ಹನೂರು: ಗ್ರಾಮದಲ್ಲಿ ಸ್ಮಶಾನವಿಲ್ಲದ ಪರಿಣಾಮ ಶವಸಂಸ್ಕಾರ ಮಾಡಲು ಬಡಕುಟುಂಬವೂಂದು ಖಾಸಗಿ ಜಮೀನು ಮಾಲೀಕನಿಗೆ ಅಂಗಲಾಚಿ ಜೋಳದ ಫಸಲು ಕಟಾವು ಮಾಡಿ ಅಂತ್ಯಕ್ರಿಯೆ ಮಾಡಿದ ಪ್ರಸಂಗ ವಿ.ಎಸ್.ದೂಡ್ಡಿ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟ ಶೆಟ್ಟಿ ದೊಡ್ಡಿ, ಗ್ರಾಮದಲ್ಲಿ ಸೋಮವಾರದಂದು ರಾಚಶೆಟ್ಟಿ ಎಂಬಾತರೂ ಮೃತಪಟ್ಟಿದ್ದರು. ಗ್ರಾಮದಲ್ಲಿ ಸ್ಮಶಾನ ವಿಲ್ಲದ ಪರಿಣಾಮ ಈತನ ಕುಟುಂಬಸ್ಥರು ಖಾಸಗಿ ಜಮೀನಿನ ಮಾಲೀಕನಿಗೆ ಹಲವು ತಾಸುಗಳ ಕಾಲ ಅಂಗಲಾಚಿ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಅಂತಿಮವಾಗಿ ಮಾಲೀಕ ಹರೀಶ್ ಬಡ ಕುಟುಂಬಸ್ಥರ ಮನವಿಗೆ ಸ್ಪಂದಿಸಿ ತನ್ನ ಜಮೀನಿನಲ್ಲಿ ಬೆಳೆದಿದ್ದ ಜೋಳದ ಫಸಲನ್ನು ಕಟಾವು ಮಾಡಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಮಾಡಿಕೂಟ್ಟರು.
ಶಾಸಕರು ಮೂರು ಬಾರಿ ಗೆದ್ದರೂ ಸಹ ಸ್ಮಶಾನ ಮಂಜೂರಾತಿಗೆ ಕ್ರಮವಿಲ್ಲ: ಸುಮಾರು 400 ಕುಟುಂಬವಿರುವ ವಿ.ಎಸ್. ದೂಡ್ಡಿ ಗ್ರಾಮದಲ್ಲಿ ಸರ್ಕಾರಿ ಜಮೀನು ಇದ್ದರೂ ಸ್ಮಶಾನಕ್ಕೆ ಅವಕಾಶವಿಲ್ಲ ಹಲವಾರು ಬಾರಿ ಸ್ಮಶಾನ ಜಾಗ ಕೋರಿ ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ಶಾಸಕರಿಗೂ ಗ್ರಾಮಸ್ಥರು ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಅರಣ್ಯ ಪ್ರದೇಶದಲ್ಲಿ ಮೊದಲೆಲ್ಲ ಅಂತ್ಯಕ್ರಿಯೆ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಅರಣ್ಯಾಧಿಕಾರಿಗಳು ಅನುಮತಿ ನೀಡುತ್ತಿಲ್ಲ, ಅರಣ್ಯ ಪ್ರದೇಶ ಪ್ರವೇಶ ನಿರ್ಬಂಧಿಸಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಇತ್ತ ಗಮನಹರಿಸಿ ಇನ್ನಾದರೂ ವಿ.ಎಸ್.ದೂಡ್ಡಿ ಗ್ರಾಮಕ್ಕೆ ಸ್ಮಶಾನ ಮಂಜೂರು ಮಾಡುವುದೇ ಎಂಬುದನ್ನು ಇನ್ನೂ ಕಾದು ನೋಡಬೇಕಾಗಿದೆ.