲೀಸ್ ಪ್ರಕರಣಗಳ ವಿಷಯವಾಗಿ ಸರ್ಕಾರದ ಮೇಲೆ ಸಾರಿಗೆ ಸಚಿವರು ಸಚಿವರ ಮೇಲೆ ಸರ್ಕಾರ ಹೀಗೆ ವರ್ಗಾಯಿಸಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ನೌಕರರು ಕಿಡಿಕಾರುತ್ತಿದ್ದಾರೆ.
ನಂತರ ಭವಿಷ್ಯ ನಿಧಿ ಪ್ರಕಾರ ಪಿಂಚಣಿ ನೀಡುವ ವಿಚಾರವಾಗಿ ಮಾತ್ರ ಜಾರಿಗೊಳಿಸುವುದು ಎಂದು ತಿಳಿಸಿಸಿದ್ದಾರೆಯೇ ಹೊರತು ಇನ್ನುಳಿದ ಮುಷ್ಕರ ಸಂದರ್ಭದಲ್ಲಿ ಆಗಿರುವ ಯಾವುದೇ ವಿಷಯಕ್ಕೆ ನೌಕರರಿಗೆ ಒಳ್ಳೆಯ ವಿಷಯ ಏನು ಕೊಟ್ಟಿಲ್ಲ.
ಹೀಗಾಗಿ ಸರ್ಕಾರ ಇಲ್ಲಿಯ ತನಕ ಹಲವಾರು ಸಭೆಗಳನ್ನು ಮಾಡಿದೆ. ತಿಂಗಳಿಗೆ ಎರಡು ಮೂರು ಸಭೆಗಳನ್ನು ನಡೆಯುತ್ತಲೇ ಇದೆ. ಆದರೆ ನೌಕರರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಮಗ್ರ ವರದಿಯನ್ನು ಮಾಡುವ ಮೂಲಕ ಸತ್ಯವನ್ನು ಹೊರಗೆಳೆಯುತ್ತತಿರುವ ವಿಜಯಪಥ ನೌಕರರ ಪಾಲಿನ ದೀಪವಾಗಿದೆ. ಹೀಗಾಗಿ ವಿಜಯಪಥ ಸಂಪಾದಕರು ಮತ್ತು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದಿರುವ ನೌಕರರು, ಎಎಪಿ ಕರೆ ನೀಡಿರುವ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ಬೆಂಬಲಿಸೋಣ ಎಂದು ತಿಳಿಸಿದ್ದಾರೆ.