ಕೃಷಿನಮ್ಮರಾಜ್ಯ

ರೈತರ ಹೋರಾಟ ತೀವ್ರಗೊಳಿಸಲು ರಾಷ್ಟ್ರೀಯ ರೈತ ಮುಖಂಡರ ಮಹತ್ವದ ಸಭೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕನೌರಿ ಗಡಿಯಲ್ಲಿ (ಹರಿಯಾಣ – ಪಂಜಾಬ್ ಗಡಿ) MSP ಖಾತರಿ ಕಾನೂನಿಗಾಗಿ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲ್ ಅವರು ಕಳೆದ 110 ದಿನಗಳಿಂದ ಉಪವಾಸ ಸತ್ಯಾಗ್ರ ಮಾಡುತ್ತಿದ್ದು, ಅದನ್ನು ಇನ್ನಷ್ಟು ತೀವ್ರಗೊಳಿಸಲು ಬೆಂಗಳೂರಿನಲ್ಲಿ ರೈತರ ಮಹತ್ವದ ಸಭೆ ಇಂದು ನಡೆಯಿತು.

SKM  ರಾಜಕೀಯೇತರ ಸಂಘಟನೆಯ ರಾಷ್ಟ್ರೀಯ ರೈತ ಮುಖಂಡಗಳ ನಿಯೋಗವು ಬೆಂಗಳೂರಿಗೆ ಭೇಟಿ ನೀಡಿ ಗಾಂಧಿ ಭವನದಲ್ಲಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ  ಕಬ್ಬು ಬೆಳೆಗಾರರ ಸಂಘದ ರಾಜ್ಯ ಮಟ್ಟದ ಸಮಿತಿಯನ್ನು ಭೇಟಿ ಮಾಡಿ ನಡೆಯುತ್ತಿರುವ ರೈತ ಚಳವಳಿಯನ್ನು ಬಲಪಡಿಸುವ ಕಾರ್ಯತಂತ್ರವನ್ನು ರೂಪಿಸಿತು.

ಫೆಬ್ರವರಿ 14 ರಂದು ಕೇಂದ್ರ ಸರ್ಕಾರದ ಮಂತ್ರಿಗಳೊಂದಿಗೆ ರೈತ ನಿಯೋಗ ಸಭೆಯಲ್ಲಿ ಭಾಗವಹಿಸಲು ಚಂಡೀಗಢಕ್ಕೆ ಹೋಗುವಾಗ ಅಪಘಾತಕ್ಕೀಡಾದ ಕುರುಬೂರು ಶಾಂತಕುಮಾರ್ ಅವರ ಆರೋಗ್ಯವನ್ನು ನಿಯೋಗ ಪರಿಶೀಲಿಸಿತು.

ರೈತ ನಾಯಕ ಕುರುಬೂರು ಶಾಂತಕುಮಾರ್‌ಅವರು ರೈತರಿಗೆ ಭಾವನಾತ್ಮಕ ಸಂದೇಶವನ್ನು ನೀಡಿ “ನೀವು ನನ್ನ ಆರೋಗ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ ಮತ್ತು ಬದಲಾಗಿ MSP ಖಾತರಿ ಕಾನೂನಿಗಾಗಿ ನಡೆಯುತ್ತಿರುವ ಈ ಆಂದೋಲನವನ್ನು ಬಲಪಡಿಸಲು ನೀವೆಲ್ಲರೂ ಹಗಲು ರಾತ್ರಿ ಕೆಲಸ ಮಾಡಬೇಕು” ಎಂದು ಹೇಳಿದರು.

ಫೆಬ್ರವರಿ 14 ಮತ್ತು 22 ರಂದು ಕೇಂದ್ರ ಸರ್ಕಾರದ ಸಚಿವರೊಂದಿಗೆ ನಡೆದ ಕಳೆದ ಎರಡು ಸಭೆಗಳಲ್ಲಿ, ನಮ್ಮ ನಿಯೋಗವು MSP ಖಾತರಿ ಕಾನೂನನ್ನು ಬಲವಾಗಿ ಒತ್ತಾಯಿಸಿತು ಮತ್ತು MSP ಖಾತರಿ ಕಾನೂನನ್ನು ಬೆಂಬಲಿಸುವ ಬಲವಾದ ಸಂಗತಿಗಳನ್ನು ಮಂಡಿಸಿತು ಎಂದು ರೈತ ಮುಖಂಡರು ಹೇಳಿದರು.

