ಶಿರಸಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ವಿಭಾಗದ ಭಟ್ಕಳ ಘಟಕದ, ಘಟಕ ವ್ಯವಸ್ಥಾಪಕ ದಿವಾಕರ್ ಅವರು ಘಟಕದಲ್ಲಿ ಕಾರ್ಮಿಕರಿಂದ ಹಪ್ತ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪ ನೌಕರರಿಂದ ಕೇಳಿ ಬರುತ್ತಿದೆ.
ಇನ್ನು ರಜೆ , ಡ್ಯೂಟಿ ಎಲ್ಲದರಲ್ಲೂ ಇವರಿಗೆ ಲಂಚ ಕೊಡ್ಬೇಕು.40 -50 ಜನ ಕಾರ್ಮಿಕರ ಒಂದೊಂದು ಗುಂಪು ಮಾಡಿಕೊಂಡು ಆ ಗುಂಪಿಗೆ ಅವರ ಚೇಲಗಳನ್ನ ನೇಮಿಸಿದ್ದಾರೆ. ಆ ಚೇಲಗಳು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಅಂತೆ ನೌಕರರಿಂದ ವಸೂಲಿ ಮಾಡಿ ಘಟಕ ವ್ಯವಸ್ಥಾಪಕರಿಗೆ ಕೊಡುತ್ತಿದ್ದಾನೆ ಎಂಬ ದೂರು ಕೇಳಿ ಬಂದಿದೆ.
ಇನ್ನು ಯಾರ್ಯಾರು ಹಣ ಕೊಟ್ಟಿದಾರೋ ಅವರಿಗೆ ಅವರ ಕೋಟಾದಲ್ಲಿ ರಜೆ ಮಂಜೂರು ಆಗುತ್ತೆ. ಮತ್ತೆ ಅವರಿಗೆ ಒಳ್ಳೆಯ ಡ್ಯೂಟಿ ಸಿಗುತ್ತೆ. ಹಣ ಕೊಡದ ಕಾರ್ಮಿಕರಿಗೆ ವಿಪರೀತ ಕಿರುಕುಳ ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡೋಕ್ಕೆ ಅಂತಾನೆ ಡ್ಯೂಟಿ ರೋಟೇಷನ್ ಪದ್ಧತಿ ತಂದಿದ್ದಾರೆ. ಆದರೆ ಭಟ್ಕಳ ಘಟಕದಲ್ಲಿ ಇದು ಯಾವುದು ಚಾಲನೆಯಲ್ಲಿ ಇಲ್ಲ. ಡ್ಯೂಟಿ ರೋಟೇಷನ್ ಅಲ್ಲಿ ಡ್ಯೂಟಿ ಕೊಡಬೇಕಿದ್ದರೂ ಅಂಥವರಿಗೆ ಡ್ಯೂಟಿ ಕೊಡದೆ ಅವರ ಚೇಲಗಳಿಗೆ ಬೇಕಾದ ಡ್ಯೂಟಿ ಕೊಡ್ತಿದ್ದಾರೆ ಎಂದು ದೂರಿದ್ದಾರೆ.
ಲಂಚ ಕೊಡದವರಿಗೆ ವಿಪರೀತ ಬೈಗುಳ, ಕಿರುಕುಳ ಕೊಡ್ತಿದ್ದಾರೆ. ಇವರ ವರ್ತನೆಯಿಂದ ಅಮಾಯಕ ಕಾರ್ಮಿಕರು ತುಂಬಾ ಕಷ್ಟ ಪಡುತಿದ್ದಾರೆ. ಇದರ ಬಗ್ಗೆ ಮೇಲಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಇವರು ತಮಗೆ ಇಷ್ಟ ಬಂದ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಿ ಸೀನಿಯಾರಿಟಿ ಆಧಾರದ ಮೇಲೆ ಕೆಲಸ ಮಾಡಲು ಕ್ರಮ ಕೈಗೊಳ್ಳಬೇಕು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ಭಟ್ಕಳ ಘಟಕದಲ್ಲಿ ನಡೆಯುತ್ತಿರುವ ನೌಕರರ ಮೇಲಿನ ದೌರ್ಜನ್ಯವನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭರತ್ ಎಸ್. ಅವರು ಘಟಕ ವ್ಯವಸ್ಥಾಪಕ ದಿವಾಕರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.
