Wednesday, October 30, 2024
NEWSನಮ್ಮಜಿಲ್ಲೆನಮ್ಮರಾಜ್ಯ

ವೇತನ ಆಯೋಗ ಬೇಕು, ಸರಿಸಮಾನ ಪಗಾರ ಬೇಕು, ಅಗ್ರಿಮೆಂಟ್‌ ನಮಗೆ ಬೇಡವೇ ಬೇಡ..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ಈ ಹಿಂದೆ ಕೈಗೊಂಡ ಮುಷ್ಕರದ ಸಂದರ್ಭದಲ್ಲಿ ಆಗಿರುವಂತಹ  ವಜಾ, ವರ್ಗಾವಣೆ, ಅಮಾನತು ಮತ್ತು ಪೊಲೀಸ್ ಪ್ರಕರಣಗಳು, ಮತ್ತಿತರೆ ತೊಂದರೆಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳ ಹತ್ತಿರ ಸುದೀರ್ಘವಾಗಿ ನಾವು ಮಾತುಕತೆ ನಡೆಸಿದ್ದೇವೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ವೇಳೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದು, ಮನವಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಒಂದಷ್ಟು ದಿನಗಳಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು.

ಕೂಟದ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಮತ್ತು ಸಾರಿಗೆ ಸಚಿವರ ಭರವಸೆಗೆ ಮನ್ನಣೆ ಕೊಟ್ಟು, ಇಷ್ಟು ದಿನ ಕಾದು ನಮ್ಮ ಎಲ್ಲ ನೌಕರರನ್ನು ಮನವೊಲಿಸಿ ಕೊಂಡು ಬಂದಿದ್ದೇವೆ. ಆದರೆ ಈಗ ವಜಾಗೊಂಡು 19 ತಿಂಗಳು ಮುಗಿಯುತ್ತಾ ಬಂದಿದೆ. ಹಾಗಾಗಿ ನಮ್ಮ ನೌಕರರ ಸುರಕ್ಷತೆ ಗೋಸ್ಕರ ಈ ಸೈಕಲ್‌ ಜಾಥಾ ಇದು ಸರ್ಕಾರದ ವಿರುದ್ಧ ಅಲ್ಲ ನಮ್ಮ ನೌಕರರ ಭವಿಷ್ಯಕ್ಕಾಗಿ.

ಈ ವಿಚಾರವಾಗಿ  ಕೇಲವೊಬ್ಬರು ಬೇರೆ ಬೇರೆ ರೂಪ ಕೊಟ್ಟು ಬೇರೆ  ಲೇಪನಹಚ್ಚಿ ನೌಕರರ ದಿಕ್ಕು ತಪ್ಪಿಸುವಂತಾ ಎಲ್ಲ ಕೆಲಸ  ಮಾಡುತ್ತಿರುವುದು ತುಂಬಾ  ನೋವಿನ ಸಂಗತಿ. ಇಂತಹ ಪರಿಸ್ಥಿತಿಯಲ್ಲೂ ನೌಕರರ ಹಿತ  ಬಯಸದೆ ತಮ್ಮ  ಸ್ವ ಹೀತಾಸಕ್ತಿಗಾಗಿ  ಪರಿಸ್ಥಿತಿಯ ಲಾಭ ಪಡೇಯಲಿಕ್ಕೆ ಹೊರಟಿರುವ ಕೆಲವು  ಮುಖಂಡರು ತಮ್ಮ ಬೇಳೆ ಬೆಯಿಸಿಕೊಳ್ಳಲಿಕ್ಕೆ ಹಲವಾರು ಪ್ರಯತ್ನ ಮಾಡುತ್ತಿರುವುದು, ಒಳ್ಳೆಯ ಬೇಳವಣಿಗೆಯಲ್ಲಾ!