ಕೇಂದ್ರ ಸರ್ಕಾರದ ಸಚಿವರು ಮತ್ತು SKM (ರಾಜಕೀಯೇತರ) ಮತ್ತು KMM ನ ರೈತ ನಿಯೋಗದ ನಡುವಿನ ಮುಂದಿನ ಸುತ್ತಿನ ಸಭೆ ಮಾರ್ಚ್ 19 ರಂದು ಚಂಡೀಗಢದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಇನ್ನು ಬೆಂಗಳೂರಿನ ಗಾಂಧಿ ಭವನಕ್ಕೆ ಬಂದಿದ್ದ ಹಲವಾರು ಜಿಲ್ಲೆಯ ರೈತ ಮುಖಂಡರ ಕೋರಿಕೆಯ ಮೇರೆಗೆ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರನ್ನು ಆಸ್ಪತ್ರೆಯಿಂದ ಅಂಬ್ಯುಲೆನ್ಸ್  ಮೂಲಕ ಕರೆತಂದು ರೈತ ಮುಖಂಡರನ್ನು ಭೇಟಿ ಮಾಡಿಸಿ ಅವರ ಆರೋಗ್ಯದ ಬಗ್ಗೆ ತಿಳಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮುಖಂಡರಾದ ಅಭಿಮನ್ಯು ಕೋಹರ್, ಲಕ್ವಿಂದರ್ ಸಿಂಗ್,ಕಾಕಾಸಿಂಗ್, ಕೊತ್ವಾ ಸುಖಜಿತ್ ಸಿಂಗ್, ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ  ಬಲ್ಲೂರು ರವಿಕುಮಾರ್,ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಕೋ ಪಾಟೀಲ್, ರಾಜ್ಯ ಹಸಿರು ಸೇನೆ ಅಧ್ಯಕ್ಷ ಕರಬಸಪ್ಪಗೌಡ, ಧಾರವಾಡ ಮಹೇಶ್ ಬೆಳಗಾಂವ್ಕರ್, ಗುಲ್ಬರ್ಗ ರಮೇಶ್ ಹೂಗಾರ್, ಚಿಕ್ಕಬಳ್ಳಾಪುರ ಶ್ರೀನಿವಾಸಲು, ಬಳ್ಳಾರಿ ಜಿ.ವಿ.ಲಕ್ಷ್ಮೀದೇವಿ, ಹಾಸನ ಧರ್ಮದಾಜ್, ದಾವಣಗೆರೆ ಅಂಜನಪ್ಪ ಪೂಜಾರ್, ರಾಯಚೂರು  ಶಿವಾರ್ಜುನ ನಾಯಕ್, ಯಾದಗಿರಿ ನರಸರೆಡ್ಡಿ ಪೊಲೀಸ್ ಪಾಟೀಲ್, ಚಾಮರಾಜನಗರ ಮೂಕಹಳ್ಳಿ ಮಹದೇವಸ್ವಾಮಿ, ಮೈಸೂರು ಅತ್ತಹಳ್ಳಿ ದೇವರಾಜ್, ತುಮಕೂರು ಜಿಲ್ಲೆಯ ಶಿವಕುಮಾರ್, ಶಾಂತಕುಮಾರಿ ನೆಲಮಂಗಲ, ಬರಡಾನಪುರ ನಾಗರಾಜ್ ಭಾಗವಹಿಸಿದ್ದರು.

Deva
the authorDeva

Leave a Reply

error: Content is protected !!
Latest news
KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ ಕಾಂಗ್ರೆಸ್​​ ಹಿರಿಯ ನಾಯಕ ಮಾಜಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ನಿಧನ ಕಾರಿನ ಟೈಯರ್ ಸ್ಫೋಟಗೊಂಡು ಲಾರಿಗೆ ಡಿಕ್ಕಿ: ಕಾರಿನಲ್ಲಿದ್ದ ಐವರು ಸ್ಥಳದಲ್ಲೇ‌ ಮೃತ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