ತಾರತಮ್ಯತೆ ಬಗ್ಗೆ ನೌಕರರು ವಿವರ ನೀಡಿದ್ದು, ಟೋಕನ್ ನಂಬರ್ 1470 D/C ಇವರು ರೋಟೇಷನ್ 78 ಮಾಡಬೇಕಿರುವುದು. ಆದರೆ, ಫಿಕ್ಸ್ ಮಾಡೋದು ಬಾಗಲಕೋಟ Rotaion . ಅದು ಕೂಡ ಕಳೆದ 2 ವರ್ಷದಿಂದ ಇದನ್ನೇ ಮಾಡುತ್ತಿದ್ದಾರೆ.
ಇನ್ನು ಟೋಕನ್ ನಂಬರ್ 1744 D/C ಇವರು ಹಿರಿತನದಲ್ಲಿ (Senority) ಬಾಗಲಕೋಟ ಡ್ಯೂಟಿ ತಗೊಂಡಿದ್ದಾರೆ. ಆದರೆ ಇವರದು ಗದಗ ವಿಭಾಗಕ್ಕೆ ವರ್ಗಾವಣೆ ಆಗಿದೆ. ಆದರೆ ಆ ಕೆಲಸವನ್ನು spare ಅಲ್ಲಿ ಇರೋರ್ಗೆ ಕೊಡೋದು ಬಿಟ್ಟು ಬೇರೆ ಯಾರಿಗೋ ಫಿಕ್ಸ್ ಮಾಡುತ್ತಿದ್ದಾರೆ.
ಟೋಕನ್ ನಂಬರ್ 1228D ಇವರದು ROTATION ಕುಮಟಾ CITY 68/69 OR 15/16 ಇದೆ. ಆದರೆ ಇವರು ಮಾಡೋ ಕೆಲಸ ಬೇರೆ. ಟೋಕನ್ ನಂಬರ್ 2528 ಇವರು Spare Conductor ಆದರೆ ಬಹುತೇಕ ಬೆಂಗಳೂರು ಡ್ಯೂಟಿನೇ ಇವರಿಗೆ ಕೊಡುತ್ತಾರೆ.
ಟೋಕನ್ ನಂಬರ್ 1228 D/C, 1413D/C ಇವರದು SENARITYಯಲ್ಲಿ ತಗೊಳೋ ಡ್ಯೂಟಿ. ಆದರೆ ಇವರು ಮಾಡೋ ಡ್ಯೂಟಿನೆ ಬೇರೆ. ಟೋಕನ್ ನಂಬರ್ 2577C ಇವರದು Rotation SENARITY duty ಇಲ್ಲ off relaver duty single maadodu baar duty.
ಇನ್ನು ಟೋಕನ್ ನಂಬರ್ 1439D/C ಇವರಿಗೆ senarity ಪ್ರಕಾರ duty ಹಾಕ್ತಾಯಿಲ್ಲ
1470D/C
1228D/C
1228D
1413D/C
2528C
2577C
1439D/C
ಇವರು ಟಾಪ್ ಅಲ್ಲಿ ಇದ್ದಾರೆ. SENARITY ಪ್ರಕಾರ Duty ಮಾಡುತ್ತಿಲ್ಲ. ಹೀಗೆ ತಮಗೆ ಬೇಕಾದವರಿಗೆ ಅಂದರೆ ಮಂತ್ಲಿ ಕೊಟ್ಟವರಿಗೆ ಒಂದು ರೀತಿ ಕೊಡದವರಿಗೆ ಒಂದು ರೀತಿ ಎಂಬಂತೆ ಘಟಕದಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವ ಮೂಲಕ ನೌಕರರು ನೆಮ್ಮದಿಯಿಂದ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ನೊಂದ ನೌಕರರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.