ಸಂದರ್ಭದಲ್ಲಿ ನೌಕರರ  ಸುರಕ್ಷತೆಯ  ದೃಷ್ಟಿಕೋನದಿಂದ  ನಾವು ಲೇಬರ್ ಕೋರ್ಟ್ ನಲ್ಲಿ  ಪ್ರಕರಣವನ್ನೂ ದಾಖಲಿಸಿದ್ದೇವೆ. ಆ ವೇಳೆ ವಕೀಲರಿಗೆ ಕೊಡುವಂಥ ಮೊತ್ತದ ವಿಚಾರವಾಗಿಯೂ ನಮ್ಮ ವಿರುದ್ಧ ಅಪಪ್ರಚಾರ ನಡೆಯಿತು. ಹಾಗಾಗಿ ಅಂದು ನಿಮಗೆ ನಂಬಿಕೆ ಇದ್ದರೆ ನಮಗೆ ಸಹಕಾರ ಕೊಡಿ ಇಲ್ಲವಾದರೆ ನಿಮ್ಮ ವೈಯಕ್ತಿಕವಾಗಿ ನೀವು ಪ್ರಕರಣಗಳನ್ನು ದಾಖಲಿಸಿ. ಇದು ಬಲವಂತ ಏನೂ ಇಲ್ಲ ಎಂದು ಕೂಟ ಹೇಳಿದ್ದರು.

ಅದನ್ನೇ ಕಾರಣವಾಗಿಟ್ಟುಕೊಂಡು ಅಂದು ಕೆಲವೊಂದು ಸಂಘಟನೆಗಳು ಕೂಟದವರು ಹಣ ಮಾಡುವುದಕ್ಕೆ ಹೊರಟಿದ್ದಾರೆ. ಅನ್ನುವಂತಹ ಆರೋಪಗಳನ್ನು ಮಾಡಿದ್ದರು.  ಸ್ನೇಹಿತರೆ ಇವತ್ತು ಮಾತಾಡೋ ಎಲ್ಲ ನಾಯಕರೂ ಕೊರೊನಾಕ್ಕೆ ಹೆದರಿ ಮನೆಯಿಂದ ಹೊರಗಡೆ ಬಾರದೆ ಅಡಗಿ ಕುಳಿತುಕೊಂಡಿದ್ದರು.

ಕೂಟದ ಪದಾಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಓಡಾಡಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ದರು. ಈಗಲೂ ತಾವೆಲ್ಲರೂ ಗಮನಿಸಬಹುದು  ಕೂಟದ ಪದಾಧಿಕಾರಿಗಳು ನಿಮ್ಮಲ್ಲಿ ಕೇಳಿಕೊಳ್ಳುವುದಷ್ಟೇ ನಿಮ್ಮಿಂದ ಹಣ ಸಂಗ್ರಹಣೆ ಮಾಡಿ ನಿಮ್ಮನ್ನು ಸುಲಿಗೆ ಮಾಡುವಂತಹ ಕೆಲಸಕ್ಕೆ ಯಾರೂ ಸಹ ಇಳಿದಿರುವುದಿಲ್ಲ.

ನೌಕರರ ಭವಿಷ್ಯದ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ ಇಲ್ಲ  ಹಾಗಾಗಿ ನಮ್ಮ ನೌಕರರ  ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂಬ ದೃಷ್ಟಿಯಿಂದ ಕೊನೆಯದಾಗಿ ಈ ಸೈಕಲ್‌ ಜಾಥಾ ಇದಕ್ಕೆ ಸರ್ಕಾರ ಮಣಿಯಲೇ ಬೇಕು. ಆದರೆ, ಕೂಟದಲ್ಲಿ ಇಷ್ಟು ದಿನ ಕಷ್ಟ ಬಿದ್ದು ಎಲ್ಲ ವಿಚಾರದಲ್ಲೂ ನಿಮಗೆಲ್ಲ ಸಹಕಾರ ಕೊಟ್ಟು ನಿಮ್ಮ ಏಳಿಗೆಗಾಗಿ ದುಡಿದಿರುವಂತಹ ಕೂಟದ ಧ್ಯೇಯೋದ್ದೇಶಗಳಿಗೆ  ಧಕ್ಕೆ ತರುವಂತಹ ಕಾರ್ಯವನ್ನು ನೀವು ಯಾರೂ ಸಹ ಮಾಡಬಾರದೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ಈ ಹಿಂದೆ ಅಗ್ರಿಮೆಂಟ್‌ ಬೇಡ ಸಮಾನ ವೇತನ ಬೇಕು ಎಂಬ ಕೂಗು ಸಾರಿಗೆ ಸಂಘಟನೆಗಳ ಜಂಟಿ ಸಮಿತಿಯಲ್ಲಿ ಕೇಳಿ ಬಂದಿದ್ದು, ಗದ್ದಲದ ನಡುವೆ ಕೂಟದ ಪದಾಧಿಕಾರಿಗಳು ಹೊರ ಬಂದ ಘಟನೆಯೂ ನಡೆಯಿತು.

ಆ ವೇಳೆ ನಮಗೆ 4 ವರ್ಷಕ್ಕೊಮ್ಮೆ ಅಗ್ರಿಮೆಂಟ್‌ ಎಂಬ ಭೂತದ ಹೆಸರೇಳಿಕೊಂಡು ನೌಕರರನ್ನು ವಜಾ, ವರ್ಗಾವಣೆ ಮತ್ತು ಅಮಾನತು ಮಾಡುವುದರಿಂದ ನಾವು ಈಗಾಗಲೇ ಬೇಸತ್ತಿಹೋಗಿದ್ದೇವೆ ಆದ್ದರಿಂದ ಅಗ್ರಿಮೆಂಟ್‌ ಬೇಕು ಎಂದರೆ ನಾವು ಅದನ್ನು ಒಪ್ಪುವುದಿಲ್ಲ ಎಂದು ಕೂಟದ ಪದಾಧಿಕಾರಿಗಳು ಹೊರ ಬಂದಿದ್ದರು.

ಹಾಗಿದ್ದರೆ ನೀವು ಜಂಟಿ ಸಮಿತಿಯಿಂದ ಹೊರಹೋಗಬಹುದು ಎಂದು ಉಳಿದ ಕೆಲ ಸಂಘಟನೆಗಳ ಪದಾಧಿಕಾರಿಗಳು ಸಲಹೆ ನೀಡಿದ್ದರು. ಅದರಿಂದ ಕೂಟದ ಪದಾಧಿಕಾರಿಗಳು ಅಗ್ರಿಮೆಂಟ್‌ ವಿರೋಧಿ ಹೊರ ನಡೆದರು. ಈಗಲೂ ನಾವು ಅದಕ್ಕೆ ಬದ್ದರಾಗಿದ್ದೇವೆ. ನಮಗೆ ಅಗ್ರಿಮೆಂಟ್‌ ಬೇಡ ವೇತನ ಆಯೋಗ ಬೇಕು. ಸಮಾನ ವೇತನ ಬೇಕು ಎಂಬುವುದೆ ನಮ್ಮ ಅಚಲ ನಿಲುವು. ಇದರಲ್ಲಿ ರಾಜಿ ಇಲ್ಲ ಎಂದು ಕೂಟದ ಪದಾಧಿಕಾರಿಗಳು ಹೇಳಿದ್ದಾರೆ.

Leave a Reply

error: Content is protected !!
LATEST
ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ... KSRTC ಬಸ್‌ ಫುಟ್‌ಬೋರ್ಡ್‌ ಮೇಲೆ ಪ್ರಯಾಣಿಸಿದ್ದು ಜನರು - ಆದರೆ 500 ರೂ. ದಂಡ ಕಟ್ಟಿದ್ದು ಮಾತ್ರ ನೌಕರ!! BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ - ಸಂಸ್ಥೆ ಬಸ್‌ಗಳ ಕಾರ್ಯಾಚರಣೆ  ಬಿಎಂಟಿಸಿಯ ಉತ್ತಮ ಸೇವೆಗೆ ಸಂದ Award of Excellence ರಾಷ್ಟ್ರೀಯ ಪ್ರಶಸ್ತಿ: ನೌಕರರಿಗೆ ಅರ್ಪಿಸಿದ ಎಂಡಿ ರಾಮಚಂದ್ರನ್ BMTC ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಡಿಪೋ 30ರಲ್ಲಿ ಬಸ್‌ ತೆಗೆಯದೇ ಚಾಲಕರ ಪ್ರತಿ... BMTC: ಸೈಡ್‌ಗಾಗಿ ಹಾರನ್‌ ಮಾಡಿದಕ್ಕೇ ಚಾಲಕ, ನಿರ್ವಾಹಕರಿಗೆ ಹೊಡೆದು ಕಿಡಿಗೇಡಿಗಳು ಪರಾರಿ